ಡಾಲಿ ಧನಂಜಯ್ 
ಸಿನಿಮಾ ಸುದ್ದಿ

ಸಾಲು ಸಾಲು ಚಿತ್ರಗಳಲ್ಲಿ ಧನಂಜಯ್ ಬ್ಯುಸಿ; ಅಣ್ಣ from Mexico ಗಾಗಿ ಹಳ್ಳಿ ಅವತಾರದಲ್ಲಿ ನಟ ಮಿಂಚಿಂಗ್

ಸದ್ಯ ಹಲವು ಯೋಜನೆಗಳಲ್ಲಿ ಬ್ಯುಸಿಯಾಗಿರುವ ನಟ ಧನಂಜಯ್ ಇದೀಗ ಶಂಕರ್ ಗುರು ನಿರ್ದೇಶನದ 'ಅಣ್ಣ ಫ್ರಂ ಮೆಕ್ಸಿಕೋ'ದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಇದೀಗ ನಟನ ಇತ್ತೀಚಿನ ಆನ್-ಸೆಟ್ ಫೋಟೊ ಬಿಡುಗಡೆಯಾಗಿದ್ದು, ಬಿಳಿ ಅಂಗಿ ಮತ್ತು ಧೋತಿಯನ್ನು ಧರಿಸಿ ಗ್ರಾಮೀಣ ಭಾಗದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ಡಾಲಿ ಧನಂಜಯ್ ಅವರು ಇದೀಗ ಹಲವು ಯೋಜನೆಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಎರಡು ಪ್ರಮುಖ ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಒಂದೆಡೆ, ರೋಹಿತ್ ಪದಕಿ ನಿರ್ದೇಶನದ ಉತ್ತರಕಾಂಡ ಮತ್ತು ಶಂಕರ್ ಗುರು ನಿರ್ದೇಶನದ 'ಅಣ್ಣ ಫ್ರಂ ಮೆಕ್ಸಿಕೊ'ದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಚಿತ್ರವು ಸದ್ದಿಲ್ಲದೆ ಸೆಟ್ಟೇರಿದ್ದು, ವಿನೋದ್ ಅವರು ಫೈಟ್ ಸೀಕ್ವೆನ್ಸ್‌ಗಳ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯ ಚಿತ್ರದ ನಿರ್ಣಾಯಕ ಫೈಟ್ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದ್ದು, ಅದರ ನಂತರ ಟಾಕಿ ಭಾಗಗಳು ಮೇ 13 ರಿಂದ ಪ್ರಾರಂಭವಾಗಲಿವೆ ಎಂದು ನಿರ್ದೇಶಕ ಶಂಕರ್ ಗುರು ಹೇಳುತ್ತಾರೆ.

ಯೋಜನೆಯ ಘೋಷಣೆಯ ಸಂದರ್ಭದಲ್ಲಿ ಅನಾವರಣಗೊಂಡ ಮೋಷನ್ ಪೋಸ್ಟರ್, ಕರ್ನಾಟಕ ಧ್ವಜವನ್ನು ಲಾಕೆಟ್ ಆಗಿ ಹೊಂದಿದ್ದ ಚಿನ್ನದ ಸರ ಧರಿಸಿರುವ ಧನಂಜಯ್ ಅವರನ್ನು ತೋರಿಸಿತ್ತು. ಇದೀಗ ನಟನ ಇತ್ತೀಚಿನ ಆನ್-ಸೆಟ್ ಫೋಟೊ ಬಿಡುಗಡೆಯಾಗಿದ್ದು, ಬಿಳಿ ಅಂಗಿ ಮತ್ತು ಧೋತಿಯನ್ನು ಧರಿಸಿ ಗ್ರಾಮೀಣ ಭಾಗದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರ ಪಾತ್ರಕ್ಕೆ ತಾಜಾತನವನ್ನು ಸೇರಿಸಿದೆ.

ಬಡವ ರಾಸ್ಕಲ್ ಚಿತ್ರದ ಮೂಲಕ ಯಶಸ್ಸು ಕಂಡ ನಿರ್ದೇಶಕ ಶಂಕರ್ ಗುರು ಮತ್ತು ನಟ ಧನಂಜಯ್ ಇದೀಗ ಅಣ್ಣ ಫ್ರಂ ಮೆಕ್ಸಿಕೊ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ರಂಗಾಯಣ ರಘು, ನಾಗಭೂಷಣ್ ಮತ್ತು ಪೂರ್ಣಚಂದ್ರ ಮೈಸೂರು ಸೇರಿದಂತೆ ಬಡವ ರಾಸ್ಕಲ್‌ನಲ್ಲಿ ಕೆಲಸ ಮಾಡಿದ ಕೆಲವು ನಟರು ಈ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ಹೊಸಬರು ಸಹ ಚಿತ್ರದಲ್ಲಿರಲಿದ್ದಾರೆ.

ಸದ್ಯ ನಾಯಕಿಗಾಗಿ ಹುಡುಕಾಟ ನಡೆದಿದ್ದು, ಪ್ರಮುಖ ಪಾತ್ರವೊಂದಕ್ಕೆ ಹಿರಿಯ ನಟಿ ಉಮಾಶ್ರೀ ಅವರನ್ನು ನಿರ್ದೇಶಕರು ಕರೆತಂದಿದ್ದಾರೆ. ಉಮಾಶ್ರೀ ಅವರು ಈ ಚಿತ್ರದಲ್ಲಿ ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರತ್ನನ್ ಪ್ರಪಂಚ ಚಿತ್ರದಲ್ಲಿ ಧನಂಜಯ್ ಜೊತೆಗೆ ಅವರು ನಟಿಸಿದ್ದರು. ಅಲ್ಲದೆ, ಉತ್ತರಕಾಂಡ ಸಿನಿಮಾದಲ್ಲಿ ಕೂಡ ಉಮಾಶ್ರೀ ಅವರು ನಟ ಧನಂಜಯ್ ಜೊತೆಗೆ ನಟಿಸುತ್ತಿದ್ದಾರೆ.

ಐರಾ ಫಿಲ್ಮ್ಸ್ ಸಹಯೋಗದೊಂದಿಗೆ ಸತ್ಯ ರಾಯಲ ಅವರ ರಾಯಲ ಸ್ಟುಡಿಯೋಸ್ ನಿರ್ಮಿಸಿರುವ ಅಣ್ಣ ಫ್ರಂ ಮೆಕ್ಸಿಕೊ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಲಿದ್ದು, ಎಸ್‌ಕೆ ರಾವ್ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಇದನ್ನು ಹೊರತುಪಡಿಸಿ, ಧನಂಜಯ್ ಅವರ ದ್ವಿಭಾಷಾ ಚಿತ್ರ ಜೀಬ್ರಾ (ಕನ್ನಡ ಮತ್ತು ತೆಲುಗು) ದ ಚಿತ್ರೀಕರಣವನ್ನು ಪೂರ್ಣಗೊಂಡಿದೆ. ಪರಮ್ ನಿರ್ದೇಶನದ ಕೋಟಿ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಅಲ್ಲು ಅರ್ಜುನ್ ಅಭಿನಯದ ಬಹು ನಿರೀಕ್ಷಿತ ಪುಷ್ಪ 2- ದಿ ರೂಲ್‌ನಲ್ಲಿಯೂ ಧನಂಜಯ್ ಕಾಣಿಸಿಕೊಳ್ಳಲಿದ್ದಾರೆ. ನಿರ್ಮಾಪಕರಾಗಿ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಾಗಭೂಷಣ್ ನಟನೆಯ ವಿದ್ಯಾಪತಿ ಮತ್ತು ಜೆಸಿ- ದಿ ಯೂನಿವರ್ಸಿಟಿ ಎಂಬ ಎರಡು ಚಿತ್ರಗಳನ್ನು ಬೆಂಬಲಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT