ಐವಿಎಫ್ ತಂತ್ರಜ್ಞಾನದ ಮೂಲಕ ಮದುವೆ ಆಗದೆನೇ ನಟಿ ಭಾವನಾ ರಾಮಣ್ಣ ಮಗು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಮದುವೆ ಮೇಲೆ ಚಿತ್ರರಂಗದವರಿಗೆ ಎದುರಾಗುವ ಸಮಸ್ಯೆ ಬಗ್ಗೆಯೂ ಭಾವನಾ ರಾಮಣ್ಣ ಮಾತನಾಡಿದ್ದಾರೆ. ಚಿತ್ರರಂಗದಲ್ಲಿರುವ ನಾವು ಎಲ್ಲಾ ಕ್ಷೇತ್ರದವರ ಜೊತೆ ಬಾಂಧವ್ಯ ಬೆಳೆಸಿಕೊಂಡಿರುತ್ತೇವೆ. ನಾವು ಯಾರೊಂದಿಗೂ ಮುಚ್ಚುಮರೆ ಮಾಡಲ್ಲ. ನಾವು ಆಪ್ತರನ್ನು ತಬ್ಬಿಕೊಳ್ಳುತ್ತೇವೆ. ಆದರೆ ಮದುವೆಯಾದಾಗ ನಮ್ಮನ್ನು ಕಟ್ಟಿಕೊಂಡ ಪತಿಗೆ ತಮ್ಮ ಪತ್ನಿ ಕಲಾವಿದೆ ಅನ್ನೋದು ಮರೆತು ಹೋಗಿರುತ್ತದೆ. ಹೀಗಾರುವಾಗ ನಾವು ಎಲ್ಲರೊಂದಿಗೆ ಸಲುಗೆಯಿಂದ ನಡೆದುಕೊಂಡಾಗ ಪತಿಗೆ ಇರಿಸು ಮುರಿಸಾಗುತ್ತದೆ. ಆಗ ನಾವು ಎಲ್ಲದರಿಂದಲೂ ದೂರವಾಗಬೇಕಾಗುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ನಟಿ ಹರಿಪ್ರಿಯಾ ಇದ್ದಾರೆ. ಅವರು ಇನ್ನೂ ಯಂಗ್ ಆಗಿದ್ದರು. ಆದರೆ ಮದುವೆಯಾದ ಮೇಲೆ ಅವರು ಹಿನ್ನಲೆಗೆ ಸರಿದು ಹೋದರು ಎಂದು ನಟಿ ಬೇಸರ ಹೊರಹಾಕಿದ್ದಾರೆ.