ಸಿನಿಮಾ ಸುದ್ದಿ

ಅಪ್ಪನಿಗೆ 'I love you' ಎಂದ ಕನ್ನಡದ ನಟಿಯ 4 ತಿಂಗಳ ಪುಟ್ಟ ಮಗು!; ವಿಡಿಯೋ ವೈರಲ್

ಸೋಷಿಯಲ್ ಮೀಡಿಯಾ ಯುಗದಲ್ಲಿನ ವೈರಲ್ ವಿಡಿಯೋಗಳ ಸಾಲಿಗೆ ಕನ್ನಡದ ನಟಿಯೊಬ್ಬರ 4 ತಿಂಗಳ ಮಗುವಿನ ವಿಡಿಯೋವೊಂದು ಸೇರಿದ್ದು, ಅಪ್ಪನಿಗೆ 'I love you' ಎಂದ ಕನ್ನಡದ ನಟಿಯ 4 ತಿಂಗಳ ಪುಟ್ಟ ಮಗುವಿನ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಬೆಂಗಳೂರು: ಸೋಷಿಯಲ್ ಮೀಡಿಯಾ ಯುಗದಲ್ಲಿನ ವೈರಲ್ ವಿಡಿಯೋಗಳ ಸಾಲಿಗೆ ಕನ್ನಡದ ನಟಿಯೊಬ್ಬರ 4 ತಿಂಗಳ ಮಗುವಿನ ವಿಡಿಯೋವೊಂದು ಸೇರಿದ್ದು, ಅಪ್ಪನಿಗೆ 'I love you' ಎಂದ ಕನ್ನಡದ ನಟಿಯ 4 ತಿಂಗಳ ಪುಟ್ಟ ಮಗುವಿನ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ʻತಿಥಿʼ ಸಿನಿಮಾದ (Thithi Kannada Film) ಕಾವೇರಿ ಪಾತ್ರದಲ್ಲಿ ಅಭಿನಯಿಸಿದ್ದ ಅವರು ಎಲ್ಲರ ಗಮನ ಸೆಳೆದಿದ್ದರು. ಸಾಫ್ಟವೇರ್‌ ಎಂಜಿನಿಯರ್‌ ಪ್ರೇಮ್‌ ಎಂಬುವರ ಕೈ ಹಿಡಿದಿದ್ದರು. 4 ತಿಂಗಳ ಹಿಂದೆ ಮುದ್ದಾದ ಗಂಡು ಮಗುವಿಗೆ ಪೂಜಾ ಜನ್ಮ ನೀಡಿದ್ದರು. “ತಿಥಿʼʼ ಸಿನಿಮಾ ಮೂಲಕ (Viral Video) ಮನೆಮಾತಾಗಿದ್ದ ಸ್ಯಾಂಡಲ್‌ವುಡ್‌ ನಟಿ ಪೂಜಾ ಎಸ್ ಎಂ ಅವರ 4 ತಿಂಗಳ ಮಗುವಿನ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ತಂದೆ ಹೇಳಿಕೊಟ್ಟ ಐ ಲವ್ ಯೂ ಪದವನ್ನು ಹೇಳುವ ಮಗುವಿನ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. 4 ತಿಂಗಳ ಮಗನನ್ನು ಮಡಿಲಲ್ಲಿ ಮಲಗಿಸಿಕೊಂಡು ಪೂಜಾ ಪತಿ ಪ್ರೇಮ್ ‘ಐ ಲವ್ ಯು’ ಎಂದು ಒಂದೊಂದೇ ಪದವನ್ನು ಹೇಳಿಕೊಟ್ಟಿದ್ದಾರೆ. ಅದನ್ನು ಮಗು ಕೂಡ ಚೆನ್ನಾಗಿ ಆಲಿಸಿ ಹೇಳಿದೆ. “ನಮ್ಮ 4 ತಿಂಗಳ ಮಗು ತಂದೆಗೆ ತನ್ನ ಮೊದಲ ಪ್ರೀತಿಯನ್ನು ವ್ಯಕ್ತಪಡಿಸುತ್ತಿದೆ” ಎಂದು ಬರೆದು ಪೂಜಾ ವಿಡಿಯೊ ಹಂಚಿಕೊಂಡಿದ್ದಾರೆ. 2 ದಿನಗಳಲ್ಲಿ 1 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದು ವಿಡಿಯೊ ಗಮನ ಸೆಳೆದಿದೆ.

ಅಂದಹಾಗೆ ತಿಥಿ ಚಿತ್ರದಲ್ಲಿ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಯನ್ನು ಪೂಜಾ ಪಡೆದಿದ್ದರು. “ದಾರಿ ಯಾವುದಯ್ಯ ವೈಕುಂಠಕ್ಕೆʼʼ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದರು. “ನೀವು ಕರೆ ಮಾಡಿದ ಚಂದದಾರರುʼʼ ಸಿನಿಮಾದಲ್ಲಿ ಪೂಜಾ ಕಾಣಿಸಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT