ಧನುಷ್ 
ಸಿನಿಮಾ ಸುದ್ದಿ

ಧನುಷ್ ಅಭಿನಯದ 'ಕುಬೇರ' ಚಿತ್ರದ ಮೊದಲ ಹಾಡು 'ಜಾಕೆ ಆನಾ ಯಾರ್' ಬಿಡುಗಡೆ

ತಮಿಳಿನಲ್ಲಿ ಪೊಯಿವಾ ನನ್ಬಾ ಮತ್ತು ತೆಲುಗಿನಲ್ಲಿ ಪೊಯಿರಾ ಮಾಮಾ ಎಂದು ಹೆಸರಿಸಲಾದ ಈ ಹಾಡನ್ನು ಧನುಷ್ ಎರಡೂ ಭಾಷೆಗಳಲ್ಲಿ ಹಾಡಿದ್ದಾರೆ.

ತಮಿಳು ಸೂಪರ್‌ಸ್ಟಾರ್ ಧನುಷ್ ಅಭಿನಯದ ಕುಬೇರ ಚಿತ್ರದ ನಿರ್ಮಾಪಕರು ಭಾನುವಾರ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದಾರೆ.

ತಮಿಳಿನಲ್ಲಿ ಪೊಯಿವಾ ನನ್ಬಾ ಮತ್ತು ತೆಲುಗಿನಲ್ಲಿ ಪೊಯಿರಾ ಮಾಮಾ ಎಂದು ಹೆಸರಿಸಲಾದ ಈ ಹಾಡನ್ನು ಧನುಷ್ ಎರಡೂ ಭಾಷೆಗಳಲ್ಲಿ ಹಾಡಿದ್ದಾರೆ. ಜಾಕೆ ಆನಾ ಯಾರಾ ಎಂಬ ಶೀರ್ಷಿಕೆಯ ಹಿಂದಿ ಆವೃತ್ತಿಯನ್ನು ನಕಾಶ್ ಅಜೀಜ್ ಅವರು ಹಾಡಿದ್ದಾರೆ.

ದೇವಿ ಶ್ರೀ ಪ್ರಸಾದ್ ಅವರು ಸಂಗೀತ ಸಂಯೋಜಿಸಿದ್ದು, "ನಾವು ಮೂವರು ಒಟ್ಟಿಗೆ ಬಂದಾಗ ಸಂಗೀತ, ಮಸ್ತಿ ಮತ್ತು ಮ್ಯಾಜಿಕ್ ನಿರೀಕ್ಷಿಸಿ" ಎಂದು ಚಿತ್ರದ ನಿರ್ದೇಶಕ ಶೇಖರ್ ಕಮ್ಮುಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿಗೆ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ಸಿನಿಮಾ ತೀವ್ರ ಕುತೂಹಲ ಮೂಡಿಸಿದೆ. ಧನುಷ್ ಭಿಕ್ಷುಕನಾಗಿ, ನಾಗಾರ್ಜುನ ಶ್ರೀಮಂತನಾಗಿ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಗೆ ಪ್ರೇಕ್ಷಕರು ಕಾಯುತ್ತಿರುವ ಹೊತ್ತಿನಲ್ಲೇ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ.

ಕುಬೇರ ಚಿತ್ರದಲ್ಲಿ ನಾಗಾರ್ಜುನ, ಕೃತಿ ಸನೋನ್, ರಶ್ಮಿಕಾ ಮಂದಣ್ಣ ಮತ್ತು ಜಿಮ್ ಸರ್ಭ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರಕ್ಕೆ ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್‌ಎಲ್‌ಪಿ ಮತ್ತು ಅಮಿಗೋಸ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ . ಈ ಚಿತ್ರ ಜೂನ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Yemen ಕರಾವಳಿಯಲ್ಲಿ ಭಾರತೀಯ ಧ್ವಜದ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ; ಸಮುದ್ರದಲ್ಲಿ ಮುಳುಗಿದ ಹಡಗು, 13 ಭಾರತೀಯರು ಸೇರಿ ಎಲ್ಲಾ 14 ಸಿಬ್ಬಂದಿ ರಕ್ಷಣೆ..!

ಮಾಧ್ಯಮಗಳ ಧ್ವನಿ ಅಡಗಿಸಲು ಪಾಕ್‌ ಮುಂದು? ಅನುಮತಿ ಇಲ್ಲದೆ ವರದಿಗಾರಿಕೆಗೆ ನಿಷೇಧ; ಸತ್ಯ ಮುಚ್ಚಿಡಲು ವಿದೇಶಿ ಮಾಧ್ಯಮಗಳ ರೆಕ್ಕೆ ಕತ್ತರಿಸಿದ ಸರ್ಕಾರ..!

ತ್ರಿಶಾ ವಿರುದ್ಧ ಡಬಲ್ ಮೀನಿಂಗ್ ಹೇಳಿಕೆ: ವಿಚಾರಣೆ ಬಳಿಕ ಠಾಣೆಯಿಂದ ಉದಯನಿಧಿ ಬಿಡುಗಡೆ, ಅಭಿಮಾನಿಗಳಿಂದ ಸಂಭ್ರಮ!

585.72 ಕೋಟಿ ರೂ. ಬೆಳೆ ವಿಮೆ ಪರಿಹಾರ ವಿತರಣೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಗಜಿನಿ, ಲಗಾನ್ ಚಿತ್ರದಲ್ಲಿ ನಟಿಸಿದ್ದ ಖ್ಯಾತ ಖಳನಾಯಕ ಪ್ರದೀಪ್ ರಾವತ್‌ ನಿಧನ