ಸಾಯಿ ಧನ್ಸಿಕಾ, ವಿಶಾಲ್ 
ಸಿನಿಮಾ ಸುದ್ದಿ

ಶೀಘ್ರದಲ್ಲೇ 'ಕಬಾಲಿ' ನಟಿ ಸಾಯಿ ಧನ್ಸಿಕಾ ಜೊತೆ 47 ವರ್ಷದ ನಟ ವಿಶಾಲ್ ಮದುವೆ!

ತಮಿಳು ನಟ ವಿಶಾಲ್ ಕೃಷ್ಣ ರೆಡ್ಡಿ ಇತ್ತೀಚೆಗೆ ವಿಲ್ಲುಪುರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೂರ್ಛೆ ಹೋಗಿ ಬಿದ್ದ ನಂತರ ಅವರು ಸುದ್ದಿಯಲ್ಲಿದ್ದರು.

ತಮಿಳು ನಟ ವಿಶಾಲ್ ಕೃಷ್ಣ ರೆಡ್ಡಿ ಇತ್ತೀಚೆಗೆ ವಿಲ್ಲುಪುರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೂರ್ಛೆ ಹೋಗಿ ಬಿದ್ದ ನಂತರ ಅವರು ಸುದ್ದಿಯಲ್ಲಿದ್ದರು. 47 ವರ್ಷದ ನಟ ವಿಶಾಲ್ ಅವರು ಸುಂದರ್ ಸಿ ಅವರ 'ಮಧ ಗಜ ರಾಜ' ಚಿತ್ರದೊಂದಿಗೆ ಮತ್ತೆ ಚಿತ್ರರಂಗಕ್ಕೆ ಮರಳಿದ್ದರು. ನಟನಾ ಸಾಹಸ ಮತ್ತು ಆರೋಗ್ಯದ ಬಗ್ಗೆ ಮಾಹಿತಿಯ ಹೊರತಾಗಿ ವಿಶಾಲ್ ಮತ್ತೊಂದು ವೈಯಕ್ತಿಕ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ಸುದ್ದಿಗಳ ಪ್ರಕಾರ, ನಟ ಕಬಾಲಿ ಖ್ಯಾತಿಯ ಸಾಯಿ ಧನ್ಸಿಕಾ ಅವರನ್ನು ಮದುವೆಯಾಗಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ.

ತಮಿಳುನಾಡಿನಲ್ಲಿ ದೂರದರ್ಶನ, ಚಲನಚಿತ್ರ ಮತ್ತು ರಂಗಭೂಮಿ ನಟರ ಸಂಘವಾದ ದಕ್ಷಿಣ ಭಾರತೀಯ ಕಲಾವಿದರ ಸಂಘ ಎಂದೂ ಕರೆಯಲ್ಪಡುವ ನಡಿಗರ್ ಸಂಗಮದ ಸದಸ್ಯರಾಗಿರುವ ನಟ ವಿಶಾಲ್ ಗೆ ಮಾಧ್ಯಮ ಸಂವಾದದ ಸಮಯದಲ್ಲಿ ನಟನನ್ನು ಅವರ ಮದುವೆ ಯೋಜನೆಗಳ ಬಗ್ಗೆ ಕೇಳಿದಾಗ ಅವರು ನಾವು ಮದುವೆಯ ಬಗ್ಗೆ ಚರ್ಚಿಸಿದ್ದೇವೆ ಮತ್ತು ಅದು ಪ್ರೇಮ ವಿವಾಹವಾಗಿರುತ್ತದೆ. ವಧು ಮತ್ತು ಮದುವೆಯ ದಿನಾಂಕದ ಬಗ್ಗೆ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುತ್ತೇನೆ ಎಂದು ಉತ್ತರಿಸಿದರು.

ಸಾಯಿ ಧನ್ಶಿಕಾ ಜೊತೆ ವಿಶಾಲ್ ಅವರ ವಿವಾಹದ ವರದಿಗಳು ನಿಜ ಎಂದು ಅವರ ಆಪ್ತ ಮೂಲಗಳು ದೃಢಪಡಿಸಿವೆ. ಸಾಯಿ ಧನ್ಶಿಕಾ ನಾಯಕಿಯಾಗಿ ನಟಿಸಲಿರುವ ಮುಂಬರುವ ತಮಿಳು ಚಿತ್ರ ಯೋಗಿಡಾದಲ್ಲಿ ನಟ ಮುಖ್ಯ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮ ಇಂದು ಸಂಜೆ ನಿಗದಿಯಾಗಿದ್ದು, ಅಲ್ಲಿ ಅವರ ವಿವಾಹದ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಬಹುದು ಎಂಬ ಊಹಾಪೋಹಗಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

ಶ್ರೀಶೈಲ: ಹೋಟೆಲ್‌ನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ; ಕಾರಣ ನಿಗೂಢ