ನಟ ಗಣೇಶ್ - ಶ್ರೀನಿವಾಸ ರಾಜು 
ಸಿನಿಮಾ ಸುದ್ದಿ

ಕನ್ನಡ-ಹಿಂದಿಯಲ್ಲಿ ಬಿಡುಗಡೆಯಾಗಲಿದೆ ಶ್ರೀನಿವಾಸ್ ರಾಜು ನಿರ್ದೇಶನದ ಚಿತ್ರ; ಬಾಲಿವುಡ್‌ಗೆ ನಟ ಗಣೇಶ್ ಎಂಟ್ರಿ!

ಗಣೇಶ್ ಹಿಂದಿ ವೀಕ್ಷಕರಿಗೆ ಹೊಸಬರೇನಲ್ಲ. 2006ರ ಬ್ಲಾಕ್‌ಬಸ್ಟರ್ ಚಿತ್ರವಾದ 'ಮುಂಗಾರು ಮಳೆ' ಚಿತ್ರವು ಎಲ್ಲ ಚಿತ್ರೋದ್ಯಮಗಳಲ್ಲಿ ವ್ಯಾಪಕ ಮೆಚ್ಚುಗೆ ಪಡೆಯಿತು.

'ಕೃಷ್ಣಂ ಪ್ರಣಯ ಸಖಿ' ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದ ನಟ ಗಣೇಶ್ ಮತ್ತು ನಿರ್ದೇಶಕ ಶ್ರೀನಿವಾಸ್ ರಾಜು, ಸಮೃದ್ಧಿ ಮಂಜುನಾಥ್ ಅವರ ಕೆವಿಸಿ ಪ್ರೊಡಕ್ಷನ್ಸ್ ಬೆಂಬಲದೊಂದಿಗೆ ವಿರಾಟ್ ಸಾಯಿ ಕ್ರಿಯೇಷನ್ಸ್ ಪ್ರಸ್ತುತಪಡಿಸುವ ಹೊಸ ಯೋಜನೆಗಾಗಿ ಮತ್ತೆ ಒಂದಾಗಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಒಂದೆರಡು ಹಾಡುಗಳು ಮತ್ತು ಕೆಲವು ಟಾಕಿ ಭಾಗಗಳ ಚಿತ್ರೀಕರಣ ಬಾಕಿ ಇದೆ. ಚಿತ್ರತಂಡವು ಈಗಾಗಲೇ ಪೋಸ್ಟ್-ಪ್ರೊಡಕ್ಷನ್‌ಗೆ ತೆರಳಿದೆ ಮತ್ತು ಶೀಘ್ರದಲ್ಲೇ ಶೀರ್ಷಿಕೆ ಘೋಷಣೆಯಾಗಲಿದೆ.

ಕುತೂಹಲಕಾರಿಯಾಗಿ, ಚಿತ್ರತಂಡವು ಇದೀಗ ದ್ವಿಭಾಷಾ ಚಿತ್ರವಾಗಿ ಕನ್ನಡ ಮತ್ತು ಹಿಂದಿ ಎರಡರಲ್ಲೂ ಬಿಡುಗಡೆ ಮಾಡಲು ನಿರ್ಧರಿಸಿದೆ. ನಿರ್ದೇಶಕ ಶ್ರೀನಿವಾಸ್ ರಾಜು ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ.

'ನಾವು ಎರಡು ಕಾರಣಗಳಿಗಾಗಿ ಚಿತ್ರವನ್ನು ಕನ್ನಡ ಮತ್ತು ಹಿಂದಿ ಎರಡರಲ್ಲೂ ಬಿಡುಗಡೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಹಿಂದಿ ಪ್ರೇಕ್ಷಕರು ದಕ್ಷಿಣದ ಚಿತ್ರಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ಕನೆಕ್ಟ್ ಆಗಿದ್ದಾರೆ. ಹಿಂದಿ ಪ್ರೇಕ್ಷಕರಿಗೆ ವಿಭಿನ್ನ ಅವತಾರದ ಗಣೇಶ್ ಅವರನ್ನು ಪ್ರಸ್ತುತಪಡಿಸಲು ಇದು ಸರಿಯಾದ ಸಮಯ ಎಂದು ನಾನು ಭಾವಿಸಿದೆ' ಎಂದು ಶ್ರೀನಿವಾಸ್ ರಾಜು ವಿವರಿಸುತ್ತಾರೆ.

ಗಣೇಶ್ ಹಿಂದಿ ವೀಕ್ಷಕರಿಗೆ ಹೊಸಬರೇನಲ್ಲ. 2006ರ ಬ್ಲಾಕ್‌ಬಸ್ಟರ್ ಚಿತ್ರವಾದ 'ಮುಂಗಾರು ಮಳೆ' ಚಿತ್ರವು ಎಲ್ಲ ಚಿತ್ರೋದ್ಯಮಗಳಲ್ಲಿ ವ್ಯಾಪಕ ಮೆಚ್ಚುಗೆ ಪಡೆಯಿತು ಮತ್ತು ನಂತರ ಬೋನಿ ಕಪೂರ್ ಇದನ್ನು ಹಿಂದಿಯಲ್ಲಿ ರೀಮೇಕ್ ಮಾಡಲು ಆಯ್ಕೆ ಮಾಡಿಕೊಂಡರು.

ಗಣೇಶ್ ಹೇಳುವ ಪ್ರಕಾರ, ಈ ಚಿತ್ರವು ನೇರ ಹಿಂದಿ ಆವೃತ್ತಿಯಾಗಲಿದೆ ಮತ್ತು ಡಬ್ ಮಾಡಲಾಗಿಲ್ಲ. ಬದಲಾಗಿ ಸರಿಯಾದ ಹಿಂದಿ ರಿಮೇಕ್ ಆಗಿರುತ್ತದೆ. ಅಧಿಕೃತ ಹಿಂದಿ ಸಂಭಾಷಣೆ ಮತ್ತು ಸಾಹಿತ್ಯವನ್ನು ರಚಿಸಲು ತಜ್ಞರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಹಿಂದಿ ಚಲನಚಿತ್ರ ಮಾರುಕಟ್ಟೆಯನ್ನು ಪ್ರವೇಶಿಸಲು ಮತ್ತು ಅನ್ವೇಷಿಸಲು ನಾವು ನಿಜವಾಗಿಯೂ ಬಯಸುತ್ತೇವೆ ಎಂದು ಗಣೇಶ್ ಹೇಳುತ್ತಾರೆ.

ಚಿತ್ರದಲ್ಲಿ ಗಣೇಶ್ ಅವರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ದೇವಿಕಾ ಭಟ್ ನಾಯಕಿಯಾಗಿದ್ದಾರೆ. ಇದು ಅವರಿಗೆ ಚೊಚ್ಚಲ ಚಿತ್ರವಾಗಿದ್ದು, ಮಾಳವಿಕಾ ಶರ್ಮಾ ಕೂಡ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ಮೆಚ್ಚುಗೆ ಪಡೆದ ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ತಮ್ಮ ಮೊದಲ ಕನ್ನಡ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದು, ಛಾಯಾಗ್ರಹಣವನ್ನು ವೆಂಕಟ್ ಪ್ರಸಾದ್ ನಿರ್ವಹಿಸಿದ್ದಾರೆ.

2026ರ ಬೇಸಿಗೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದ್ದು, ಇದು ಗಣೇಶ್ ಅವರ ಈ ವರ್ಷದ ಮೊದಲ ಚಿತ್ರವಾಗಿದೆ. ನಟ ಸದ್ಯ 'Yours Sincerely ರಾಮ್', ಧನಂಜಯ್ ನಿರ್ದೇಶನದ 'ಪಿನಾಕ' ಮತ್ತು ಅರಸು ಅಂತಾರೆ ಅವರೊಂದಿಗಿನ ಒಂದು ಯೋಜನೆ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇವೆಲ್ಲವೂ ನಿರ್ಮಾಣದ ವಿವಿಧ ಹಂತಗಳಲ್ಲಿವೆ. 2026ರ ಆರಂಭದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿರುವ ಚೇತನ್ ಕುಮಾರ್ ಚಿತ್ರಕ್ಕೂ ಅವರು ಹಸಿರು ನಿಶಾನೆ ತೋರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ತುರ್ತು ಕಾರಣ'ಗಳಿಂದಾಗಿ ಎಲ್ಲಾ ಅಧ್ವಾನವಾಯಿತು: ವಿಮಾನಗಳ ರದ್ದತಿ ಕುರಿತು IndiGo ಸ್ಪಷ್ಟನೆ

ಪಶ್ಚಿಮ ಬಂಗಾಳ: 'ಬಾಬರಿ ಮಸೀದಿ' ನಿರ್ಮಾಣದ ಪ್ಲಾನ್, TMC ಶಾಸಕ ಹುಮಾಯೂನ್ ಕಬೀರ್ ಅಮಾನತು, ಹೊಸ ಪಕ್ಷ ರಚನೆಯ ಘೋಷಣೆ!

ಕೆಂಪೇಗೌಡ ಏರ್ ಪೋರ್ಟ್ ಲ್ಲಿ 62 ವಿಮಾನ ಸೇರಿ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ಹಾರಾಟ ರದ್ದು; ಕಾರಣವೇನು?: ತನಿಖೆ ಆರಂಭಿಸಿದ DGCA

ಸಂಚಾರಿ ಸಾಥಿ ಆ್ಯಪ್: ಮೋದಿ ಸರ್ಕಾರ 'ಯೂ ಟರ್ನ್', ಮಧ್ಯಮ ವರ್ಗದ ಜನರಿಗೆ ಸಿಕ್ಕ ಅಪರೂಪದ ಜಯ! ಹೇಗೆ?

ಎಲ್ಗರ್ ಪರಿಷತ್ ಪ್ರಕರಣ: 5 ವರ್ಷಗಳ ನಂತರ DU ಮಾಜಿ ಪ್ರಾಧ್ಯಾಪಕ ಹನಿ ಬಾಬುಗೆ ಜಾಮೀನು

SCROLL FOR NEXT