ಚಿತ್ರದ ಪೋಸ್ಟರ್ TNIE
ಸಿನಿಮಾ ಸುದ್ದಿ

ಮರಾಠಿಯ 'ಕಾಸ್ರಾ' ಕನ್ನಡ ರಿಮೇಕ್ 'ಜೈ ಕಿಸಾನ್' ಚಿತ್ರದ ಬಿಡುಗಡೆಗೆ ದಿನಾಂಕ ಫಿಕ್ಸ್!

ವಿದ್ಯಾವಂತ ಯುವಕನೊಬ್ಬ ಅವಶ್ಯಕತೆಯಿಂದ ಕೃಷಿಗೆ ತಿರುಗುತ್ತಾನೆ. ನಂತರ ಆತ ಕೃಷಿ ಮಾಡಿ ಗೆಲ್ಲುತ್ತಾನಾ ಎಂಬುದನ್ನು ಚಿತ್ರದ ಮೂಲಕ ಕಟ್ಟಿಕೊಡಲಾಗಿದೆ ನಿರ್ದೇಶಕ ವಿಕಾಸ್ ವಿಲಾಸ್ ಮಿಸಾಳ್ ಹೇಳುತ್ತಾರೆ.

ಮರಾಠಿಯ ಕಾಸ್ರಾ ಚಿತ್ರದ ಕನ್ನಡ ರಿಮೇಕ್ ಜೈ ಕಿಸಾನ್ ರಾಜ್ಯಾದ್ಯಂತ ನವೆಂಬರ್ 7ರಂದು ಬಿಡುಗಡೆಯಾಗುತ್ತಿದೆ. 2024ರ ಮೇನಲ್ಲಿ ಮರಾಠಿಯಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಮಹಾರಾಷ್ಟ್ರದ ರವಿ ನಾಗ್‌ಪುರೇ ಕಥೆ ಬರೆದು ನಿರ್ಮಿಸಿದ್ದಾರೆ. ಆಧುನಿಕ ಕೃಷಿ ಪದ್ಧತಿಗಳನ್ನು ಪ್ರಚಾರ ಮಾಡುವಾಗ ರೈತರು ಎದುರಿಸುವ ಸವಾಲುಗಳನ್ನು ಚಿತ್ರಿಸಲಾಗಿದೆ.

ಇತ್ತೀಚಿನ ಮಾಧ್ಯಮ ಸಂವಾದದಲ್ಲಿ ರವಿ ನಾಗ್‌ಪುರೇ ಚಿತ್ರದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ರೈತನೊಬ್ಬನ ಕುರಿತಾದ ಈ ಚಿತ್ರದ ಕಥೆಯು ಮನಸೆಳೆಯುವಂತಿದೆ. ಮರಾಠಿಯಲ್ಲಿ ಯಶಸ್ವಿಯಾಗಿ ಬಿಡುಗಡೆಯಾದ ನಂತರ, ಇದು ಕನ್ನಡ ಆವೃತ್ತಿಗೆ ಅರ್ಹವಾಗಿದೆ ಎಂದು ನಾನು ಭಾವಿಸಿದೆ ಎಂದು ಹೇಳಿದರು.

ರೈತರ ಹೋರಾಟಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ತಮ್ಮ ಹೆಣ್ಣುಮಕ್ಕಳನ್ನು ರೈತರ ಮಕ್ಕಳಿಗೆ ಮದುವೆ ಮಾಡಿಕೊಡಬಾರದು ಎಂಬ ನಂಬಿಕೆಗೆ ನಾನು ಸವಾಲು ಹಾಕುತ್ತೇನೆ. ವಿದ್ಯಾವಂತರು ಆಧುನಿಕವಾಗಿ ಕೃಷಿಯನ್ನು ಅಳವಡಿಸಿಕೊಳ್ಳಬೇಕು. ಕೃಷಿಯು ಅನೇಕ ಅವಕಾಶಗಳನ್ನು ನೀಡುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಪ್ರಮುಖವಾಗಿ ಕೇಂದ್ರಿಕರಿಸಲಾಗಿದೆ ಎಂದರು.

ವಿದ್ಯಾವಂತ ಯುವಕನೊಬ್ಬ ಅವಶ್ಯಕತೆಯಿಂದ ಕೃಷಿಗೆ ತಿರುಗುತ್ತಾನೆ. ನಂತರ ಆತ ಕೃಷಿ ಮಾಡಿ ಗೆಲ್ಲುತ್ತಾನಾ ಎಂಬುದನ್ನು ಚಿತ್ರದ ಮೂಲಕ ಕಟ್ಟಿಕೊಡಲಾಗಿದೆ ನಿರ್ದೇಶಕ ವಿಕಾಸ್ ವಿಲಾಸ್ ಮಿಸಾಳ್ ಹೇಳುತ್ತಾರೆ. ನಾಗಪುರೆಯವರ ಉದ್ದೇಶವನ್ನು ಶ್ಲಾಘಿಸಿದ ಅವರು, ರವಿ ನಾಗ್ಪುರೆ ಬರೆದ ಕಥೆಯು ಅಸಾಧಾರಣವಾಗಿದೆ. ಅದನ್ನು ನಿರ್ದೇಶಿಸುವ ಭಾಗ್ಯ ನನಗೆ ಸಿಕ್ಕಿದೆ. ನಾಯಕ ನಟರಾಗಿ ಜನಮೇಜಯ್ ತೆಲಂಗ್ ಮತ್ತು ತನ್ವಿ ಸಾವಂತ್ ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ನನ್ನ ಪಾತ್ರವು ಆಧುನಿಕ ಕೃಷಿ ಪದ್ಧತಿಗಳು ಇತರರಿಗೆ ಮಾದರಿಯಾಗುತ್ತದೆ ಎಂದು ನಾಯಕ ನಟ ಜನಮೇಜಯ್ ತೆಲಂಗ್ ಹೇಳಿದರೆ, ನಟಿ ತನ್ವಿ ಸಾವಂತ್, ಚಿತ್ರದಲ್ಲಿನ ನನ್ನ ಪಾತ್ರದ ಬಗ್ಗೆ ನನಗೆ ಹೆಮ್ಮೆ ಇದೆ. ಇದು ಶಕ್ತಿಯುತ ಸಂದೇಶವನ್ನು ಹೊಂದಿದೆ ಎಂದು ನಂಬುತ್ತೇನೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel