ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ನಟಿ ರಾಧಿಕಾ ಕುಮಾರಸ್ವಾಮಿ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಬಂಧನದ ಬಗ್ಗೆ ಖಾಸಗಿ ವಾಹಿನಿ ಜೊತೆ ಮಾತನಾಡಿರುವ ರಾಧಿಕಾ ಕುಮಾರಸ್ವಾಮಿ, "ದರ್ಶನ್ ಅವರ ಪ್ರಕರಣ ಮನಸ್ಸಿಗೆ ತುಂಬಾ ನೋವು ಕೊಡುವ ವಿಚಾರ ಎಂದಿದ್ದಾರೆ.
ದಿಢೀರ್ ಅಂತ ಈ ನ್ಯೂಸ್ ಕೇಳಿ ಶಾಕ್ ಆಯ್ತು. ಅಯ್ಯೋ ಏನಪ್ಪ ಈ ರೀತಿ ಆಗೋಯ್ತು ಅಂತ ಬೇಸರ ಆಯ್ತು. ನಮ್ಮ ಇಂಡಸ್ಟ್ರಿಯಲ್ಲಿ ಇರೋರು ಕೆಲವೇ ಕೆಲವರು ಮಾತ್ರ. ನಮ್ಮ ಇಂಡಸ್ಟ್ರಿಗೆ ಅವರು ಬೇಕಾಗಿದ್ದಾರೆ. ಅವರ ಬದುಕಲ್ಲಿ ಏನು ನಡೆದಿದೆ ಅನ್ನೋದು ಅವರಿಗೆ ಮಾತ್ರ ಗೊತ್ತು. ನಾನು ನಿರ್ಮಾಪಕಿಯಾಗಿ ಹೇಳೋದಾದರೆ ಒಳ್ಳೆಯ ನಟನನ್ನು ನಾವು ಕಳೆದುಕೊಳ್ಳುತ್ತಿದ್ದೀವಾ? ಯಾಕೆ ಅವರ ಲೈಫ್ನಲ್ಲಿ ಹೀಗೆ ಆಯ್ತು? ಇನ್ನೊಂದು ಅವರ ಜೀವನದಲ್ಲಿ ಏನೆಲ್ಲಾ ನಡೆದಿದೆ ಅಂತ ನಮಗೆ ಗೊತ್ತಿಲ್ಲ. ಅಲ್ಲಿ ಏನ್ ನಡೆದಿದೆ ಅಂತ ಅವರಿಗೆ ಮಾತ್ರ ಗೊತ್ತಿರುತ್ತೆ. ನಮ್ಮ ಇಂಡಸ್ಟ್ರಿಗೆ ಅವರು ಬೇಕೇಬೇಕು. ಕಾನೂನಿನ ಬಗ್ಗೆಯಾಗಲಿ, ಅಧಿಕಾರಿಗಳ ಬಗ್ಗೆಯಾಗಲಿ ಮಾತನಾಡುವಷ್ಟು ನಾನು ದೊಡ್ಡವನಲ್ಲ. ಅವರಿಗೆ ಏನೆಲ್ಲಾ ಕಷ್ಟಗಳು ಬಂದಿದೆ, ಆದಷ್ಟು ಬೇಗ ಒಳ್ಳೆಯದಾಗಲಿ ಅಂತ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ಅನಾಥರು ಮತ್ತು ಮಂಡ್ಯ ಸಿನಿಮಾದಲ್ಲಿ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಶೂಟಿಂಗ್ ವೇಳೆ ಟೆಕ್ನಿಶಿಯನ್, ಸೆಟ್ ಹುಡುಗರ ಜೊತೆ ಅಣ್ಣಾ ಬನ್ನಿ ಹೋಗಿ ಎಂದು ಗೌರವ ಕೊಟ್ಟೇ ಮಾತನಾಡುತ್ತಿದ್ದರು. ಎಲ್ಲರ ಜೊತೆ ಸುಲಭವಾಗಿ ಬೆರೆಯೋರು" ಎಂದು ಹೇಳಿದ್ದಾರೆ. "ತಾವೊಬ್ಬ ದೊಡ್ಡ ನಟ ಎನ್ನುವ ಅಹಂ ಕೂಡ ಅವರಲ್ಲಿ ಇರಲಿಲ್ಲ, ದೊಡ್ಡ ಹೀರೋ ಎನ್ನುವಂತೆ ಕೂಡ ನಡೆದುಕೊಳ್ಳುತ್ತರಲಿಲ್ಲ. ಆದರೆ ಈ ವಿಚಾರ ಕೇಳಿದಾಗ, ನಿಜಾನ ಇದು ಎನ್ನಿಸಿಬಿಡ್ತು. ಒಂದು ಕ್ಷಣ ನನಗೆ ನಂಬಲು ಆಗಲಿಲ್ಲ, ಇದೆಲ್ಲಾ ನಿಜವಾ ಎನ್ನುವ ಅನುಮಾನ ಶುರುವಾಯಿತು. ಮಾಧ್ಯಮಗಳಲ್ಲಿ ಬರೋದು, ಯಾರೋ ಇದರ ಬಗ್ಗೆ ಹೇಳಿದಷ್ಟೇ ನಮಗೆ ಗೊತ್ತಾಗೋದು. ಆದರೆ ಅವರ ಬದುಕಿನಲ್ಲಿ ನಿಜಕ್ಕೂ ಏನಾಗಿದೆ ಎನ್ನುವುದು ನಮಗೆ ಗೊತ್ತಾಗಲ್ಲ. ಗೊತ್ತಿಲ್ಲದೆ ಅವರ ಬಗ್ಗೆ ಕಾಮೆಂಟ್ ಮಾಡೋದು ತಪ್ಪು, ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ದರ್ಶನ್ ನಮ್ಮ ಚಿತ್ರರಂಗಕ್ಕೆ ಬೇಕು, ಅವರಿಗೆ ಒಳ್ಳಾದಗಲಿ ಎಂದು ಕೇಳ್ತೀನಿ ಅಷ್ಟೆ ಎಂದರು.