ಸಿನಿಮಾ ಸುದ್ದಿ

ಇಲ್ಲ ಇಲ್ಲ ನಾನು ಕರ್ನಾಟಕದವಳೇ, ಭಾಷೆ ಕನ್ನಡನೇ: ಕಕ್ಕಾಬಿಕ್ಕಿಯಾಗಿ ನೋಡಿದ ಸಲ್ಮಾನ್ ಖಾನ್; Rashmika Mandanna ಮತ್ತೆ ಟ್ರೋಲ್, Video!

ಇಲ್ಲ ಇಲ್ಲ ನಾನು ಕರ್ನಾಟಕದವಳೇ, ಭಾಷೆ ಕನ್ನಡ...! ಕಕ್ಕಾಬಿಕ್ಕಿಯಾಗಿ ನೋಡಿದ ಸಲ್ಮಾನ್ ಖಾನ್; ಮತ್ತೆ ಟ್ರೋಲ್, Video Viral!

ಭಾರತೀಯ ಚಿತ್ರರಂಗದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ಸದಾ ತಮ್ಮ ಹೇಳಿಕೆಗಳಿಂದ ಸಖತ್ ಟ್ರೋಲ್ ಆಗುತ್ತಿರುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎಂದರೇ. ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಚಿತ್ರದ ಪ್ರಚಾರದ ಸಂದರ್ಭದಲ್ಲಿ ನಟಿ ಇದೀಗ ತಾವು ಕರ್ನಾಟಕದಳು ಎಂದು ಹೇಳಿದ್ದು ಇದಕ್ಕೆ ಅಭಿಮಾನಿಗಳು ಸಖತ್ ಟ್ರೋಲ್ ಮಾಡುತ್ತಿದ್ದಾರೆ.

ವಿಕ್ಕಿ ಕೌಶಲ್ ಅಭಿನಯದ ಛಾವಾ ಚಿತ್ರದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ರಶ್ಮಿಕಾ ಮಂದಣ್ಣ ನಾನು ಹೈದರಾಬಾದ್ ನವಳು ಎಂದು ಹೇಳಿದ್ದರು. ನಾನು ಅಲ್ಲಿಂದ ಒಬ್ಬಂಟಿಯಾಗಿ ಬಂದಿದ್ದೇನೆ. ಬಹುಶಃ ನಾನು ಈಗ ನಿಮ್ಮ ಕುಟುಂಬದ ಭಾಗ ಆಗಿದ್ದೇನೆ ಎಂದು ರಶ್ಮಿಕಾ ಹೇಳಿದ್ದಾರೆ. ಇದು ಅನೇಕರ ಕೋಪಕ್ಕೆ ಕಾರಣ ಆಗಿತ್ತು. ಕನ್ನಡಿಗರು ರಶ್ಮಿಕಾ ಬಗ್ಗೆ ಟೀಕೆ ಹೊರಹಾಕಿದ್ದರು. ರಶ್ಮಿಕಾಗೆ ಕರ್ನಾಟಕ ಸಂಪೂರ್ಣವಾಗಿ ಮರೆತು ಹೋಗಿದೆ ಎಂದು ಅನೇಕರು ಟೀಕಿಸಿದ್ದರು.

ಇದೀಗ ರಶ್ಮಿಕಾ ಮಂದಣ್ಣ ಎಚ್ಚೆತ್ತಿದ್ದಾರೆ ಅನಿಸುತ್ತೆ. ಕೊನೆಗೂ ತಮ್ಮ ತಾಯ್ನಾಡು ಯಾವುದು ಅಂತ ಹೀಗಾ ಗೊತ್ತಾಯ್ತಾ ಎಂದು ನೆಟ್ಟಿಗರು ಗೇಲಿ ಮಾಡುತ್ತಿದ್ದಾರೆ. ಈ ದಿಢೀರ್ ಬದಲಾವಣೆ ಕಾರಣ ಏನಿರಬಹುದು ಎಂದು ಕಮೆಂಟ್ ಮಾಡುತ್ತಿದ್ದಾರೆ. ಸಿಕಂದರ್ ಚಿತ್ರದ ಪ್ರಚಾರ ಕಾರ್ಯಕ್ರಮದ ವೇಳೆ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಮಾತನಾಡಿದ್ದರು. ಈ ವೇಳೆ ರಶ್ಮಿಕಾ ಮಂದಣ್ಣ ದಿಢೀರ್ ಅಂತ ನಾನು ಕರ್ನಾಟಕದಳು. ನನ್ನ ಭಾಷೆ ಕನ್ನಡ... ಎಂದು ಹೇಳಿದ್ದು ಪಕ್ಕದಲ್ಲೇ ಕುಳಿತಿದ್ದ ಸಲ್ಮಾನ್ ಇದನ್ನು ನೋಡಿ ಕ್ಷಣಕಾಲ ಕಕ್ಕಾಬಿಕ್ಕಿಯಾಗುತ್ತಾರೆ. ಕೊನೆಗೆ ಇದು ಕೂಡ ಸತ್ಯ ಎಂದು ತಮ್ಮ ತಾಯ್ನಾಡಿನ ಬಗ್ಗೆ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್