ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಕಾಳಗ ಜೋರಾಗಿದೆ. ಬೆನ್ನಿಗೆ ಚೂರಿ ಹಾಕುವ ವಿಚಾರದಲ್ಲಿ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಗಳ ಜೋರಾಗಿತ್ತು. ಗಿಲ್ಲಿ ನಟ ಮತ್ತು ಕಾವ್ಯಾ ಬೆನ್ನಿಗೆ ರಕ್ಷಿತಾ ಚೂರಿ ಹಾಕಿದ್ದಳು. ನಂತರ ರಕ್ಷಿತಾ ಮತ್ತು ಕಾವ್ಯಾ ನಡುವೆ ವಾಗ್ವಾದ ಜೋರಾಯಿತು. ನಂತರ ಕಾವ್ಯಾರನ್ನು ರಾಶಿಕಾ ಸಹ ಟಾರ್ಗೆಟ್ ಮಾಡಿದ್ದರಿಂದ ಬಿಗ್ ಬಾಸ್ ಮನೆ ರಣಾಂಗಣವಾಯಿತು. ಮನೆಯ ಬೇಡ್ ರೂಮಿನಲ್ಲಿ ಹಾಸಿಗೆಯೊಂದರ ಮೇಲೆ ಕಾವ್ಯಾ, ಸ್ಪಂದನಾ ಮಲಗಿದ್ದರೆ ಧನುಷ್ ಕುಳಿತುಕೊಂಡಿದ್ದರು. ಪಕ್ಕದ ಹಾಸಿಗೆಯಲ್ಲಿ ಗಿಲ್ಲಿ ನಟ ಮಲಗಿದ್ದರು. ಈ ವೇಳೆ ಪ್ರವಾಸದ ಕುರಿತು ಮೂವರ ನಡುವೆ ಮಾತುಕತೆ ನಡೆಯಿತು. ಈ ವೇಳೆ ಮಾತಿನ ಭರದಲ್ಲಿ ಸ್ಪಂದನಾ I dont Know What Fun U Want ಎಂದು ಕಾವ್ಯಾಳನ್ನು ಕೇಳಿದರು. ಈ ವೇಳೆ ಅಲ್ಲಿ ಕುಳಿತಿದ್ದ ಧನುಷ್ ಮುಖವನ್ನು ಕೆಳಕ್ಕೆ ಹಾಕಿದರು. ಅಲ್ಲಿ ಮಲಗಿ ಕೇಳಿಸಿಕೊಳ್ಳುತ್ತಿದ್ದ ಗಿಲ್ಲಿ ನಟ ಬೆಡ್ ರೂಮ್ ನಿಂದ ಹೊರಕ್ಕೆ ಹೋದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.