ನಟ ದರ್ಶನ್ ಅವರಿಗೆ ಇಂದು ಫೆ.16 ಜನ್ಮದಿನದ ಸಂಭ್ರಮ. ಎಂದಿನಂತೆ ತಮ್ಮ ನಿವಾಸದ ಹೊರಗೆ ಅವರು ಫ್ಯಾನ್ಸ್ ಜೊತೆ ಸಂಭ್ರಮಾಚರಣೆ ಮಾಡುತ್ತಿಲ್ಲ. ಆದರೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ತಮ್ಮದೇ ರೀತಿಯಲ್ಲಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಮುಂಬರುವ ಚಿತ್ರ ‘ದಿ ಡೆವಿಲ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ.
ಟೀಸರ್ ಬಿಡುಗಡೆಗೆ ಮುನ್ನವೇ 'ಡೆವಿಲ್' ಸಿನಿಮಾದ ಟೈಟಲ್‌ನಲ್ಲಿ ಬದಲಾವಣೆಯಾಗಿತ್ತು. ಸಿನಿಮಾ ಸೆಟ್ಟೇರಿದಾಗ 'ಡೆವಿಲ್ ದಿ ಹೀರೋ' ಅಂತಿದ್ದ ಟೈಟಲ್ ಈಗ 'ದಿ ಡೆವಿಲ್' ಎಂದು ಬದಲಾವಣೆಯಾಗಿದೆ. ದಿಢೀರ್ ಎಂದು ಟೈಟಲ್‌ನಲ್ಲಿ ಮಾರ್ಪಾಡು ಮಾಡಿದ್ಯಾಕೆ ಎಂದು ಚಿತ್ರತಂಡವಾಗಲಿ, ನಿರ್ದೇಶಕರಾಗಲಿ ಎಲ್ಲೂ ಸ್ಪಷ್ಟನೆ ಕೊಟ್ಟಿಲ್ಲ.