ಗೌರಿ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

'ಗೌರಿ' ಚಿತ್ರದ ಸಂಗೀತ, ನೃತ್ಯ ಯುವಜನತೆಯ ಮನ ಸೆಳೆದಿದೆ: ಸಮರ್ಜಿತ್ ಲಂಕೇಶ್

ಇಂದ್ರಜಿತ್ ಲಂಕೇಶ್ ನಿರ್ದೇಶನದ ಸಮರ್ಜಿತ್ ಮೊದಲ ಬಾರಿಗೆ ನಾಯಕ ನಟರಾಗಿ ಅಭಿನಯಿಸಿರುವ ಮ್ಯೂಸಿಕಲ್ ಸಿನಿಮಾ 'ಗೌರಿ' ಆಕರ್ಷಕ ಹಾಡುಗಳಿಂದ ಗಮನ ಸೆಳೆದಿದೆ.

ಇಂದ್ರಜಿತ್ ಲಂಕೇಶ್ ನಿರ್ದೇಶನದ ಸಮರ್ಜಿತ್ ಮೊದಲ ಬಾರಿಗೆ ನಾಯಕ ನಟರಾಗಿ ಅಭಿನಯಿಸಿರುವ ಮ್ಯೂಸಿಕಲ್ ಸಿನಿಮಾ 'ಗೌರಿ' ಆಕರ್ಷಕ ಹಾಡುಗಳಿಂದ ಗಮನ ಸೆಳೆದಿದೆ. ಮೊದಲ ಸಾಂಗ್'' ಟೈಮ್ ಬರುತ್ತೆ, ನಂತರ ಧೂಳ್ ಎಬ್ಬಿಸಾವ..’ ಹಾಡಿಗೆ ಸಮರ್ಜಿತ್ ಮತ್ತು ಸಂಜನಾ ಆನಂದ್ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಈ ಎರಡೂ ಸಾಂಗ್ ಗಳು ಯೂಟ್ಯೂಬ್‌ನಲ್ಲಿ ಹಿಟ್ ಆಗಿದ್ದು, ಟ್ರೆಂಡ್‌ ಹುಟ್ಟುಹಾಕಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಸಂಖ್ಯಾತ ರೀತಿಯಲ್ಲಿ ರೀಲ್ಸ್ ಮಾಡಲಾಗುತ್ತಿದೆ.

ಹಾಡುಗಳು ಗಣನೀಯವಾಗಿ ಪ್ರಭಾವ ಬೀರಿದ್ದು, ಸಮರ್ಜಿತ್ ಅವರ ನೃತ್ಯ ಕೌಶಲ್ಯಕ್ಕಾಗಿ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ.

ಸಿನಿ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಸಮರ್ಜಿತ್, ಮ್ಯೂಸಿಕ್ ನಿರ್ಣಾಯಕ ಅಂಶವಾಗಿದೆ. ನಾನು ಬೆಳೆಯುತ್ತಿರುವಾಗ, ನನ್ನ ತಂದೆಯ ಕೆಲಸವನ್ನು ನೋಡಿದೆ ಮತ್ತು ಚಲನಚಿತ್ರದಲ್ಲಿ ಸಂಗೀತದ ಮಹತ್ವವನ್ನು ಅರ್ಥಮಾಡಿಕೊಂಡಿದ್ದೇನೆ. ಬಾಲ್ಯದಲ್ಲಿ ವೇದಿಕೆ ಮೇಲೆ ನೃತ್ಯವನ್ನು ಇಷ್ಟಪಟ್ಟಿದೆ. ಹಾಡುಗಳನ್ನು ಕೇಳಲು ಉತ್ಸುಕನಾಗಿದ್ದೆ. ನನ್ನದೇ ಶೈಲಿಯಲ್ಲಿ ಮಿಮಿಕ್ ಮೂವಿ, ನೃತ್ಯವನ್ನು ದಿನಚರಿಯಾಗಿ ಮಾಡುತ್ತಿದೆ. ನಟನಾಗಬೇಕು ಅಂದುಕೊಂಡಾಗ ಇದು ಕೇವಲ ನಟನೆಯಲ್ಲ, ಇದು ಆಕ್ಷನ್ ಸೀಕ್ವೆನ್ಸ್, ನೃತ್ಯದ ಭಾಗಗಳು, ಹಾಡುಗಳು ಮತ್ತು ಶಕ್ತಿಯುತ ಸಂಭಾಷಣೆಗಳನ್ನು ಒಳಗೊಂಡಿರುವ ಮನರಂಜನೆಯನ್ನು ಒಳಗೊಂಡಿರುತ್ತದೆ ಎಂದು ಅರಿತುಕೊಂಡೆ. ಎಲ್ಲ ಕ್ಷೇತ್ರಗಳಲ್ಲೂ ಮಿಂಚಬೇಕು ಎಂಬ ಆಸೆಯಿಂದ ಸ್ಟಂಟ್ ತರಬೇತಿ ಪಡೆದಂತೆ ನೃತ್ಯ ತರಬೇತಿಯನ್ನು ಗಂಭೀರವಾಗಿ ತೆಗೆದುಕೊಂಡೆ. ಇದು ಫಲ ನೀಡಿದೆ. ಎರಡು ಹಾಡುಗಳು ಟ್ರೆಂಡಿಂಗ್ ಆಗಿರುವುದನ್ನು ಸಾಧನೆ ಎಂದು ಪರಿಗಣಿಸುತ್ತೇನೆ. ನನನ್ನು ಲಾಂಚಿಂಗ್ ಮಾಡುತ್ತಿರುವ ನನ್ನ ತಂದೆಯ ಮೇಲೆ ತುಂಬಾ ಒತ್ತಡವಿದೆ. ಆದರೆ, ಸಿಗುತ್ತಿರುವ ಸ್ಪಂದನೆ, ಪ್ರೋತ್ಸಾಹಕಾರಿಯಾಗಿದೆ ಎಂದು ವಿವರಿಸಿದರು.

ಸಮರ್ಜಿತ್ ಲಂಕೇಶ್

ಸಮರ್ಜಿತ್ ಸಹ ಬಾಲ್ಯದಲ್ಲಿಯೇ ಗಾಯಕ ಪ್ರತಿಭಾವಂತರಾಗಿದ್ದರು. ಗಾಯನ ಮತ್ತು ಕ್ರಿಕೆಟ್‌ನಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೆ. ಒಬ್ಬ ನಟನಾಗಿ, ಪ್ರೇಕ್ಷಕರು ನಿಮ್ಮಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ. ಕನ್ನಡದ ತಾರೆಯರಾದ ಪುನೀತ್ ರಾಜ್‌ಕುಮಾರ್, ಸುದೀಪ್ ಮತ್ತು ಉಪೇಂದ್ರ ತಮ್ಮಗೆ ಸ್ಪೂರ್ತಿ ಎಂದರು. ಇಂದಿನ ಜಗತ್ತಿನಲ್ಲಿ ಚಲನಚಿತ್ರ ಪ್ರಚಾರಕ್ಕೂ ಸಾಕಷ್ಟು ಕೌಶಲ್ಯ ಬೇಕಾಗುತ್ತದೆ. “ನನ್ನ ತಂದೆಯ ಕಾಲದ ಸಿನಿಮಾಗಳನ್ನು ಹೋಲಿಸಲು ಸಾಧ್ಯವಿಲ್ಲ, ಅವರು ತಮ್ಮದೇ ಆದ ಯಶಸ್ಸು ಮತ್ತು ಪ್ರಶಂಸೆ ಗಳಿಸಿದ್ದಾರೆ. ಇಂದು ಕಾಲೇಜುಗಳಿಗೆ ಭೇಟಿ ನೀಡಿ ಜನರನ್ನು ಭೇಟಿ ಮಾಡಿದಾಗ ಆಗುವ ಅನುಭವವೇ ಬೇರೆ. ಪ್ರತಿ ಪೀಳಿಗೆಯೊಂದಿಗೆ ಟ್ರೆಂಡ್‌ಗಳು ಬದಲಾಗುತ್ತವೆ ಮತ್ತು ಇದು ಎಲ್ಲಾ ಸಿನಿಮಾ ಮೇಲೆ ಅವಲಂಬಿಸಿರುತ್ತದೆ, ನೀವು ಸ್ಟಾರ್ ಹಿನ್ನೆಲೆಯಿಂದ ಬಂದಿದ್ದೀರಾ ಅಥವಾ ಇಲ್ಲವೇ ಎಂಬುದರ ಮೇಲಲ್ಲಾ ಎಂದರು.

ಇನ್ನೂ ಸಾಮಾಜಿಕ ಮಾಧ್ಯಮಗಳ ಪಾತ್ರ ಕುರಿತು ವಿವರಿಸಿದ ಅವರು, ನೆಟಿಜನ್‌ ಸೃಷ್ಟಿಸಿರುವ ರೀಲ್‌ಗಳಿಂದಾಗಿ ಹಾಡುಗಳು ಹಿಟ್ ಆಗಿವೆ. ಸಂಗೀತ, ನೃತ್ಯದಿಂದ ಯುವಜನತೆಯ ಮನ ಸೆಳೆದಿದೆ. ಹಿನ್ನೆಲೆ ಸಂಗೀತ, ಟ್ಯೂನ್ ಗಳು ಸಿನಿಮಾವನ್ನು ಮತ್ತಷ್ಟು ಉನ್ನತಿಗೆ ಕರೆದೊಯ್ದಿದೆ. ಇದು ಸಾನಿಯಾ ಅಯ್ಯರ್ ಅವರು ಚೊಚ್ಚಲ ಚಿತ್ರವಾಗಿದೆ ಮತ್ತು ಸ್ವೀಜಲ್ ಚಂದು ಗೌಡ ಸೇರಿದಂತೆ ಇತರರ ತಾರಾಗಣವಿದೆ. ಜಸ್ಸಿ ಗಿಫ್ಟ್ ಮತ್ತು ಚಂದನ್ ಶೆಟ್ಟಿ ಮತ್ತಿತರ ನಿರ್ದೇಶಕರು ಸಂಗೀತ ನಿರ್ದೇಶನ ಮಾಡಿದ್ದು, ಎಜೆ ಶೆಟ್ಟಿ ಛಾಯಾಗ್ರಹಣ ನಿಭಾಯಿಸಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT