ಕೆಜಿಎಫ್ ಮತ್ತು ಸಲಾರ್ ಸಿನಿಮಾ ಯಶಸ್ಸಿನಲ್ಲಿರುವ ನಿರ್ದೇಶಕ ಪ್ರಶಾಂತ್ ನೀಲ್ ಈಗ ಮತ್ತೊಂದು ಮೆಗಾ ಬಜೆಟ್ ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರೆ.
ಕನ್ನಡ, ತೆಲುಗು ಸಿನಿಮಾಗಳ ಬಳಿಕ ಈಗ ತಮಿಳಿನ ಸ್ಟಾರ್ ನಟ ಅಜಿತ್ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಅಜಿತ್ ಅವರನ್ನು ಭೇಟಿಯಾಗಿ ಪ್ರಶಾಂತ್ ನೀಲ್ ಕಥೆ ಹೇಳಿದ್ದಾರೆ. ಅವರು ಹೆಣೆದಿರುವ ಕಥೆ ಅಜಿತ್‌ಗೂ ಕೂಡ ಇಷ್ಟವಾಗಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಹೆಸರಾಂತ ನಟ-ನಿರ್ದೇಶಕರು ಎರಡು ಸಿನಿಮಾಗಳಲ್ಲಿ ಕೆಲಸ ಮಾಡಲು ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರಗಳನ್ನು ದಕ್ಷಿಣದ ಹೆಸರಾಂತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಲಿದ್ದಾರೆ. ಸಲಾರ್ 2 ನಂತರ ಪ್ರಶಾಂತ್ ಅವರು ಅಜಿತ್‌ಗಾಗಿ ಸತತ ಎರಡು ಚಿತ್ರಗಳನ್ನು ನಿರ್ದೇಶಿಸಲು ರೆಡಿಯಾಗಿದ್ದಾರೆ.
ವರದಿಗಳ ಪ್ರಕಾರ, ಕಳೆದ ತಿಂಗಳು 'ವಿದಾಮುಯಾರ್ಚಿ' ಸಿನಿಮಾ ಶೆಡ್ಯೂಲ್ ಬ್ರೇಕ್ ಸಮಯದಲ್ಲಿ ಅಜಿತ್ ಮತ್ತು ಪ್ರಶಾಂತ್ ಭೇಟಿಯಾಗಿದ್ದರು. ಕೆಜಿಎಫ್ ನಿರ್ದೇಶಕರು ಅಜಿತ್ ಬಳಿ ಮೂರು ವರ್ಷಕ್ಕಿಂತ ಹೆಚ್ಚಿನ ಸಮಯ ಕೋರಿದ್ದರು. ಈ ಜೋಡಿ ಕಾಂಬಿನೇಶನ್ನಲ್ಲಿ ಮೊದಲು ಎಕೆ 64 (ತಾತ್ಕಾಲಿಕ ಶೀರ್ಷಿಕೆ) ಬರಬಹುದು. 2025ರಲ್ಲಿ ಸೆಟ್ಟೇರಿ, 2026ರಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಅದಾಗ್ಯೂ, ಅವರ ಎರಡನೇ ಸಿನಿಮಾ ಎಕೆ 65 ಅಥವಾ 66 (ಯಾವುದನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಾರೆಂಬುದು ಇನ್ನಷ್ಟೇ ತಿಳಿಯಬೇಕಿದೆ) ರಲ್ಲಿ ಪ್ರಶಾಂತ್ ನೀಲ್ ತಮ್ಮದೇ ಸಿನಿಮ್ಯಾಟಿಕ್ ಯೂನಿವರ್ಸ್ ರಚಿಸಲಿದ್ದಾರಂತೆ.
ಇನ್ನೂ ಕೆಲ ವರದಿಗಳ ಪ್ರಕಾರ, ಈ ಮೇಲಿನ ಎರಡು ಚಿತ್ರಗಳಲ್ಲಿ ಒಂದರ ಕ್ಲೈಮ್ಯಾಕ್ಸ್ ಕೆಜಿಎಫ್ 3ಗೆ ನಾಂದಿ ಹಾಡಲಿದೆ.ಮುಂಬರುವ 'ಕೆಜಿಎಫ್'ನಲ್ಲಿ ಅಜಿತ್ ಮತ್ತು ಯಶ್ ಸ್ಕ್ರೀನ್ ಹಂಚಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಎಲ್ಲದಕ್ಕೂ ಅಧಿಕೃತ ಘೋಷಣೆ ಬರಬೇಕಿದ್ದು, ಮುಂದಿನ ವರ್ಷಾರಂಭ ಆಗುವ ನಿರೀಕ್ಷೆಗಳಿವೆ.
ಸದ್ಯ ಪ್ರಶಾಂತ್ ನೀಲ್ ಜ್ಯೂ.ಎನ್‌ಟಿಆರ್ ಜೊತೆಗಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಅಜಿತ್ ಕುಮಾರ್, ‘ವಿದಾ ಮುಯರ್ಚಿ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಎರಡು ಪಾಜೆಕ್ಟ್‌ಗಳ ನಂತರ ಪ್ರಶಾಂತ್ ಮತ್ತು ಅಜಿತ್ ಕುಮಾರ್ ಹೊಸ ಸಿನಿಮಾ ಶುರುವಾಗಲಿದೆ.