ಸು ಫ್ರಮ್ ಸೋ ಚಿತ್ರದ ಪೋಸ್ಟರ್‌ 
ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್‌ನಲ್ಲಿ ತಗ್ಗದ 'ಸು ಫ್ರಮ್ ಸೋ' ಅಬ್ಬರ; ರಾಜ್ ಬಿ ಶೆಟ್ಟಿ ನಿರ್ಮಾಣದ ಚಿತ್ರ ಗಳಿಸಿದ್ದೆಷ್ಟು?

ನಿರ್ಮಾಣದ ಜೊತೆಗೆ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದು, ಜೆಪಿ ತುಮಿನಾಡ್, ಶನೀಲ್ ಗೌತಮ್, ಸಂಧ್ಯಾ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಾಜೆ, ಮೈಮ್ ಪ್ರಸಾದ್ ಮತ್ತು ಪುಷ್ಪರಾಜ್ ಬೋಳಾರ್ ಮುಂತಾದವರು ನಟಿಸಿದ್ದಾರೆ.

ಜುಲೈ 25 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 'ಸು ಫ್ರಮ್ ಸೋ' ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಾಣುತ್ತಾ ಸಾಗಿದೆ. ದಿನ ಕಳೆದಂತೆಯೂ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆಸುವಲ್ಲಿ ಯಶಸ್ವಿಯಾಗಿದೆ. ಜೆಪಿ ತುಮಿನಾಡ್ ನಿರ್ದೇಶನದ ಈ ಚಿತ್ರವು ಕೆಲವೇ ಕನ್ನಡ ಚಿತ್ರಗಳು ಕಂಡ ದಾಖಲೆಯನ್ನು ಮುಟ್ಟಿದೆ. ಬಾಕ್ಸ್ ಆಫೀಸ್‌ನಲ್ಲಿ ಭಾರತದಲ್ಲಿ ₹ 100 ಕೋಟಿಗೂ ಹೆಚ್ಚು ಗಳಿಸಿರುವ ಸು ಫ್ರಮ್ ಸೋ ಚಿತ್ರವು ವಿದೇಶಿ ಪ್ರೇಕ್ಷಕರಿಗೂ ಮೆಚ್ಚುಗೆಯಾಗಿದೆ. ಚಿತ್ರ ವಿದೇಶಗಳಲ್ಲಿಯೂ ₹ 15 ಕೋಟಿ ಕಲೆಕ್ಷನ್ ಮಾಡಿದೆ.

₹5.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರವು ಇದೀಗ 4 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಆಕರ್ಷಿಸಿದೆ. ಕರ್ನಾಟಕದಲ್ಲಿಯೇ ₹80 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಸದ್ಯ ಈ ಚಿತ್ರವು ರಾಜ್ಯದಾದ್ಯಂತ 225ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತನ್ನ ಓಟವನ್ನು ಮುಂದುವರೆಸಿದೆ. ಕೂಲಿ ಮತ್ತು ವಾರ್ 2 ನಂತಹ ಬಿಗ್ ಬಜೆಟ್ ಚಿತ್ರಗಳು ತೆರೆಗೆ ಬಂದಾಗ 40 ಚಿತ್ರಮಂದಿರಗಳಲ್ಲಿ ಸು ಫ್ರಮ್ ಸೋ ಎತ್ತಂಗಡಿಯಾದರೂ, ಪ್ರೇಕ್ಷಕರ ಬೇಡಿಕೆಯು ಮತ್ತೆ 25 ಪರದೆಗಳಲ್ಲಿ ಪ್ರದರ್ಶನ ಕಾಣುವಂತೆ ಮಾಡಿದೆ.

ನಿರ್ಮಾಣದ ಜೊತೆಗೆ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದು, ಜೆಪಿ ತುಮಿನಾಡ್, ಶನೀಲ್ ಗೌತಮ್, ಸಂಧ್ಯಾ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಾಜೆ, ಮೈಮ್ ಪ್ರಸಾದ್ ಮತ್ತು ಪುಷ್ಪರಾಜ್ ಬೋಳಾರ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಸುಮೇಧ್ ಕೆ ಅವರ ಸಂಗೀತ ಸಂಯೋಜನೆ ಮತ್ತು ಎಸ್ ಚಂದ್ರಶೇಖರನ್ ಅವರ ಛಾಯಾಗ್ರಹಣವಿದೆ.

ಕರ್ನಾಟಕದಾಚೆಗೂ, ಸು ಫ್ರಮ್ ಸೋ ಚಿತ್ರಕ್ಕೆ ಬೇಡಿಕೆ ಕಂಡುಬಂದಿದ್ದು, ಗಂಗಾಧರ್ ವಿತರಿಸುತ್ತಿದ್ದಾರೆ. ಎಎ ಫಿಲ್ಮ್ಸ್ ಉತ್ತರ ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದರೆ, ದುಲ್ಕರ್ ಸಲ್ಮಾನ್ ಅವರ ವೇಫೇರರ್ ಫಿಲ್ಮ್ಸ್ ಮಲಯಾಳಂ ಆವೃತ್ತಿಯನ್ನು ಕೇರಳದಲ್ಲಿ ಬಿಡುಗಡೆ ಮಾಡಿದೆ. ಅಂತರರಾಷ್ಟ್ರೀಯವಾಗಿ, ಫಾರ್ಸ್ ಫಿಲ್ಮ್ಸ್ ಈ ಚಿತ್ರವನ್ನು ಬಹು ಮಾರುಕಟ್ಟೆಗಳಲ್ಲಿ ವಿತರಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ಪುಣೆಯಲ್ಲಿ ಘೋರ ಕೃತ್ಯ: 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ; ಯುವಕನ ಬಂಧನ!

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

ಕ್ಷಿಪಣಿ ದಾಳಿ ಆರೋಪ: Iranಗೆ UAE ಶಾಕ್, ಎಲ್ಲಾ ವ್ಯಾಪಾರ-ವಾಣಿಜ್ಯ ವಹಿವಾಟು ಸಂಪೂರ್ಣ ಸ್ಥಗಿತ..!