ವಸಿಷ್ಠ ಸಿಂಹ 
ಸಿನಿಮಾ ಸುದ್ದಿ

ಪ್ರತಿ ಬಾರಿ ತೆರೆ ಮೇಲೆ ಕಾಣಿಸಿಕೊಂಡಾಗ ನನ್ನನ್ನು ನಾನು ಸಾಬೀತುಪಡಿಸಿಕೊಳ್ಳಲು ಇಷ್ಟಪಡುತ್ತೇನೆ: ವಸಿಷ್ಠ ಸಿಂಹ

2020ರ 'ಭಾರತ vs ಇಂಗ್ಲೆಂಡ್‌' ಚಿತ್ರದ ಮೂಲಕ ವಸಿಷ್ಠ ಸಿಂಹ ಅವರು ಖಳನಾಯಕನಿಂದ ನಾಯಕನಾಗಿ ಬಡ್ತಿ ಪಡೆದರು. ಇದೀಗ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತು ವಿವಿಧ ಭಾಷೆಗಳ ಅನೇಕ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಕನ್ನಡ ಚಿತ್ರ ಲವ್ ಲಿ ಮತ್ತು ತೆಲುಗು ಚಿತ್ರ ಯೇವಂನಲ್ಲಿ ನಟಿಸಿದ್ದಾರೆ. ಇವೆರಡೂ ಜೂನ್ 14 ರಂದು ಬಿಡುಗಡೆಯಾಗಲಿವೆ.

2020ರ 'ಭಾರತ vs ಇಂಗ್ಲೆಂಡ್‌' ಚಿತ್ರದ ಮೂಲಕ ವಸಿಷ್ಠ ಸಿಂಹ ಅವರು ಖಳನಾಯಕನಿಂದ ನಾಯಕನಾಗಿ ಬಡ್ತಿ ಪಡೆದರು. ಇದೀಗ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತು ವಿವಿಧ ಭಾಷೆಗಳ ಅನೇಕ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಕನ್ನಡ ಚಿತ್ರ ಲವ್ ಲಿ ಮತ್ತು ತೆಲುಗು ಚಿತ್ರ ಯೇವಂನಲ್ಲಿ ನಟಿಸಿದ್ದಾರೆ. ಇವೆರಡೂ ಜೂನ್ 14 ರಂದು ಬಿಡುಗಡೆಯಾಗಲಿವೆ.

ನಾಯಕನಾಗಿ ವೃತ್ತಿಯನ್ನು ಪ್ರಾರಂಭಿಸಲು ಬಯಸಿದ್ದಿರಾ ಎಂದು ಕೇಳಿದಾಗ, 'ಇಲ್ಲ, ನಾನು ಹಾಗೆ ಮಾಡಿದ್ದರೆ, ಇಷ್ಟೊತ್ತಿಗಾಗಲೇ ಮನೆಗೆ ಹೋಗಿರುತ್ತಿದ್ದೆ. ಆದರೆ ನಾನು ನಾಯಕನಾಗಿ ಪರಿವರ್ತನೆಗೊಂಡಿದ್ದೇನೆ. ಇದು ನನಗೆ ಖುಷಿ ನೀಡಿದೆ. ನಾನು ನಟನೆಯನ್ನು ಇಷ್ಟಪಡುತ್ತೇನೆ ಮತ್ತು ಬ್ಯುಸಿಯಾಗಿರಲು ಇಷ್ಟಪಡುತ್ತೇನೆ. ಸಿನಿಮಾ ನನ್ನ ಜೀವನ ಮತ್ತು ಯಾವುದೇ ರೀತಿಯಲ್ಲಿ ಅದರ ಭಾಗವಾಗಿರುವುದು ನನಗೆ ಸಂತೋಷವನ್ನು ನೀಡುತ್ತದೆ. ಅದು ಖಳನಾಯಕನೇ ಆಗಿರಲಿ ಅಥವಾ ಹಾಸ್ಯಮಯ ಪಾತ್ರವಾಗಿರಲಿ. ನಾನು ಕಲಾವಿದ. ಯಾವುದೇ ಪಾತ್ರವನ್ನು ನಿರ್ವಹಿಸಿ ಗುರುತಿಸಿಕೊಳ್ಳಲು ನಾನು ಸಿದ್ಧನಾಗಿರಬೇಕು. ನಾನು ಪರದೆ ಮೇಲೆ ಕಾಣಿಸಿಕೊಂಡಾಗಲೆಲ್ಲ ನನ್ನನ್ನು ಸಾಬೀತುಪಡಿಸಿಕೊಳ್ಳಲು ನಾನು ಇಷ್ಟಪಡುತ್ತೇನೆ ಮತ್ತು ನನ್ನ ಅಭಿನಯವು ಮನವರಿಕೆಯಾಗಬೇಕು ಎಂದು ಬಯಸುತ್ತೇನೆ' ಎಂದರು.

ಡಾಲಿ ಧನಂಜಯ ಅಭಿನಯದ ಕೋಟಿ, ಶಿವಮ್ಮ ಮತ್ತು ಚೆಫ್ ಚಿದಂಬರ ಚಿತ್ರಗಳ ಜೊತೆಗೆ ಬಿಡುಗಡೆಯಾಗುತ್ತಿರುವ ಲವ್ ಲಿ ಸೇರಿದಂತೆ ಅವರ ಮುಂಬರುವ ಚಿತ್ರಗಳ ಬಗ್ಗೆ ಮಾತನಾಡುತ್ತಾ, 'ಯಾವುದೇ ಸ್ಪರ್ಧೆಯಿಲ್ಲ. ಪ್ರತಿಯೊಂದು ಚಿತ್ರಕ್ಕೂ ತನ್ನದೇ ಆದ ವಿಶಿಷ್ಟ ಕಂಟೆಂಟ್ ಇರುತ್ತದೆ. ಇದು ವಿಭಿನ್ನ ಪ್ರಕಾರಗಳನ್ನು ಪ್ರಯತ್ನಿಸುವುದು ಮತ್ತು ಹೆಚ್ಚಿನ ಪ್ರೇಕ್ಷಕರನ್ನು ತಲುಪುವುದಾಗಿರುತ್ತದೆ' ಎಂದು ಅವರು ಹೇಳುತ್ತಾರೆ.

ಚೇತನ್ ಕೇಶವ್ ನಿರ್ದೇಶನದ ಮತ್ತು ರವೀಂದ್ರ ಕುಮಾರ್ ನಿರ್ಮಾಣದ ಲವ್ ಲಿ ಚಿತ್ರದ ಪಾತ್ರದ ಸವಾಲುಗಳ ಬಗ್ಗೆ ಮಾತನಾಡುವ ಅವರು, 'ನೀವು ಸೂಕ್ಷ್ಮವಾದ ಕಥೆಯನ್ನು ಹೇಳಲು ಬಯಸಿದಾಗ ಅದು ನಿರ್ಣಾಯಕವಾಗುತ್ತದೆ. ವಿಭಿನ್ನ ಛಾಯೆಗಳು ಮತ್ತು ಲುಕ್‌ಗಳು ಬೇಕಾಗಿರುವುದರಿಂದ ಈ ಚಿತ್ರವನ್ನು ಮಾಡಲು ಮೂರು ವರ್ಷಗಳನ್ನು ತೆಗೆದುಕೊಂಡೆ. ನಾವು ಲಂಡನ್‌ನಲ್ಲಿ ಕೆಲವು ಭಾಗಗಳನ್ನು ಚಿತ್ರೀಕರಿಸಿದ್ದೇವೆ, ಇದು ಸಂಕೀರ್ಣತೆಯನ್ನು ಹೆಚ್ಚಿಸಿದೆ. ಚಿತ್ರಕ್ಕಾಗಿ ನಾನು ಮಾಡಿದ ಕೆಲಸದ ಬಗ್ಗೆ ತೃಪ್ತಿಯ ಭಾವನೆ ಇದೆ' ಎಂದು ಹೇಳಿದರು.

ಈ ಚಿತ್ರದ ಬಜೆಟ್ ಮತ್ತು ವೇಷಭೂಷಣಗಳು ವಸಿಷ್ಠ ಅವರ ವೃತ್ತಿಜೀವನದಲ್ಲಿಯೇ ಹೈಬಜೆಟ್ ಎಂದು ಹೇಳಲಾಗಿದೆ ಎಂಬುದಕ್ಕೆ ಉತ್ತರಿಸಿದ ಅವರು, 'ನಾನು ಬಜೆಟ್ ಬಗ್ಗೆ ಮಾತನಾಡಲಾರೆ; ಅದು ನಿರ್ಮಾಪಕರಿಗೆ ಬಿಟ್ಟ ವಿಚಾರ. ಆದರೆ, ಇದು ಆಸಕ್ತಿದಾಯಕ ಪಾತ್ರವರ್ಗವನ್ನು ಹೊಂದಿರುವ ಮತ್ತು ಉತ್ತಮ ನಿರ್ಮಾಪಕರ ಬೆಂಬಲ ಹೊಂದಿರುವ ಚಿತ್ರವಾಗಿದೆ ಎಂದು ನಾನು ಹೇಳಬಲ್ಲೆ. ಚೇತನ್ ಕೇಶವ್ ಅವರಂತಹ ಚೊಚ್ಚಲ ನಿರ್ದೇಶಕರಿಗೆ ಹೆಚ್ಚಿನ ಅವಕಾಶಗಳನ್ನು ಪಡೆಯಲು ಈ ಚಿತ್ರವು ದಾರಿ ಮಾಡಿಕೊಡಲಿದೆ ಎಂದು ಭಾವಿಸುತ್ತೇವೆ' ಎನ್ನುತ್ತಾರೆ ವಸಿಷ್ಠ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT