ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

'ಒಡೆಲಾ ರೈಲ್ವೆ ಸ್ಟೇಷನ್' ಸೀಕ್ವೆಲ್; ವಸಿಷ್ಠ ಸಿಂಹ ಜೊತೆ ಪ್ರಮುಖ ಪಾತ್ರದಲ್ಲಿ ತಮನ್ನಾ ಭಾಟಿಯಾ

2021ರ ಸೀಟಿಮಾರ್ ಚಲನಚಿತ್ರವನ್ನು ಕೊನೆಯ ಬಾರಿಗೆ ನಿರ್ದೇಶಿಸಿದ್ದ ಬರಹಗಾರ- ನಿರ್ದೇಶಕ ಸಂಪತ್ ನಂದಿ ಅವರು ಈಗ ತಮ್ಮ ಮುಂದಿನ ಚಿತ್ರ 'ಒಡೆಲಾ 2'ದೊಂದಿಗೆ ಬರಹಗಾರರಾಗಿ ಬರುತ್ತಿದ್ದಾರೆ. ನಟಿ ತಮನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ನಟ ವಸಿಷ್ಠ ಎನ್ ಸಿಂಹ ಕೂಡ ಕಾಣಿಸಿಕೊಳ್ಳಲಿದ್ದಾರೆ.

ವಸಿಷ್ಠ ಸಿಂಹ - ತಮನ್ನಾ ಭಾಟಿಯಾ
Ramyashree GN
Updated On : 3 Mar 2024, 4:06 pm

2021ರ ಸೀಟಿಮಾರ್ ಚಲನಚಿತ್ರವನ್ನು ಕೊನೆಯ ಬಾರಿಗೆ ನಿರ್ದೇಶಿಸಿದ್ದ ಬರಹಗಾರ- ನಿರ್ದೇಶಕ ಸಂಪತ್ ನಂದಿ ಅವರು ಈಗ ತಮ್ಮ ಮುಂದಿನ ಚಿತ್ರ 'ಒಡೆಲಾ 2'ದೊಂದಿಗೆ ಬರಹಗಾರರಾಗಿ ಬರುತ್ತಿದ್ದಾರೆ. ಮುಂಬರುವ ಸೂಪರ್ ನ್ಯಾಚುರಲ್ ಥ್ರಿಲ್ಲರ್‌ಗೆ ಅಶೋಕ್ ತೇಜ ನಿರ್ದೇಶಕರಾಗಿದ್ದಾರೆ. ನಟಿ ತಮನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಒಡೆಲಾ 2 ಚಿತ್ರಕ್ಕೆ ವಾರಣಾಸಿಯಲ್ಲಿ ಮುಹೂರ್ತ ಸಮಾರಂಭದೊಂದಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಚಿತ್ರೀಕರಣವನ್ನು ಸಹ ಪ್ರಾರಂಭಿಸಲಾಗಿದೆ. ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಸಂಪತ್, ತಮನ್ನಾ ಜೊತೆಗಿನ ಮೊದಲ ದಿನದ ಚಿತ್ರೀಕರಣದ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. 'ಒಡೆಲಾ 2' 2022ರ OTT ಚಲನಚಿತ್ರ 'ಒಡೆಲಾ ರೈಲ್ವೆ ಸ್ಟೇಷನ್'ನ ಅಧಿಕೃತ ಸೀಕ್ವೆಲ್ ಆಗಿದೆ. ಈ ಚಿತ್ರದಲ್ಲಿ ಸಂಪತ್ ಬರಹಗಾರರಾಗಿ ಕೆಲಸ ಮಾಡಿದ್ದಾರೆ.

Also Read

ವಸಿಷ್ಠ ಸಿಂಹ ಮುಂಬರುವ ಕ್ರೈಮ್ ಥ್ರಿಲ್ಲರ್ ಶೀರ್ಷಿಕೆ ಅನಾವರಣ; 'ವಿಐಪಿ' ಆಗಿ ಮಿಂಚು

ಒಡೆಲಾ ರೈಲ್ವೆ ಸ್ಟೇಷನ್ ಚಿತ್ರದಲ್ಲಿ ಹೆಬಾ ಪಟೇಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ, ಸೀಕ್ವೆಲ್‌ನಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಡೆಲಾ 2 ಚಿತ್ರವನ್ನು ಡಿ ಮಧು ನಿರ್ಮಿಸಿದ್ದಾರೆ.

Advertisement

Advertisement

ಚಿತ್ರದಲ್ಲಿ ನಟ ವಸಿಷ್ಠ ಎನ್ ಸಿಂಹ, ಯುವ, ನಾಗ ಮಹೇಶ್, ವಂಶಿ, ಗಗನ್ ವಿಹಾರಿ, ಸುರೇಂದರ್ ರೆಡ್ಡಿ, ಭೂಪಾಲ್ ಮತ್ತು ಪೂಜಾ ರೆಡ್ಡಿ ಸಹ ನಟಿಸಿದ್ದಾರೆ. ಚಿತ್ರಕ್ಕೆ ಬಿ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಸೌಂದರ್ ರಾಜನ್ ಎಸ್ ಛಾಯಾಗ್ರಹಣವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement