ರವಿಚಂದ್ರನ್ - ಸೋನಲ್ ಮೊಂತೆರೋ - ರಘು ಭಟ್ 
ಸಿನಿಮಾ ಸುದ್ದಿ

'ಪರವಶ' ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ರವಿಚಂದ್ರನ್, ಸೋನಲ್ ಮೊಂತೆರೋ, ರಘು ಭಟ್

ನಟ ರವಿಚಂದ್ರನ್, ಗೌರಿಶಂಕರ್ ಮತ್ತು ದಿ ಜಡ್ಜ್‌ಮೆಂಟ್ ಸೇರಿದಂತೆ ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಧೃವ ಸರ್ಜಾ ಅಭಿನಯದ ಕೆಡಿ - ದಿ ಡೆವಿಲ್ ಚಿತ್ರದಲ್ಲಿಯೂ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವುಗಳ ಹೊರತಾಗಿ, ಅವರು ಇತ್ತೀಚೆಗೆ 'ಪರವಶ' ಎಂಬ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಸದ್ಯ ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿರುವ ನಟ ರವಿಚಂದ್ರನ್, ಗೌರಿಶಂಕರ್ ಮತ್ತು ದಿ ಜಡ್ಜ್‌ಮೆಂಟ್ ಸೇರಿದಂತೆ ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ ಧೃವ ಸರ್ಜಾ ಅಭಿನಯದ ಕೆಡಿ - ದಿ ಡೆವಿಲ್ ಚಿತ್ರದಲ್ಲಿಯೂ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವುಗಳ ಹೊರತಾಗಿ, ಅವರು ಇತ್ತೀಚೆಗೆ 'ಪರವಶ' ಎಂಬ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.

ಸುಧೀಂದ್ರ ನಾಡಿಗರ್ ನಿರ್ದೇಶನದ ಮತ್ತು ಅವ್ಯಕ್ತ ಸಿನಿಮಾಸ್ ಅಡಿಯಲ್ಲಿ ಹರೀಶ್ ಗೌಡ ನಿರ್ಮಾಣದ ಪರವಶ ಚಿತ್ರದಲ್ಲಿ ರವಿಚಂದ್ರನ್ ಜೊತೆಗೆ ರಘು ಭಟ್, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಪವಿತ್ರಾ ಲೋಕೇಶ್, ಅನನ್ಯಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಹೊಸ ತಂಡದೊಂದಿಗೆ ಕೆಲಸ ಮಾಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರವಿಚಂದ್ರನ್, 'ನಾನು ಈ ಹಿಂದೆ ಮಾಡಿದ್ದಕ್ಕಿಂತ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದಲ್ಲಿ ನನ್ನ ಭಾಗವು ಪೂರ್ಣಗೊಂಡಿದೆ ಮತ್ತು ಸುಧೀಂದ್ರ ನಾಡಿಗರ ನಿರ್ದೇಶನದ ಶೈಲಿಯು ನನಗೆ ಸಾಕಷ್ಟು ಇಷ್ವವಾಗಿದೆ' ಎಂದರು.

ಚಿತ್ರದ ಪೋಸ್ಟರ್ ಅನ್ನು ರವಿಚಂದ್ರನ್ ಮತ್ತು ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಸೋನಲ್ ಮೊಂತೆರೋ ಬಿಡುಗಡೆ ಮಾಡಿದರು.

ಚಿತ್ರದ ತಾರಾಗಣದ ಭಾಗವಾಗಿರುವ ರಾಘವೇಂದ್ರ ರಾಜ್‌ಕುಮಾರ್ ಅವರೇ 'ಪರವಶ'ಕ್ಕೆ ಕಥೆಯನ್ನು ಬರೆದಿದ್ದಾರೆ. ಅವರ ಪ್ರಕಾರ, ಚಿತ್ರವು ಥ್ರಿಲ್ಲರ್, ಫ್ಯಾಮಿಲಿ ಎಂಟರ್‌ಟೈನರ್ ಮತ್ತು ರೊಮ್ಯಾನ್ಸ್‌ನ ಮಿಶ್ರಣವಾಗಿದ್ದು, ಪ್ರೇಕ್ಷಕರ ವಿವಿಧ ಸಂವೇದನೆಗಳನ್ನು ಪೂರೈಸುತ್ತದೆ. ಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಬಾಕಿ ಇದೆ. ಪರವಶ ಚಿತ್ರದ ಚಿತ್ರೀಕರಣ ಮಂಗಳೂರು, ಉಡುಪಿ, ಮಣಿಪಾಲ, ಕುಂದಾಪುರದಲ್ಲಿ ನಡೆದಿದೆ. ಸಚಿನ್ ಬಸ್ರೂರ್ ಅವರ ಸಂಗೀತವಿರುವ ಈ ಚಿತ್ರಕ್ಕೆ ಆನಂದ್ ಮೀನಾಕ್ಷಿ ಅವರ ಛಾಯಾಗ್ರಹಣ ಮತ್ತು ಪ್ರತೀಕ್ ಶೆಟ್ಟಿ ಅವರ ಸಂಕಲನವೂ ಇರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್