ಹೈನ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ 
ಸಿನಿಮಾ ಸುದ್ದಿ

'ಹೈನ' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ; ಟ್ರೇಲರ್ ಬಿಡುಗಡೆ ಮಾಡಿದ ಸಂಸದ ತೇಜಸ್ವಿ ಸೂರ್ಯ

ಚಿತ್ರಕ್ಕೆ ನಿಶಾಂತ್ ನಾನಿ ಅವರ ಛಾಯಾಗ್ರಹಣ, ಶಮೀಕ್ ಅವರ ಸಂಕಲನವಿದೆ. ವೆಂಕಟ್ ಭಾರದ್ವಾಜ್ ಮತ್ತು ರಾಜ್ ಕಮಲ್ ಚಿತ್ರವನ್ನು ನಿರ್ಮಿಸಿದ್ದಾರೆ.

ವೆಂಕಟ್ ಭಾರದ್ವಾಜ್ ನಿರ್ದೇಶಿಸಿರುವ ದೇಶಭಕ್ತಿಯ ಕಥೆಯನ್ನೊಳಗೊಂಡ 'ಹೈನ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವಿಶಿಷ್ಟ ಕಥಾಹಂದರವನ್ನು ಒಳಗೊಂಡಿರುವ ಈ ಚಿತ್ರವು ಜನವರಿ 31ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಚಿತ್ರತಂಡಕ್ಕೆ ಶುಭಕೋರಿದರು.

ಸಮಾಜಕ್ಕೆ ಶಕ್ತಿಯುತವಾದ ಸಂದೇಶವನ್ನು ನೀಡಲು ಹೈನ ಚಿತ್ರವನ್ನು ತಯಾರಿಸಲಾಗಿದೆ. ಈ ಚಿತ್ರದ ಮೂಲಕ ಸಂಬಂಧಿತ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಶ್ಲಾಘನೀಯ. ಇದು ಜನರಲ್ಲಿ ಪ್ರಜ್ಞೆ ಮೂಡಿಸುತ್ತದೆ ಎಂದು ನಾನು ಭಾವಿಸುತ್ತೇನೆ. ವೆಂಕಟ್ ಭಾರದ್ವಾಜ್ ಅವರ ಪ್ರಯತ್ನಗಳು ಅವರಿಗೆ ಯಶಸ್ಸನ್ನು ತಂದುಕೊಡಲಿ ಮತ್ತು ಇಂತಹ ಮತ್ತಷ್ಟು ಅರ್ಥಪೂರ್ಣ ಚಲನಚಿತ್ರಗಳಿಗೆ ಸ್ಫೂರ್ತಿ ನೀಡಲಿ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ನಿರ್ದೇಶಕ ವೆಂಕಟ್ ಭಾರದ್ವಾಜ್ ಮಾತನಾಡಿ, 'ಈ ಚಿತ್ರ ನಿರ್ದೇಶಿಸಲು ಸಂತೋಷವಾಯಿತು. 'ಹೈನ' ಚಿತ್ರವು ಗುಪ್ತಚರ ಸಂಸ್ಥೆಗಳು, ಪೊಲೀಸ್ ಪಡೆಗಳು ಮತ್ತು ರಕ್ಷಣಾ ಇಲಾಖೆಯ ಕಾರ್ಯವೈಖರಿಯನ್ನು ಪ್ರದರ್ಶಿಸುತ್ತದೆ. ಸೆನ್ಸಾರ್ ಮಂಡಳಿಯು ಕೆಲವು ದೇಶಗಳ ಹೆಸರುಗಳನ್ನು ಬಳಸದಂತೆ ಸಲಹೆ ನೀಡಿದ್ದು ಸ್ವಲ್ಪ ನಿರಾಶಾದಾಯಕವಾಗಿತ್ತು. ಆದರೆ, ಚಿತ್ರವು ಸುಂದರವಾಗಿ ರೂಪುಗೊಂಡಿದೆ. ತಂಡದ ಬೆಂಬಲಕ್ಕೆ ಧನ್ಯವಾದಗಳು' ಎಂದು ಹೇಳಿದರು.

ಲಕ್ಷ್ಮಣ್ ಶಿವಶಂಕರ್ ಬರೆದಿರುವ ಈ ಕಥೆಯು ವಲಸಿಗರು ಅಕ್ರಮ ದೇಶದೊಳಗೆ ನುಸುಳುವ ಅಪಾಯಗಳು, ಸಂಪನ್ಮೂಲಗಳ ಶೋಷಣೆ ಮತ್ತು ಆಂತರಿಕ ಭದ್ರತೆ ಮೇಲಿನ ಪರಿಣಾಮಗಳ ಕುರಿತು ಹೇಳುತ್ತದೆ. ಅಲ್ಲದೆ, ಭಯೋತ್ಪಾದನೆಯ ಹಣಕಾಸು ಮಾರ್ಗಗಳ ಮೇಲೆ ಬೆಳಕು ಚೆಲ್ಲುತ್ತದೆ.

ಚಿತ್ರಕ್ಕೆ ನಿಶಾಂತ್ ನಾನಿ ಅವರ ಛಾಯಾಗ್ರಹಣ, ಶಮೀಕ್ ಅವರ ಸಂಕಲನವಿದೆ. ವೆಂಕಟ್ ಭಾರದ್ವಾಜ್ ಮತ್ತು ರಾಜ್ ಕಮಲ್ ಚಿತ್ರವನ್ನು ನಿರ್ಮಿಸಿದ್ದಾರೆ. ಹೈನ ಚಿತ್ರದಲ್ಲಿ ಹರ್ಷ ಅರ್ಜುನ್, ದಿಗಂತ್ ಸ್ವರೂಪ್, ರಾಜ್ ಕಮಲ್, ಲಕ್ಷ್ಮಣ್ ಶಿವಶಂಕರ್, ನಂದಕಿಶೋರ್ ಮತ್ತು ಲಾರೆನ್ಸ್ ಪ್ರೀತಂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT