ರಕ್ಷಕ್ ಬುಲೆಟ್ 
ಸಿನಿಮಾ ಸುದ್ದಿ

''ಅವರು ಕಷ್ಟ ಅನುಭವಿಸುತ್ತಿರುವಾಗ ನಾವು ಸಂಭ್ರಮಿಸುವುದು ಸರಿಯಲ್ಲ'': ಬರ್ತ್ ಡೇ ರದ್ದು ಮಾಡಿದ Rakshak bullet

ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಪಾಲಾಗಿರುವಂತೆಯೇ ಇತ್ತ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ ತಮ್ಮ ಜನ್ಮ ದಿನಾಚರಣೆಯನ್ನು ರದ್ದು ಮಾಡಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಬೆಂಗಳೂರು: ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಪಾಲಾಗಿರುವಂತೆಯೇ ಇತ್ತ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ ತಮ್ಮ ಜನ್ಮ ದಿನಾಚರಣೆಯನ್ನು ರದ್ದು ಮಾಡಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಹೌದು.. ಈ ಬಗ್ಗೆ ಸ್ವತಃ ರಕ್ಷಕ್ ಬುಲೆಟ್ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಹಾಕಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೋಸ್ಟ್ ನಲ್ಲಿ ನಟ ದರ್ಶನ್ (Darshan) ಅವರು ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ಕಾರಣ ಬೇಸರಕ್ಕೆ ಒಳಗಾಗಿ ಪರೋಕ್ಷವಾಗಿ ಪೋಸ್ಟ್ ಒಂದನ್ನು ಶೇರ್‌ ಮಾಡಿದ್ದಾರೆ.

ಇಷ್ಟಕ್ಕೂ ಪೋಸ್ಟ್ ನಲ್ಲಿ ಏನಿದೆ?

‘ಹತ್ತಿರವಾದವರು ಕಷ್ಟ ಅನುಭವಿಸುತ್ತಿರುವಾಗ ನಾವು ಸಂಭ್ರಮಾಚರಣೆ ಮಾಡುವುದು ಸರಿಯಲ್ಲ’ ಎಂದು ಬರ್ತ್​ಡೇ ಸೆಲೆಬ್ರೇಷನ್​ ಮಾಡಿಕೊಳಲ್ಲ ಎಂದು ಹೇಳಿಕೊಂಡಿದ್ದಾರೆ.

ʻʻಎಲ್ಲರಿಗೂ ನಮಸ್ಕಾರ ಹಾಗೂ ಫಾದರ್ಸ್ ಡೇ ಶುಭಾಶಯಗಳು. ಇವತ್ತು ಬೆಳಗ್ಗೆಯಿಂದ ನನ್ನ ತಂದೆಯ ನೆನಪು ನನ್ನನ್ನು ತುಂಬಾ ಕಾಡುತ್ತಿದೆ. ಎಲ್ಲರಂತೆ ನನಗೂ ಕೂಡ ನನ್ನ ತಂದೆಯೇ ಮೊದಲ ಹೀರೊ. ಹೀರೊ ಅಷ್ಟೇ ಅಲ್ಲ ಒಳ್ಳೆಯ ಮಾರ್ಗದರ್ಶಕರು ಹಾಗೂ ಸ್ನೇಹಿತರು ಕೂಡ ಆಗಿದ್ದರು. ಇತ್ತೀಚಿನ ದಿನಗಳಲ್ಲಿ ನಡೆದ ಕೆಲವೊಂದು ಘಟನೆಗಳು ಮನಸ್ಸಿಗೆ ನೋವು ತಂದಿದೆ. ನಮ್ಮ ಮನಸ್ಸಿಗೆ ಹತ್ತಿರವಾದವರು ಕಷ್ಟ ಅನುಭವಿಸುತ್ತಿರುವಾಗ ನಾವು ಸಂಭ್ರಮಾಚರಣೆ ಮಾಡುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ. ನಾನು ಈ ವರ್ಷ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದೇನೆ. ಮುಂದಿನ ವರ್ಷದ ಹುಟ್ಟು ಹಬ್ಬದಷ್ಟರಲ್ಲಿ ಏನಾದರೂ ಒಂದು ಸಾಧನೆ ಮಾಡಿರುತ್ತೇನೆ. ಆಗ ನನ್ನ ಎಲ್ಲ ಸ್ನೇಹಿತರು, ಹಿತೈಷಿಗಳು, ಗುರು-ಹಿರಿಯರು ಹಾಗೂ ಪ್ರೀತಿ ಪಾತ್ರರೊಂದಿಗೆ ಆಚರಣೆ ಮಾಡುತ್ತೇನೆ. ಹೀಗೆ ನಿಮ್ಮ ಪ್ರೀತಿ ವಿಶ್ವಾಸ ಹಾಗೂ ಆಶೀರ್ವಾದ ನನ್ನ ಮೇಲಿರಲಿ ನನ್ನನ್ನು ಬೆಂಬಲಿಸುತ್ತಿರುವ ಎಲ್ಲ ನನ್ನ ಸ್ನೇಹಿತರು, ಪ್ರೀತಿ ಪಾತ್ರರು, ಮಾಧ್ಯಮ ಮಿತ್ರರು, ಟ್ರೋಲ್ ಪೇಜ್‌ಗಳು, ಯೂಟ್ಯೂಬ್‌ರ್ಸ್‌ ಹಾಗೂ ಎಲ್ಲಾ ಸಾಮಾಜಿಕ ಜಾಲತಾಣದ ಸ್ನೇಹಿತರಿಗೆ ಧನ್ಯವಾದಗಳು’ ಎಂದು ಬರೆದಿದ್ದಾರೆ.

ಅಂದಹಾಗೆ ಜೂನ್ 21 ಅವರ ಜನ್ಮದಿನ. ಈ ದಿನಾ ರಕ್ಷಕ್‌ ಸಿನಿಮಾ ಕೂಡ ಅನೌನ್ಸ್‌ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿಂದೆ ಇದೇ ರಕ್ಷಕ್ ಬುಲೆಟ್ ಶರಣ್ ಅಭಿನಯದ ಗುರುಶಿಷ್ಯರು ಚಿತ್ರದಲ್ಲಿ ನಟಿಸಿದ್ದರು.

ಬುಲೆಟ್ ಪ್ರಕಾಶ್ ಹಾಗೂ ದರ್ಶನ್ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಈ ಹಿಂದೆ ʻಬಿಗ್‌ಬಾಸ್ʼ ಕನ್ನಡ ಸೀಸನ್‌ 10ರಲ್ಲಿ (BBK SEASON 10) ನಟ ಬುಲೆಟ್‌ ಪ್ರಕಾಶ್‌ ಅವರ ಪುತ್ರ ರಕ್ಷಕ್‌ ಬುಲೆಟ್‌ ಒಂದು ತಿಂಗಳ ಕಾಲ ಬಿಗ್‌ಬಾಸ್‌ನಲ್ಲಿದ್ದು ಎಲಿಮಿನೇಟ್‌ ಆಗಿಯೂ ಹೊರಬಂದಿದ್ದರು. ಬಳಿಕ ಸುದೀಪ್‌ ಬಗ್ಗೆ ಹೇಳಿಕೆ ನೀಡಿ ವ್ಯಾಪಕ ಟ್ರೋಲ್‌ ಆಗಿ ಕ್ಷಮೆಯೂ ಕೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT