ನಟ ಸಿದ್ಧಾರ್ಥ್ ಮತ್ತು ನಟಿ ಅದಿತಿ ರಾವ್ ಹೈದರಿ 
ಸಿನಿಮಾ ಸುದ್ದಿ

ತೆಲಂಗಾಣ ದೇಗುಲದಲ್ಲಿ ನಟ ಸಿದ್ಧಾರ್ಥ್ ಮತ್ತು ನಟಿ ಅದಿತಿ ರಾವ್ ಹೈದರಿ ಮದುವೆ?

ಖ್ಯಾತ ನಟ, ನಿರ್ಮಾಪಕ ಸಿದ್ಧಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ತೆಲಂಗಾಣದ ದೇಗುಲದಲ್ಲಿ ಮದುವೆಯಾಗಿದ್ದಾರೆ ಎಂದು ಹೇಳಲಾಗಿದ್ದು, ಈ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ.

ಹೈದರಾಬಾದ್: ಖ್ಯಾತ ನಟ, ನಿರ್ಮಾಪಕ ಸಿದ್ಧಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ತೆಲಂಗಾಣದ ದೇಗುಲದಲ್ಲಿ ಮದುವೆಯಾಗಿದ್ದಾರೆ ಎಂದು ಹೇಳಲಾಗಿದ್ದು, ಈ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ.

ಮೂಲಗಳ ಪ್ರಕಾರ ನಟ ಸಿದ್ಧಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಜೋಡಿ ಬುಧವಾರ ತೆಲಂಗಾಣದ ವಾನಪರ್ತಿ ಜಿಲ್ಲೆಯ ಶ್ರೀರಂಗಪುರಂನ ಶ್ರೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿತ್ತು. ಎರಡೂ ಕುಟುಂಬಗಳ ಆಪ್ತ ಬಂಧುಮಿತ್ರರಿಗಷ್ಟೇ ಈ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಲಾಗಿತ್ತು ಎಂದು ಹೇಳಲಾಗಿದೆ.

ಹೀರಾಮಂಡಿ ಕಾರ್ಯಕ್ರಮದ ನಿರೂಪಕನಿಂದ ಎಡವಟ್ಟು

ಇನ್ನು ಈ ಸುದ್ದಿಯನ್ನು ನಟಿ ಅದಿತಿ ರಾವ್ ಹೈದರಿ ಅವರು ನಟಿಸುತ್ತಿರುವ ನೆಟ್ ಫ್ಲಿಕ್ಸ್ ನ 'ಹೀರಾಮಂಡಿ: ದಿ ಡೈಮಂಡ್ ಬಜಾರ್' ವೆಬ್ ಸೀರೀಸ್ ನ ಕಾರ್ಯಕ್ರಮದಲ್ಲಿ ಬಹಿರಂಗ ಮಾಡಲಾಗಿತ್ತು.

ಕಾರ್ಯಕ್ರಮದ ನಿರೂಪಕ ಸಚಿನ್ ಕುಂಭಾರ್ ಈ ಸುದ್ದಿಯನ್ನು ಬಹಿರಂಗ ಮಾಡಿದ್ದು, "ಹೀರಾಮಂಡಿ' ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅದಿತಿ ಕೂಡ ಒಬ್ಬರು ಮತ್ತು ಅವರು ಇಂದು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಅವರು ಇಂದು ಮದುವೆಯಾದ ಕಾರಣ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಆದ್ದರಿಂದ, ನಾವು ನವ ದಂಪತಿಗಳಿಗೆ ಇಲ್ಲಿಂದಲೇ ಶುಭ ಕೋರುತ್ತೇವೆ. ಇಂದು ಸಂಜೆ ಎಲ್ಲಾ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಹೇಳುವ ಮೂಲಕ ಮದುವೆ ಸುದ್ದಿಯನ್ನು ಜಗಜ್ಜಾಹಿರು ಮಾಡಿದ್ದರು.

ಆದರೆ, ತಮ್ಮ ಮದುವೆ ಬಗ್ಗೆ ಸಿದ್ಧಾರ್ಥ್ ಆಗಲಿ ಅಥವಾ ಅದಿತಿಯಾಗಲಿ ಮಾಹಿತಿ ನೀಡಿರಲಿಲ್ಲ. ಸಿದ್ಧಾರ್ಥ್, ಅದಿತಿ ಅವರಿಗೆ ಶುಭಕೋರಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ನಟಿ ಅದಿತಿ ಪೋಸ್ಟ್, ವದಂತಿಗೆ ತೆರೆ

ಇನ್ನು ಮದುವೆ ಸುದ್ದಿ ವೈರಲ್ ಆದ ಬೆನ್ನಲ್ಲೇ ಇತ್ತ ನಟಿ ಅದಿತಿ ರಾವ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ. ಇಬ್ಬರೂ ನಟರು ಎಂಗೇಜ್ ಮೆಂಟ್ ಫೋಟೋ ಅಪ್ಲೋಡ್ ಮಾಡುವ ಮೂಲಕ ಇದು ಮದುವೆಯಲ್ಲ.. ಎಂಗೇಜ್ ಮೆಂಟ್ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಂದಹಾಗೆ ಇಬ್ಬರಿಗೂ ಇದು ಎರಡನೇ ಮದುವೆ. ಅದಿತಿ ಈ ಮೊದಲು ನಟ ಸತ್ಯದೀಪ್ ಮಿಶ್ರಾ ಎನ್ನುವರನ್ನು ಮದುವೆಯಾಗಿದ್ದರು. 2012ರಲ್ಲಿ ಇವರಿಬ್ಬರ ವಿಚ್ಛೇದನವಾಗಿತ್ತು. ಸಿದ್ಧಾರ್ಥ್ 2003ರಲ್ಲಿ ಮೇಘನಾ ಎನ್ನುವರನ್ನು ಮದುವೆಯಾಗಿದ್ದರು. 2007ರಲ್ಲಿ ಅವರಿಂದ ದೂರವಾಗಿದ್ದರು.

ನಿರ್ಮಾಪಕ, ನಿರ್ದೇಶಕ, ಹಿನ್ನೆಲೆ ಗಾಯಕ, ಕಥೆಗಾರ ಹೀಗೆ ಬಹುಮುಖ ಪ್ರತಿಭೆಯಾಗಿ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ಸಿದ್ಧಾರ್ಥ್ 40 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅಂತೆಯೇ ನಟಿ ಅದಿತಿ ರಾವ್ ಹೈದರಿ ಪ್ರಸ್ತುತ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ, 'ಹೀರಾಮಂಡಿ: ದಿ ಡೈಮಂಡ್ ಬಜಾರ್‌'ನಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ನಟಿಯರಾದ ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ರಿಚಾ ಚಡ್ಡಾ, ಸಂಜೀದಾ ಶೇಖ್ ಮತ್ತು ಶರ್ಮಿನ್ ಸೆಗಲ್ ಕೂಡ ನಟಿಸಿದ್ದಾರೆ.

ತೆಲುಗಿನ ‘ಮಂಗಳವಾರಂ’ ಖ್ಯಾತಿಯ ನಿರ್ದೇಶಕ ಅಜಯ್ ಭೂಪತಿ ನಿರ್ದೇಶಿಸಿದ್ದ ‘ಮಹಾಸಮುದ್ರಂ’ ಸಿನಿಮಾ ಮೂಲಕ ಸಿದ್ಧಾರ್ಥ್ ಹಾಗೂ ಅದಿತಿ ಪರಸ್ಪರ ಸಂಪರ್ಕಕ್ಕೆ ಬಂದಿದ್ದರು. ಖ್ಯಾತ ಮಾಡೆಲ್ ಆಗಿಯೂ ಗುರುತಿಸಿಕೊಂಡಿರುವ ಹೈದರಾಬಾದ್ ಮೂಲದ ಅದಿತಿ ರಾವ್ ಹೈದರಿ ಅವರು ಇದುವರೆಗೆ ಹಿಂದಿ, ತಮಿಳು, ತೆಲುಗಿನಲ್ಲಿ ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT