ನಟಿ ರಾಧ್ಯಾ  
ಸಿನಿಮಾ ಸುದ್ದಿ

ರಾನಿಯಲ್ಲಿನ ನನ್ನ ಪಾತ್ರ ಜನರಿಗೆ ಇಷ್ಟವಾಗಿದೆ, ಜಾಲತಾಣಗಳಲ್ಲಿ ಮೆಚ್ಚುಗೆಯ ಮಾತುಗಳು ಬರುತ್ತಿವೆ: ನಟಿ ರಾಧ್ಯಾ

ರಾನಿ ಚಿತ್ರದಲ್ಲಿ ನನ್ನ ಪಾತ್ರ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಶೇಡ್ ನಲ್ಲಿದೆ. ಹೀಗಾಗಿ ಪ್ರೇಕ್ಷಕರ ಪ್ರತಿಕ್ರಿಯೆ ಬಗ್ಗೆ ಭಯವಿತ್ತು. ಆದರೆ, ಜನರು ನನ್ನನ್ನು ಇಷ್ಟಪಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿರುತ್ತಿರುವ ಪ್ರತಿಕ್ರಿಯೆ ಸಂತಸ ತಂದಿದೆ ಎಂದು ನಟಿ ರಾಧ್ಯಾ ಹೇಳಿದ್ದಾರೆ.

ಗುರುತೇಜ್​ ಶೆಟ್ಟಿ ನಿರ್ದೇಶನದ, “ಕನ್ನಡತಿ’ ಧಾರಾವಾಹಿ ಖ್ಯಾತಿಯ ಕಿರಣ್​ ರಾಜ್​ ನಾಯಕನಾಗಿರುವ ಸಿನಿಮಾ “ರಾನಿ’ ಸಿನಿಮಾ ಬಿಡುಗಡೆಗೊಂಡು ಚಿತ್ರಮಂದಿರಗಳಲ್ಲಿ 2ನೇ ವಾರ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ.

ಚಿತ್ರದ ಕುರಿತು ಪ್ರೇಕ್ಷಕರ ಪ್ರತಿಕ್ರಿಯೆಗೆ ನಟಿ ರಾಧ್ಯಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ನನ್ನ ಪಾತ್ರ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ಶೇಡ್ ನಲ್ಲಿದೆ. ಹೀಗಾಗಿ ಪ್ರೇಕ್ಷಕರ ಪ್ರತಿಕ್ರಿಯೆ ಬಗ್ಗೆ ಭಯವಿತ್ತು. ಆದರೆ, ಜನರು ನನ್ನನ್ನು ಇಷ್ಟಪಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿರುತ್ತಿರುವ ಪ್ರತಿಕ್ರಿಯೆ ಸಂತಸ ತಂದಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಚಿತ್ರರಂಗದಲ್ಲಿ ಇತರೆ ರಾಜ್ಯಗಳ ಕಲಾವಿದರಿದೆ ಆದ್ಯತೆ ನೀಡುತ್ತಿರುವ ಕುರಿತು ನಟಿ ಬೇಸರ ಹೊರಹಾಕಿದ್ದಾರೆ.

ನನ್ನ ಪರಿಶ್ರಮವನ್ನು ಚಿತ್ರರಂಗ ಗುರ್ತಿಸಿರುವುದಕ್ಕೆ ಸಂತಸವಿದೆ. ಆದರೆ, ಕನ್ನಡ ನಟ-ನಟಿಯರಿಗೆ ಬೆಂಬಲ ನೀಡಬೇಕೆಂಬುದು ಕೇವಲ ಧ್ವನಿಯಾಗಿಯೇ ಉಳಿದಿದೆ. ಸಾಕಷ್ಟು ಪ್ರತಿಭೆಗಳ ಹೊರತಾಗಿಯು ನಿರ್ಮಾಪಕರು ಇತರೆ ರಾಜ್ಯಗಳ ನಟ-ನಟಿಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ವೇದಿಕೆಗಳಲ್ಲಿಯೂ ಕಳವಳ ವ್ಯಕ್ತಪಡಿಲಿದ್ದೇನೆ. ಇದರ ಹಿಂದಿರುವ ವಾಸ್ತವತೆ ನನಗೆ ತಿಳಿದಿಲ್ಲ ಆದರೆ, ಬದಲಾವಣೆಯನ್ನು ಬಯಸುತ್ತಿದ್ದೇನೆಂದು ತಿಳಿಸಿದ್ದಾರೆ.

ಬಳಿಕ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿಯವರನ್ನು ನಟಿ ಶ್ಲಾಘಿಸಿದ್ದಾರೆ.

ನನಗೆ ತಮಿಳು ಹಾಗೂ ತೆಲುಗು ಚಿತ್ರಗಳಿಗೆ ಸಾಕಷ್ಟು ಆಫರ್ ಗಳು ಬರುತ್ತಿವೆ. ಆದರೆ, ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ. ಇಲ್ಲಿನ ಉತ್ತಮ ಸಿನಿಮಾಗಳಿಗಾಗಿ ಹುಡುಕುತ್ತಿದ್ದೇನೆ. ಹೊಸ ಸಿನಿಮಾ ನಿರ್ಮಾಣ ಸಂಸ್ಥೆಗಳೊಂದಿಗೆ ಕೆಲಸ ಮಾಡಲು ನಾನು ಸಿದ್ಧ. ಆದರೆ, ಸಾಕಷ್ಟು ಮಂದಿ ಆರಂಭದಲ್ಲಿ ಉತ್ತಮ ಬಲದೊಂದಿಗೆ ಬಂದರೂ ನಂತರ ಸೂಕ್ತ ಬೆಂಬಲ ಸಿಗದೆ ಸಂಕಷ್ಟ ಅನುಭವಿಸುತ್ತಾರೆ. ಇದರಿಂದ ಹಣ ಹಾಗೂ ಸಮಯ ಎರಡೂ ವ್ಯರ್ಥವಾಗುತ್ತದೆ. ಇದೀಗ ನಾನು ನನ್ನ ವೃತ್ತಿಜೀವನದ ಬೆಳವಣಿಗೆಯ ಮೇಲೆ ಗಮನಹರಿಸುತ್ತಿದ್ದೇನೆ. ಹಣ ಸಂಪಾದಿಸುವ ಬದಲಿಗೆ ಸಮಯವಾದರೂ ಉತ್ತಮ ಸಿನಿಮಾಗಳ ಆಯ್ಕೆ ಮಾಡಲು ಬಯಸಿದ್ದೇನೆ. ಆತುರಪಡದೆ, ನನ್ನದೇ ಹೆಜ್ಜೆ ಮೂಲಕ ಉದಾಹರಣೆಯೊಂದಿಗೆ ಮುನ್ನಡೆಯುತ್ತೇನೆಂದು ರಾಧ್ಯಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

1st ODI: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್, ಸಚಿನ್ ತೆಂಡೂಲ್ಕರ್, ಸಂಗಕ್ಕಾರ ದಾಖಲೆ ಮುರಿದ Virat Kohli

ಗಂಗೂಲಿ ಹಿಂದಿಕ್ಕಿದ ವಿರಾಟ್ ಕೊಹ್ಲಿ: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಈ ಮೈಲಿಗಲ್ಲು ಸಾಧಿಸಿದ Kohli

SCROLL FOR NEXT