ರವಿಚಂದ್ರನ್- ಅಮೈರಾ ಗೋಸ್ವಾಮಿ 
ಸಿನಿಮಾ ಸುದ್ದಿ

ನೈಜ ಘಟನೆ ಆಧರಿತ ಮಹಿಳಾ ಪ್ರಧಾನ ‘ತಪಸ್ಸಿ’ ಚಿತ್ರದಲ್ಲಿ ನಟ ರವಿಚಂದ್ರನ್ ಪ್ರೊಫೆಸರ್ ಪಾತ್ರ

ಮಹಿಳಾ ಪ್ರಧಾನ ಚಿತ್ರವಾದ ತಪಸ್ಸಿಯಲ್ಲಿ ವಿ ರವಿಚಂದ್ರನ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ಇತ್ತೀಚೆಗೆ ಸೆಟ್‌ಗೆ ಸೇರಿದ ಕ್ರೇಜಿ ಸ್ಟಾರ್ ಪ್ರಕಾರ, ಚಿತ್ರಕಥೆಯನ್ನು ತಾವೇ ಬರೆದಿರುವ ನಿರ್ದೇಶಕ ಸ್ಪೆನ್ಸರ್ ಮ್ಯಾಥ್ಯೂ ಅವರ ಒತ್ತಾಯದ ಮೇರೆಗೆ ಅವರು ಈ ಪಾತ್ರವನ್ನು ಆರಿಸಿಕೊಂಡಿದ್ದಾರೆ ಹೇಳುತ್ತಾರೆ.

ಮಹಿಳಾ ಪ್ರಧಾನ ಚಿತ್ರವಾದ ತಪಸ್ಸಿಯಲ್ಲಿ ವಿ ರವಿಚಂದ್ರನ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ಇತ್ತೀಚೆಗೆ ಸೆಟ್‌ಗೆ ಸೇರಿದ ಕ್ರೇಜಿ ಸ್ಟಾರ್ ಪ್ರಕಾರ, ಚಿತ್ರಕಥೆಯನ್ನು ತಾವೇ ಬರೆದಿರುವ ನಿರ್ದೇಶಕ ಸ್ಪೆನ್ಸರ್ ಮ್ಯಾಥ್ಯೂ ಅವರ ಒತ್ತಾಯದ ಮೇರೆಗೆ ಅವರು ಈ ಪಾತ್ರವನ್ನು ಆರಿಸಿಕೊಂಡಿದ್ದಾರೆ ಹೇಳುತ್ತಾರೆ.

ಮ್ಯಾಥ್ಯೂ ಅವರು ಈ ಹಿಂದೆ ಗಿರೀಶ್ ಕಾರ್ನಾಡ್ ಅಭಿನಯದ ಸ್ವೀಟ್ ಪಾಯಿಸನ್ ಚಿತ್ರವನ್ನು ನಿರ್ದೇಶಿಸಿದ್ದರು. ತಪಸ್ಸಿ ಚಿತ್ರವು ಅವರ ಎರಡನೇ ಪ್ರಯತ್ನವಾಗಿದೆ. ನೈಜ ಘಟನೆ ಆಧರಿಸಿದ ತಪಸ್ಸಿ ಚಿತ್ರದಲ್ಲಿ ಅಮೈರಾ ಗೋಸ್ವಾಮಿ ನಟಿಸಿದ್ದಾರೆ. ಅವರು ಈ ಹಿಂದೆ ಮಲಯಾಳಂ ಮತ್ತು ಮರಾಠಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಇದೀಗ ತಪಸ್ಸಿಯೊಂದಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

'ತಂಡವು ಬಹುತೇಕ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ ಮತ್ತು ಈಗ ನನ್ನ ಭಾಗದ ಶೂಟಿಂಗ್ ಮಾತ್ರ ಬಾಕಿಯಿದೆ. ನಾನು ರವಿ ಬೋಪಣ್ಣ ಸಿನಿಮಾ ನಿರ್ದೇಶಿಸುತ್ತಿದ್ದ ಸಮಯದಿಂದಲೂ ಮ್ಯಾಥ್ಯೂ ನನಗೆ ಪರಿಚಿತರು ಮತ್ತು ಅವರು ನನಗೆ ಆತ್ಮೀಯ ಸ್ನೇಹಿತರಾಗಿದ್ದಾರೆ. ನಾನು ಈ ಸಿನಿಮಾದ ಭಾಗವಾಗಲು ನನಗೆ ಸಂತೋಷವಾಗಿದೆ' ಎಂದು ಪ್ರೊಫೆಸರ್ ಆಗಿ ನಟಿಸಿರುವ ರವಿಚಂದ್ರನ್ ಹೇಳುತ್ತಾರೆ.

'ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ನನ್ನ ಪಾತ್ರವು ಸಾಮಾಜಿಕ ಸಂದೇಶವನ್ನು ನೀಡುತ್ತದೆ. ನನ್ನ ಪಾತ್ರವು ಚಿತ್ರಕ್ಕೆ ತೂಕವನ್ನು ತರುತ್ತದೆ ಮತ್ತು ನಾನು ಚಿತ್ರಕ್ಕೆ ನ್ಯಾಯ ಸಲ್ಲಿಸುತ್ತೇನೆ ಎಂದು ನಂಬಿ ಅವರು ನನ್ನನ್ನು ಈ ಪಾತ್ರಕ್ಕೆ ಆಯ್ಕೆಮಾಡಿದ್ದಾರೆ' ಎಂದು ಅವರು ಹೇಳುತ್ತಾರೆ.

ನಿರ್ದೇಶಕ ಮ್ಯಾಥ್ಯೂ ಮಾತನಾಡಿ, 'ನಾನು ತಪಸ್ಸಿಯನ್ನು ಮಾಡಲು ಯೋಚಿಸಿದಾಗ ರವಿಚಂದ್ರನ್ ಅವರೇ ನನ್ನ ಮನಸ್ಸಿಗೆ ಬಂದರು ಮತ್ತು ಅವರು ಈ ಪಾತ್ರವನ್ನು ನಿರ್ವಹಿಸಿದ್ದಕ್ಕೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ' ಎಂದು ಹೇಳಿದರು.

ತಪಸ್ಸಿಯಲ್ಲಿ ವಿನಯ್ ಪ್ರಸಾದ್, ಪ್ರಜ್ವಲ್, ಸಚಿನ್, ಅನುಷಾ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವೀರೇಶ್ ಅವರು ಕ್ಯಾಮೆರಾ ನಿರ್ವಹಿಸುತ್ತಿದ್ದು, ಅರುಣ್ ಪಿ ಥಾಮಸ್ ಸಂಕಲನ ಮತ್ತು ಆರವ್ ರಿಷಿಕ್ ಸಂಗೀತ ಸಂಯೋಜಕರಾಗಿದ್ದಾರೆ.

ಸ್ಪೆನ್ಸರ್ ಮ್ಯಾಥ್ಯೂ ಅವರು ನಿರ್ದೆಶನದ ಜೊತೆಗೆ ಬೆಂಗಳೂರು ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ. ಆರ್ ಗಂಗಾಧರ್ ಅವರು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ತಪಸ್ಸಿ ಚಿತ್ರದ ಶೂಟಿಂಗ್ ಸದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Waqf Amendment Act: ಕೆಲವೊಂದು ಅಂಶಗಳಿಗೆ ತಡೆ ನೀಡಿ ಸುಪ್ರೀಂ ಕೋರ್ಟ್ 'ಮಧ್ಯಂತರ ಆದೇಶ' ಪ್ರಕಟ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಗೆ ವಿರೋಧ: PIL ವಜಾಗೊಳಿಸಿದ ಹೈಕೋರ್ಟ್; ಪ್ರತಾಪ್ ಸಿಂಹಗೆ ಭಾರಿ ಹಿನ್ನಡೆ!

ಭಾರತ vs ಪಾಕ್ ಪಂದ್ಯದ ವೇಳೆ ₹1.5 ಲಕ್ಷ ಕೋಟಿ ಜೂಜಾಟ; ಹ್ಯಾಂಡ್‌ಶೇಕ್ ನಿರಾಕರಣೆ ಒಂದು ಪ್ರಹಸನ; ಸಂಜಯ್ ರಾವುತ್

ಬೆಂಗಳೂರು: ವೇಶ್ಯಾವಾಟಿಕೆಗೆ ತಳ್ಳಲು ಮಹಿಳೆಯರ ಅನೈತಿಕ ಸಾಗಣೆಯಲ್ಲಿ ಗಣನೀಯ ಏರಿಕೆ!

Asia Cup 2025: ಭಾರತ vs ಪಾಕಿಸ್ತಾನ ಪಂದ್ಯ ಮತ್ತೆ ಯಾವಾಗ? ಇಲ್ಲಿದೆ ಲೆಕ್ಕಾಚಾರ...

SCROLL FOR NEXT