ಶಿವರಾಜಕುಮಾರ್ ಅಭಿನಯದ 'ಭೈರವನ ಕೊನೆ ಪಾಠ' ಎಂಬ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ವದಂತಿಗಳನ್ನು ನಿರ್ದೇಶಕ ಹೇಮಂತ್ ಎಂ ರಾವ್ ತಳ್ಳಿಹಾಕಿದ್ದಾರೆ. ಈ ಹೇಳಿಕೆಗಳು ಆಧಾರರಹಿತವಾಗಿವೆ. ಈ ಮಹತ್ವಾಕಾಂಕ್ಷೆಯ ಚಿತ್ರವು ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ. ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಹೇಮಂತ್, 'ಭೈರವನ ಕೊನೆ ಪಾಠ' ಚಿತ್ರವನ್ನು ಸ್ಥಗಿತಗೊಳಿಸಲಾಗಿದೆ ಎಂಬ ವದಂತಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ. ಭೈರವನ ಕೊನೆ ಪಾಠ ದೊಡ್ಡ ಪ್ರಮಾಣದ ಚಿತ್ರವಾಗಿದ್ದು, ವಿಶೇಷವಾಗಿ ನಟರಿಗೆ ಒಂದು ಬೃಹತ್ ಯೋಜನೆಯಾಗಿದೆ. ಶಿವಣ್ಣನವರ ಶ್ರದ್ಧೆಗೆ ಸರಿಸಾಟಿಯಿಲ್ಲ. ಅವರ ವರ್ಕ್ ಎಥಿಕ್ ಅಸಾಧಾರಣವಾಗಿದೆ. ಪ್ರೇಕ್ಷಕರ ಮುಖದಲ್ಲಿ ಮಂದಹಾಸ ತರಲು ಶಿವಣ್ಣ ತನ್ನ ಮಿತಿಯನ್ನು ಮೀರಿ ಕೆಲಸ ಮಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಅವರ ಕಚ್ಚಾ ಶಕ್ತಿಯನ್ನು ಸೆರೆಹಿಡಿಯುವುದು ತಯಾರಕರಾದ ನಮಗೆ ಬಿಟ್ಟದ್ದು' ಎಂದಿದ್ದಾರೆ.
ವಿಜೆಎಫ್- ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ವೈಶಾಕ್ ಜೆ ಗೌಡ ನಿರ್ಮಿಸಿರುವ ಈ ಚಿತ್ರವು ಇತ್ತೀಚೆಗಷ್ಟೇ ನಟ ಶಿವರಾಜಕುಮಾರ್ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಪೋಸ್ಟರ್ ಇದೀಗ ವ್ಯಾಪಕ ನಿರೀಕ್ಷೆ ಹುಟ್ಟುಹಾಕಿದೆ.
ಆರೋಗ್ಯ ಸಮಸ್ಯೆಯಿಂದ ಬಳಲಿದ್ದ ಶಿವರಾಜ್‌ಕುಮಾರ್ ಅವರಿಗೆ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕು. ಅವರು ಆದಷ್ಟು ಬೇಗ ಗುಣವಾಗುತ್ತಾರೆ ಮತ್ತು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೆ. 'ನಾವು ಭೈರವನ ಕೊನೆ ಪಾಠ ಚಿತ್ರಕ್ಕೆ ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಮತ್ತು ಅದನ್ನು ತೆರೆ ಮೇಲೆ ತರಲು ಕಾಯುತ್ತಿದ್ದೇವೆ. ಭೈರವ ಪಾತ್ರಧಾರಿ ಹೇಳುವಂತೆ, ‘ಮನಸ್ಸಿನ ಮೌನದಲ್ಲಿ ಮಹಾನ್ ವಿಜಯಗಳು ಸಿಗುತ್ತವೆ ಎಂಬುದು ತಾಳ್ಮೆಯ ಯೋಧನಿಗೆ ಗೊತ್ತು' ಎಂದು ಹೇಮಂತ್ ತಿಳಿಸಿದ್ದಾರೆ.