ಸಂಚಿತ್ ಸಂಜೀವ್ 
ಸಿನಿಮಾ ಸುದ್ದಿ

ಕಿಚ್ಚ ಸುದೀಪ್ ಸೋದರಳಿಯ ಸ್ಯಾಂಡಲ್ ವುಡ್ ಪ್ರವೇಶ; ಕ್ರೈಮ್, ಥ್ರಿಲ್ಲರ್ ಚಿತ್ರಕ್ಕೆ ನಾಯಕ!

ಚಿತ್ರಕ್ಕೆ ಕಿಚ್ಚ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಅವರ ಬೆಂಬಲವಿದೆ. ಸುಪ್ರಿಯಾನ್ವಿ ಮತ್ತು KRG ಪ್ರೊಡಕ್ಷನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಲಿವೆ.

ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಸ್ಯಾಂಡಲ್ ವುಡ್ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಒಂದೆರೆಡು ಚಿತ್ರಗಳ ಘೋಷಣೆಗಳ ನಂತರ ಅವರ ಕಾಯುವಿಕೆ ಕೊನೆಗೂ ಕೊನೆಗೊಂಡಿದೆ. ಅವರ ಮೊಟ್ಟ ಮೊದಲಿನ ಚಿತ್ರವನ್ನು ವಿವೇಕ ಅವರು ನಿರ್ದೇಶಿಸುತ್ತಿದ್ದಾರೆ. ಅವರಿಗೂ ಇದು ಚೊಚ್ಚಲ ಸಿನಿಮಾವಾಗಿದೆ.

ಚಿತ್ರಕ್ಕೆ ಕಿಚ್ಚ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಅವರ ಬೆಂಬಲವಿದೆ. ಸುಪ್ರಿಯಾನ್ವಿ ಮತ್ತು KRG ಪ್ರೊಡಕ್ಷನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಲಿವೆ. ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದ ಹಿನ್ನೆಲೆ ಹೊಂದಿರುವ ವಿವೇಕ ಅವರು ಈ ಸಿನಿಮಾದೊಂದಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಮೈಸೂರು ಮೂಲದ ವಿವೇಕಾ ಕ್ರೈಮ್, ಥ್ರಿಲ್ಲರ್ ಚಿತ್ರವನ್ನು ತೆರೆ ಮೇಲೆ ತರಲು ಹೊರಟ್ಟಿದ್ದಾರೆ. ಅವರ ಅನುಭವದೊಂದಿಗೆ ಚಿತ್ರತಂಡ ವಿಶಿಷ್ಟವಾದ ಕಥಾಹಂದರವನ್ನು ಹೊರತರುವ ನಿರೀಕ್ಷೆಯಿದೆ.

ಜನವರಿ 4 ರಂದು ಫಸ್ಟ್ ಲುಕ್ ಹಾಗೂ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಲಿದೆ. ಅಂದು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಚಿತ್ರತಂಡ ಯೋಜಿಸಿದೆ. ಅದೇ ದಿನ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!