ನೀನಾ ಗುಪ್ತ  online desk
ಸಿನಿಮಾ ಸುದ್ದಿ

ಸೆಕ್ಸ್ ಇರೋದು ಎಂಜಾಯ್ ಮಾಡುವುದಕ್ಕೆ ಎಂಬುದು ಭಾರತದ ಬಹುತೇಕ ಮಹಿಳೆಯರಿಗೆ ಗೊತ್ತೇ ಇಲ್ಲ, ಗಂಡಸರನ್ನು ಮೆಚ್ಚಿಸಿ, ಮಗು ಹೆರುತ್ತಾರೆ: Neena Gupta

ಲಿಲ್ಲಿಂಗ್ ಸಿಂಗ್ ಜೊತೆ ಸಂದರ್ಶನದಲ್ಲಿ ಮಾತನಾಡಿರುವ ಹಿರಿಯ ನಟಿ ನೀನಾ ಗುಪ್ತಾ, ಭಾರತದ ಮಹಿಳೆಯರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ನೇರ ಮಾತುಗಳಿಂದಲೇ ಸುದ್ದಿಯಾಗುವ ಹಿರಿಯ ನಟಿ ನೀನಾ ಗುಪ್ತಾ, ಸೆಕ್ಸ್ ಬಗ್ಗೆ ಮಾತನಾಡಿ ಈಗ ಸುದ್ದಿಯಲ್ಲಿದ್ದಾರೆ.

ಲಿಲ್ಲಿಂಗ್ ಸಿಂಗ್ ಜೊತೆ ಸಂದರ್ಶನದಲ್ಲಿ ಮಾತನಾಡಿರುವ ಹಿರಿಯ ನಟಿ ನೀನಾ ಗುಪ್ತಾ, ಭಾರತದ ಮಹಿಳೆಯರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿರುವ ಬಹುತೇಕ ಮಹಿಳೆಯರಿಗೆ ಸೆಕ್ಸ್ ಎಂಬುದು ತಮ್ಮ ಸಂತೋಷಕ್ಕಾಗಿ ಇರುವುದೆಂದು ತಿಳಿದೇ ಇಲ್ಲ. ಸೆಕ್ಸ್ ಇರುವುದು ಪುರುಷರ ಸಂತೋಷಕ್ಕಾಗಿ ಹಾಗೂ ಮಕ್ಕಳನ್ನು ಹೆರುವುದಕ್ಕಾಗಿ ಎಂದು ಭಾವಿಸಿರುವುದಾಗಿ ನೀನಾ ಗುಪ್ತಾ ಹೇಳಿದ್ದಾರೆ.

"ಮಹಿಳೆಯರು ಮತ್ತು ಲೈಂಗಿಕತೆಯ ಬಗ್ಗೆ ನನಗೆ ತುಂಬಾ ದುಃಖವಾಗುತ್ತದೆ. ನಾನು ಭಾರತದ ಬಗ್ಗೆ ಮಾತನಾಡುತ್ತಿದ್ದೇನೆ. ನಾನು 99 ಅಥವಾ ಬಹುಶಃ 95% ಭಾರತೀಯ ಮಹಿಳೆಯರ ಬಗ್ಗೆ ಮಾತನಾಡುತ್ತಿದ್ದೇನೆ. ಅವರಿಗೆ ಲೈಂಗಿಕತೆಯು ಆನಂದಕ್ಕಾಗಿ ಎಂದು ತಿಳಿದಿಲ್ಲ. ಅವರು ಇದು ಪುರುಷನನ್ನು ಮೆಚ್ಚಿಸಲು ಮತ್ತು ಮಕ್ಕಳನ್ನು ಹೊಂದಲಷ್ಟೇ ಇರುವುದು ಎಂದು ಭಾವಿಸುತ್ತಾರೆ.

ಲಿಲ್ಲಿ ಸಿಂಗ್ 'ಸೆಕ್ಸ್' ಎಂಬ ಪದವನ್ನು ಪಿಸುಗುಟ್ಟದೇ ಹೇಳಿದ್ದಕ್ಕಾಗಿ, ನಾನು ಮೊದಲು ಮನೆಯಲ್ಲಿ ಸೆಕ್ಸ್ ಎಂಬ ಶಬ್ದ ಬಳಕೆ ಮಾಡುವುದಕ್ಕೂ ಹಿಂಜರಿಯುತ್ತಿದ್ದೆ. ಆದರೆ ಈಗ ಅದನ್ನು ನಿಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.

ಇತರ ನಟರು ತಮ್ಮ ಮೈಕ್‌ಗಳನ್ನು ತಮ್ಮ ಬಟ್ಟೆಯ ಒಳಗೆ ಇರಿಸಲು ಗ್ರೀನ್ ರೂಮ್‌ಗಳನ್ನು ಬಳಸುತ್ತಾರೆ, ಆದರೆ ತಾವು ಚಿತ್ರೀಕರಣದ ಸ್ಥಳದಲ್ಲಿ ಎಲ್ಲರೂ ಸುತ್ತಲೂ ಇರುವಾಗಲೇ ಮೈಕ್‌ ಹಾಕಿಕೊಂಡರು, ಯಾರು ನೋಡುತ್ತಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನೀನಾ ಗುಪ್ತಾ ಹೇಳಿದ್ದಾರೆ.

"ಬಾಂಬೆಯಲ್ಲಿ ಉತ್ತಮವಾದ ವಿಷಯವೆಂದರೆ ತಾಂತ್ರಿಕ ಸಿಬ್ಬಂದಿ, ಲೈಟ್ ಮ್ಯಾನ್, ಸೌಂಡ್ ಜನರು, ಅವರು ನಿಮ್ಮನ್ನು ನೋಡುವುದಿಲ್ಲ, ಎಲ್ಲರೂ ಹೀಗೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಮತ್ತು ಈಗ ಹಲವು ವರ್ಷಗಳಿಂದ, ನನಗೆ ಗ್ರೀನ್ ರೂಮ್ ಗೆ ಹೋಗಬೇಕೆಂದು ಅನ್ನಿಸುವುದಿಲ್ಲ ಎಂದು ನಟಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

Uorfi Javed: ಮದ್ವೆ ಆಗ್ತೀನೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಾಯಿ ಆಗ್ತೀನಿ; ಸೀಕ್ರೆಟ್‌ ರಿವೀಲ್ ಮಾಡಿದ ಉರ್ಫಿ ಜಾವೇದ್

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ