ಶ್ರೀನಿ 
ಸಿನಿಮಾ ಸುದ್ದಿ

ಕೆವಿಎನ್ ಪ್ರೊಡಕ್ಷನ್ಸ್ ಬೆಂಬಲ: ಸದ್ದಿಲ್ಲದೆ ಸೆಟ್ಟೇರಿದ ಘೋಸ್ಟ್ ಖ್ಯಾತಿಯ ಶ್ರೀನಿ ನಿರ್ದೇಶನದ 'ಬೀರ್‌ಬಲ್ 2'

ಈ ಯೋಜನೆಯ ವಿವರಗಳನ್ನು ಗೌಪ್ಯವಾಗಿಡಲಾಗಿದ್ದರೂ, ಬೀರ್‌ಬಲ್ 2 ಸದ್ದಿಲ್ಲದೆ ಔಪಚಾರಿಕ ಮುಹೂರ್ತದೊಂದಿಗೆ ಪ್ರಾರಂಭವಾಗಿದೆ ಎಂದು ಸಿನಿಮಾ ಎಕ್ಸ್‌ಪ್ರೆಸ್‌ಗೆ ತಿಳಿದುಬಂದಿದೆ.

ಶಿವರಾಜ್‌ಕುಮಾರ್ ನಟನೆ ಆ್ಯಕ್ಷನ್-ಥ್ರಿಲ್ಲರ್ ಚಿತ್ರ 'ಘೋಸ್ಟ್'ಗೆ ಹೆಸರುವಾಸಿಯಾದ ನಿರ್ದೇಶಕ ಶ್ರೀನಿ ಇದೀಗ 'ಬೀರ್‌ಬಲ್ 2' ಚಿತ್ರದ ಮೂಲಕ ಮರಳಲು ಸಿದ್ಧರಾಗಿದ್ದಾರೆ. 'ಬೀರ್‌ಬಲ್' ಚಿತ್ರದ ಸೀಕ್ವೆನ್ಸ್ ಅಧಿಕೃತವಾಗಿ ಆರಂಭವಾಗಿದ್ದು, ಹೈ ಪ್ರೊಫೈಲ್ ಕೆವಿಎನ್ ಪ್ರೊಡಕ್ಷನ್ಸ್ ಈ ಯೋಜನೆಗೆ ಬೆಂಬಲ ನೀಡುತ್ತಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ನಟ ಧ್ರುವ ಸರ್ಜಾ ಅಭಿನಯದ 'ಕೆಡಿ' ಮತ್ತು ತಮಿಳು ಸೂಪರ್‌ಸ್ಟಾರ್ ವಿಜಯ್ ಅಭಿನಯದ 'ಜನ ನಾಯಗನ್' ಚಿತ್ರಕ್ಕೆ ವೆಂಕಟ್ ಕೆ ನಾರಾಯಣ ಈಗಾಗಲೇ ಬೆಂಬಲ ನೀಡುತ್ತಿದ್ದಾರೆ.

ಈ ಯೋಜನೆಯ ವಿವರಗಳನ್ನು ಗೌಪ್ಯವಾಗಿಡಲಾಗಿದ್ದರೂ, ಬೀರ್‌ಬಲ್ 2 ಸದ್ದಿಲ್ಲದೆ ಔಪಚಾರಿಕ ಮುಹೂರ್ತದೊಂದಿಗೆ ಪ್ರಾರಂಭವಾಗಿದೆ ಮತ್ತು ಈ ವಾರದ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಸಿನಿಮಾ ಎಕ್ಸ್‌ಪ್ರೆಸ್‌ಗೆ ತಿಳಿದುಬಂದಿದೆ.

ಶ್ರೀನಿ ಈ ಹಿಂದೆ ಬೀರ್‌ಬಲ್ ಪಾತ್ರವನ್ನು ಘೋಸ್ಟ್‌ನಲ್ಲಿ ಸೂಕ್ಷ್ಮವಾಗಿ ಸೇರಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಇದು ಸಂಭಾವ್ಯ ಕ್ರಾಸ್‌ಒವರ್ ಬಗ್ಗೆ ಗುಸುಗುಸು ಹುಟ್ಟಿಸಿತು. ಇದೀಗ ವಿಶಿಷ್ಟವಾದ ಘೋಸ್ಟ್-ಬೀರ್ಬಲ್ ಮಲ್ಟಿವರ್ಸ್ ಆಗಿ ಕಾರ್ಯರೂಪಕ್ಕೆ ಬಂದಿದ್ದು, ಮುಂಬರುವ ಸೀಕ್ವೆಲ್‌ಗೆ ಹೊಸ ಆಯಾಮ ನೀಡಲಿದೆ.

2019ರಲ್ಲಿ ಬಿಡುಗಡೆಯಾದ ಮೂಲ ಬೀರ್‌ಬಲ್: ಕೇಸ್ 1' ಚಿತ್ರದಲ್ಲಿ ನಟಿ ರುಕ್ಮಿಣಿ ವಸಂತ್ ನಟಿಸಿದ್ದರು. ಅದಾದ ಬಳಿಕ ಅವರು ರಕ್ಷಿತ್ ಶೆಟ್ಟಿ ಜೊತೆ ಸಪ್ತ ಸಾಗರದಾಚೆ ಎಲ್ಲೋ ಮತ್ತು ಶ್ರೀಮುರಳಿ ಜೊತೆ ಬಘೀರ ಸೇರಿದಂತೆ ಇತರ ಚಿತ್ರಗಳಲ್ಲಿ ನಟಿಸಿದ್ದಾರೆ. ಆದಾಗ್ಯೂ, ಬೀರ್‌ಬಲ್ 2 ಚಿತ್ರದಲ್ಲಿ ರುಕ್ಮಿಣಿ ವಸಂತ್ ಇರುವುದಿಲ್ಲ ಎಂದು ತಿಳಿದುಬಂದಿದೆ ಮತ್ತು ಶ್ರೀನಿ ಹೊಸ ನಾಯಕಿಯ ಹುಡುಕಾಟದಲ್ಲಿದ್ದಾರೆ.

ಪಾತ್ರವರ್ಗ ಮತ್ತು ಸಿಬ್ಬಂದಿ ಕುರಿತು ಹೆಚ್ಚಿನ ವಿವರಗಳನ್ನು ಸದ್ಯಕ್ಕೆ ಗೌಪ್ಯವಾಗಿಡಲಾಗಿದೆ. ಶ್ರೀನಿ ಮತ್ತು ಕೆವಿಎನ್ ಪ್ರೊಡಕ್ಷನ್ಸ್‌ನಿಂದ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!