ಬಿ. ಸರೋಜಾದೇವಿ 
ಸಿನಿಮಾ ಸುದ್ದಿ

ಬಿ. ಸರೋಜಾದೇವಿ ಭಾರತೀಯ ಚಿತ್ರರಂಗದ ಆದರ್ಶಪ್ರಾಯ ಐಕಾನ್: ಪ್ರಧಾನಿ ನರೇಂದ್ರ ಮೋದಿ

ಭಾರತೀಯ ಸಿನಿಮಾ ಮತ್ತು ಸಂಸ್ಕೃತಿಯ ಆದರ್ಶಪ್ರಾಯ ಐಕಾನ್ ಆಗಿ ಸರೋಜಾ ದೇವಿ ನೆನಪಿನಲ್ಲಿ ಉಳಿಯಲಿದ್ದಾರೆ. ಅವರ ವೈವಿಧ್ಯಮಯ ಅಭಿನಯ ಅಳಿಸಲಾಗದ ಗುರುತುಗಳನ್ನು ಬಿಟ್ಟಿವೆ.

ಬೆಂಗಳೂರು: ದಕ್ಷಿಣ ಭಾರತದ ಹಿರಿಯ ನಟಿ, ಅಭಿನಯ ಸರಸ್ವತಿ ಬಿ.ಸರೋಜಾ ದೇವಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಬಹುಭಾಷಾ ನಟಿ ಮಲ್ಲೇಶ್ವರಂನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಸರೋಜಾ ದೇವಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಖ್ಯಾತ ಚಲನಚಿತ್ರ ನಟಿ ಬಿ.ಸರೋಜಾ ದೇವಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಭಾರತೀಯ ಸಿನಿಮಾ ಮತ್ತು ಸಂಸ್ಕೃತಿಯ ಆದರ್ಶಪ್ರಾಯ ಐಕಾನ್ ಆಗಿ ಸರೋಜಾ ದೇವಿ ನೆನಪಿನಲ್ಲಿ ಉಳಿಯಲಿದ್ದಾರೆ. ಅವರ ವೈವಿಧ್ಯಮಯ ಅಭಿನಯ ಅಳಿಸಲಾಗದ ಗುರುತುಗಳನ್ನು ಬಿಟ್ಟಿವೆ. ವಿವಿಧ ಭಾಷೆಗಳನ್ನು ವ್ಯಾಪಿಸಿರುವ ಮತ್ತು ವೈವಿಧ್ಯಮಯ ವಿಷಯಗಳನ್ನು ಒಳಗೊಂಡ ಕಾರ್ಯ ಅವರ ಬಹುಮುಖ ಸ್ವಭಾವವನ್ನು ಎತ್ತಿ ತೋರಿಸುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹಲವು ರಾಜಕಾರಣಿಗಳು ಮತ್ತು ಚಲನಚಿತ್ರ ವ್ಯಕ್ತಿಗಳು ಸೇರಿದಂತೆ ನೂರಾರು ಜನರು ಹಿರಿಯ ನಟಿಗೆ ಗೌರವ ಸಲ್ಲಿಸಿದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ, ನಟರಾದ ಶಿವರಾಜ್‌ಕುಮಾರ್, ಜಗ್ಗೇಶ್, ಮತ್ತು ಉಪೇಂದ್ರ, ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್, ಮಾಜಿ ಸಚಿವರಾದ ಟಿ.ಬಿ. ಜಯಚಂದ್ರ ಮತ್ತು ಜನಾರ್ದನ ರೆಡ್ಡಿ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಮತ್ತು ಇತರರು ನಟಿಗೆ ಅಂತಿಮ ನಮನ ಸಲ್ಲಿಸಿದರು.

ಮಂಗಳವಾರ ಬೆಳಗ್ಗೆ 11.30 ಕ್ಕೆ ಅಂತ್ಯಕ್ರಿಯೆಗಾಗಿ ಚನ್ನಪಟ್ಟಣದ ಅವರ ಗ್ರಾಮ ದಶಾವರಕ್ಕೆ ಕೊಂಡೊಯ್ಯಲಾಗುವುದು ಎಂದು ಅವರ ಪುತ್ರ ಹರ್ಷ ಗೌತಮ್ ತಿಳಿಸಿದ್ದಾರೆ. ಕುಟುಂಬವು ಅವರ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದು, ಕಾರ್ಯವಿಧಾನ ಪೂರ್ಣಗೊಂಡಿದೆ. ನಟಿಯ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು.

2008 ರಲ್ಲಿ, ಭಾರತದ 60 ನೇ ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ ಸರೋಜಾದೇವಿ ಅವರಿಗೆ ಭಾರತ ಸರ್ಕಾರದಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು. ಅವರು ಪದ್ಮಭೂಷಣ (1992) ಮತ್ತು ಪದ್ಮಶ್ರೀ (1969) ಪುರಸ್ಕೃತರಾಗಿದ್ದಾರೆ.

ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ಡಾ. ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ಮತ್ತು 2009 ರಲ್ಲಿ ಎರಡನೇ ಬಾರಿಗೆ ಆಂಧ್ರಪ್ರದೇಶ ಸರ್ಕಾರದಿಂದ ಎನ್‌ಟಿಆರ್ ರಾಷ್ಟ್ರೀಯ ಪ್ರಶಸ್ತಿ ಸೇರಿವೆ. ಸರೋಜಾ ದೇವಿ ಅವರ ಕೊನೆಯ ಪರದೆಯ ಮೇಲೆ ಕಾಣಿಸಿಕೊಂಡಿದ್ದು 2019 ರ ಪುನೀತ್ ರಾಜ್‌ಕುಮಾರ್ ಅಭಿನಯದ ನಟಸಾರ್ವಭೌಮ ಕೊನೆಯ ಸಿನಿಮಾವಾಗಿತ್ತು.

ತಮಿಳಿನ ಖ್ಯಾತ ನಟ ತಲೈವಾ ರಜನಿಕಾಂತ್‌ ಸಹ ಸಂತಾಪ ಸೂಚಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ʻಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದ ಮಹಾನ್ ನಟಿ ಸರೋಜಾ ದೇವಿ ಈಗ ನಮ್ಮೊಂದಿಗಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಒಂದು ಸುವರ್ಣ ಸಿನಿಮಾ ಯುಗ ಅಂತ್ಯಗೊಂಡಿದೆʼ ಅಂತ ಭಾವುಕ ಸಂದೇಶವೊಂದನ್ನ ಫೋಟೋ ಜೊತೆಗೆ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕನ್ನಡ ಕಲಿಯಲು ಯತ್ನ, ಎಲ್ಲಾ ಭಾಷೆ, ಸಂಪ್ರದಾಯಗಳ ಬಗ್ಗೆ ಗೌರವ ಇದೆ: ರಾಷ್ಟ್ರಪತಿ ಮುರ್ಮು

ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ, ಆದ್ರೂ ಯಾವುದೇ ಲಾಭ ಆಗುವುದಿಲ್ಲ: ಸಿಎಂ ಸಿದ್ದರಾಮಯ್ಯ

DKS ನಟ್ಟು ಬೋಲ್ಟು ಹೇಳಿಕೆ ಕಿತಾಪತಿಗೆ ಸಾಧು ಕೋಕಿಲ ಕಾರಣ: ದರ್ಶನ್ ಸ್ನೇಹದ ಬಗ್ಗೆ ನಟ ಸುದೀಪ್ ಹೇಳಿದ್ದೇನು?

Indian Stock Market: GDP ವರದಿ ಎಫೆಕ್ಟ್; ಹೂಡಿಕೆದಾರರಿಗೆ 5 ಲಕ್ಷ ಕೋಟಿ ರೂ ಲಾಭ!

'Vote chori' ಮಾಹಿತಿಯ ಹೈಡ್ರೋಜನ್ ಬಾಂಬ್ ಬರ್ತಾ ಇದೆ.. PM Modi ಮುಖ ಕೂಡ ತೋರಿಸಲಾಗಲ್ಲ: Rahul Gandhi

SCROLL FOR NEXT