ರಾಗಿಣಿ ದ್ವಿವೇದಿ 
ಸಿನಿಮಾ ಸುದ್ದಿ

'ಜಾವಾ' ಸಿನಿಮಾದಲ್ಲಿ ಡೇರಿಂಗ್, ಬೋಲ್ಡ್ ಅವತಾರದಲ್ಲಿ ರಾಗಿಣಿ ದ್ವಿವೇದಿ!

ಈ ಚಿತ್ರದಲ್ಲಿ ರಾಜ್ ವರ್ಧನ್ ಜೊತೆಗೆ ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸುತ್ತಿದ್ದು, ಇದು ಬಾರ್ನ್ ಸ್ವಾಲೋ ಕಂಪನಿ ಬ್ಯಾನರ್ ಅಡಿಯಲ್ಲಿ ರಾಜ್ ವರ್ಧನ್ ಅವರ ಚೊಚ್ಚಲ ನಿರ್ಮಾಣದ ಚಿತ್ರವಾಗಿದೆ.

ರಾಗಿಣಿ ದ್ವಿವೇದಿ ಅವರ ಮುಂದಿನ ಚಿತ್ರ 'ಜಾವಾ'ದಲ್ಲಿ ಹಿಂದೆಂದೂ ಕಾಣದ ಡೇರಿಂಗ್ ಹಾಗೂ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರದಲ್ಲಿ ರಾಜ್ ವರ್ಧನ್ ಜೊತೆಗೆ ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸುತ್ತಿದ್ದು, ಇದು ಬಾರ್ನ್ ಸ್ವಾಲೋ ಕಂಪನಿ ಬ್ಯಾನರ್ ಅಡಿಯಲ್ಲಿ ರಾಜ್ ವರ್ಧನ್ ಅವರ ಚೊಚ್ಚಲ ನಿರ್ಮಾಣದ ಚಿತ್ರವಾಗಿದೆ.

ದೇವಾ ಚಕ್ರವರ್ತಿ ನಿರ್ದೇಶನದ, ಜಾವಾ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗುತ್ತಿದ್ದು, ಉತ್ತಮ ಕಥಾಹಂದರದೊಂದಿಗೆ ಮಾಸ್ ಪ್ರಿಯರನ್ನು ಇಷ್ಟಪಡಿಸುವ ನಿರೀಕ್ಷೆಯಿದೆ.

ಜಾವಾದಲ್ಲಿ ರಾಗಿಣಿ ದ್ವಿವೇದಿಯದು ಪ್ರಮುಖ ಪಾತ್ರವಾಗಿದೆ. ಈ ಹಿಂದೆ ನೋಡಿಲ್ಲದ ಬೋಲ್ಡ್ ಅವತಾರದಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಪ್ರತಿ ಫ್ರೇಮ್‌ನಲ್ಲಿಯೂ ಕಮಾಂಡಿಂಗ್ ಮಾಡುವ ದಿಟ್ಟ ಮಹಿಳಾ ನಾಯಕಿಯಾಗಿದ್ದಾರೆ. ರಾಗಿಣಿ ಕೇವಲ ಈ ಚಿತ್ರದಲ್ಲಿ ನಟಿಸುತ್ತಿಲ್ಲ. ಅವರು R Queen ಆಗಿ ಹೊರಹೊಮ್ಮಲಿದ್ದಾರೆ ಎಂದು ನಿರ್ದೇಶಕ ದೇವಾ ತಿಳಿಸಿದರು.

ಆಕೆಯ ಜನ್ಮದಿನದಂದೂ ಬಿಡುಗಡೆಯಾದ ಫಸ್ಟ್ ಲುಕ್ ಫೋಸ್ಟರ್ ನಲ್ಲಿ ಅವರಲ್ಲಿ ಇರುವ ಶಕ್ತಿ ಏನೆಂಬುದು ತೋರಿಸಿದೆ ಎಂದು ಅವರು ಹೇಳಿದರು.

'ಜಾವಾ' ಸದ್ಯ ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದು, ಜುಲೈ ಅಂತ್ಯದ ವೇಳೆಗೆ ಶೂಟಿಂಗ್ ಆರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮೆ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್