ನವದೆಹಲಿ: ರಜನಿಕಾಂತ್ ನಟನೆಯ ಕೂಲಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಓಟ ಮುಂದುವರಿಸಿದ್ದು, ಭರ್ಜರಿ ಕಲೆಕ್ಷನ್ ಕಾಣುತ್ತಿದೆ. ಆಗಸ್ಟ್ 14 ರಂದು ಬಿಡುಗಡೆಯಾದ ಈ ಚಿತ್ರವು ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ನಟಿಸಿರುವ ವಾರ್ 2 ಅನ್ನು ಹಿಂದಿಕ್ಕಿದೆ.
ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಕೂಲಿ ಬಿಡುಗಡೆಯಾದ ಮೊದಲ ದಿನ (ಗುರುವಾರ) ಭಾರತದಲ್ಲಿ 65 ಕೋಟಿ ರೂ. ಗಳಿಕೆ ಕಂಡಿದೆ. ನಂತರ 2 ನೇ ದಿನ (ಶುಕ್ರವಾರ) 54.75 ಕೋಟಿ ರೂ. ಗಳಿಸಿದೆ.
ಶನಿವಾರವಾದ ಮೂರನೇ ದಿನದ ಆರಂಭಿಕ ಅಂದಾಜಿನ ಪ್ರಕಾರ, ಚಿತ್ರವು 38.5 ಕೋಟಿ ರೂಪಾಯಿಗಳ ಗಳಿಕೆಯನ್ನು ದಾಖಲಿಸಿದ್ದು, ಮೂರು ದಿನಗಳಲ್ಲಿ ಭಾರತದ ಒಟ್ಟು ನಿವ್ವಳ ಗಳಿಕೆ 158.25 ಕೋಟಿ ರೂಪಾಯಿಗಳಿಗೆ ತಲುಪಿದೆ. ಜಾಗತಿಕವಾಗಿ ಚಿತ್ರದ ಗಳಿಕೆ 300 ಕೋಟಿ ರೂಪಾಯಿಗಳನ್ನು ದಾಟಿದೆ.
ವ್ಯಾಪಾರ ವಿಶ್ಲೇಷಕ ಸುಮಿತ್ ಕಡೇಲ್ ಪ್ರಕಾರ, ವಿಶ್ವದಾದ್ಯಂತ ಒಟ್ಟು ಗಳಿಕೆ 320-325 ಕೋಟಿ ರೂಪಾಯಿಗಳ ನಡುವೆ ಇದ್ದು, ಈ ಮೈಲಿಗಲ್ಲನ್ನು ತಲುಪಿದ ಅತ್ಯಂತ ವೇಗದ ತಮಿಳು ಚಿತ್ರ ಇದಾಗಿದೆ.
ಶನಿವಾರ, ಶೇ 65.99 ರಷ್ಟು ತಮಿಳು ವೀಕ್ಷಕರ ಸಂಖ್ಯೆಯನ್ನು ಕಂಡಿತು. ಚೆನ್ನೈ (88.75%), ಕೊಯಮತ್ತೂರು (83.75%), ಪಾಂಡಿಚೇರಿ (86.50%) ಮತ್ತು ತಿರುಚ್ಚಿ (89%) ಮುಂತಾದ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಚಿತ್ರವನ್ನು ವೀಕ್ಷಿಸಿದ್ದಾರೆ. ರಾತ್ರಿ ಪ್ರದರ್ಶನಗಳಿದೆ ಶೇ 79.71% ರಷ್ಟು ಜನರು ಬಂದಿದ್ದರು.
ಇದರೊಂದಿಗೆ, ಕೂಲಿ ಚಿತ್ರ ಈಗಾಗಲೇ ರಜನಿಕಾಂತ್ ಅವರ ಹಿಂದಿನ ಚಿತ್ರ ವೆಟ್ಟೈಯಾನ್ ಗಳಿಕೆಯನ್ನು ಮೀರಿಸಿದೆ. ಅದು 146.89 ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು.
ಫ್ರಾನ್ಸ್‌ನಲ್ಲಿ, ಕೂಲಿ ಚಿತ್ರಕ್ಕೆ ಮೊದಲ ದಿನದಂದು 8,800 ಟಿಕೆಟ್‌ಗಳು ಮಾರಾಟವಾಗಿದ್ದು, ಹೊಸ ದಾಖಲೆ ಬರೆದಿದೆ. ಈ ಮೂಲಕ ವಿಜಯ್ ಅವರ ಲಿಯೋ ಚಿತ್ರವನ್ನು ಮೀರಿಸಿದೆ. ಲಿಯೋ ಚಿತ್ರದ 8,500 ಟಿಕೆಟ್‌ಗಳು ಮಾರಾಟವಾಗಿದ್ದವು.
ಸಿಂಗಾಪುರ, ಯುಎಇ, ಮಲೇಷ್ಯಾ, ಶ್ರೀಲಂಕಾ ಮತ್ತು ಉತ್ತರ ಅಮೆರಿಕಾ ಸೇರಿದಂತೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.
ಶ್ರುತಿ ಹಾಸನ್, ಉಪೇಂದ್ರ ಮತ್ತು ಸೌಬಿನ್ ಶಾಹಿರ್ ಕೂಡ ನಟಿಸಿರುವ ಕೂಲಿ ಚಿತ್ರದಲ್ಲಿ ಆಮಿರ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ.
ಕೂಲಿ ಈಗ 600 ಕೋಟಿ ರೂ.ಗಳ ಕ್ಲಬ್ ಮೇಲೆ ಕಣ್ಣಿಟ್ಟಿದ್ದು, ಈ ಮೈಲಿಗಲ್ಲನ್ನು ಕೇವಲ ಮೂರು ತಮಿಳು ಚಿತ್ರಗಳು ತಲುಪಿವೆ: 2.0, ಜೈಲರ್ ಮತ್ತು ಲಿಯೋ.