ಸೃಜನ್ ಲೋಕೇಶ್, ಸಂಹಿತಾ ವಿನ್ಯಾ 
ಸಿನಿಮಾ ಸುದ್ದಿ

ಸೃಜನ್ ಲೋಕೇಶ್ ನಿರ್ದೇಶನದ 'GST' ಚಿತ್ರದ ಮೊದಲ ಲಿರಿಕಲ್ ಸಾಂಗ್ ವಿಡಿಯೋ ಬಿಡುಗಡೆ; ಸಂಹಿತಾ ವಿನ್ಯಾ ಸಖತ್ ಸ್ಟೆಪ್!

'ಚಮೇಲಿ ಚಲ್' ಎಂಬ ವಿಶೇಷ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಇದರಲ್ಲಿ ಕನ್ನಡದ ನಟಿ ಸಂಹಿತಾ ವಿನ್ಯಾ ಸಖತ್ ಸ್ಟೆಪ್ ಹಾಕಿದ್ದಾರೆ. ಮಾಡೆಲ್ ಹಾಗೂ ನಟಿ ಸಂಹಿತಾ ವಿನ್ಯಾ ಚಮೇಲಿಯಾಗಿ ಪಡ್ಡೆ ಹೈಕಳ ನಿದ್ದೆ ಕೆಡಿಸುವ ಹಾಗೆ ಡ್ಯಾನ್ಸ್ ಮಾಡಿದ್ದಾರೆ.

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಚೊಚ್ಚಲ ನಿರ್ದೇಶನದ ಜೊತೆಗೆ ನಾಯಕ ನಟನಾಗಿ ಅಭಿನಯಿಸಿರುವ ಬಹುನಿರೀಕ್ಷಿತ 'GST'ಚಿತ್ರ ಬಿಡುಗಡೆಗೆ ಸಜ್ಜಾಗಿರುವಂತೆಯೇ ಅದರ ಮೊದಲ ಲಿರಿಕಲ್ ಸಾಂಗ್ ವಿಡಿಯೋ ಬಿಡುಗಡೆಯಾಗಿದೆ.

'ಚಮೇಲಿ ಚಲ್' ಎಂಬ ವಿಶೇಷ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಇದರಲ್ಲಿ ಕನ್ನಡದ ನಟಿ ಸಂಹಿತಾ ವಿನ್ಯಾ ಸಖತ್ ಸ್ಟೆಪ್ ಹಾಕಿದ್ದಾರೆ. ಮಾಡೆಲ್ ಹಾಗೂ ನಟಿ ಸಂಹಿತಾ ವಿನ್ಯಾ ಚಮೇಲಿಯಾಗಿ ಪಡ್ಡೆ ಹೈಕಳ ನಿದ್ದೆ ಕೆಡಿಸುವ ಹಾಗೆ ಡ್ಯಾನ್ಸ್ ಮಾಡಿದ್ದಾರೆ.

ಉಳಿದಂತೆ ನಾಯಕ ನಟ ಸೃಜನ್, ಗಿರಿ ಶಿವಣ್ಣ, ತಬಲಾ ನಾಣಿ, ವಿನೋದ್ ಗೋಬರ್ಗಲಾ ಮತ್ತಿತರರು ಸಂಹಿತಾ ವಿನ್ಯಾ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಯೂ ಟ್ಯೂಬ್ ನಲ್ಲಿ ಹೆಚ್ಚಿನ ವೀಕ್ಷಣೆ, ಲೈಕ್ ಪಡೆದುಕೊಂಡಿದ್ದು, ಯುವ ಜನತೆ ಫಿದಾ ಆಗಿದ್ದಾರೆ.

ರ‍್ಯಾಪರ್ ಚಂದನ್ ಶೆಟ್ಟಿ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದು, ಅನಿತಾ ಸಾರಾ ಮಹೇಶ್ ಅವರೊಂದಿಗೆ ಹಾಡಿದ್ದಾರೆ. ವಿಜಯ್ ಈಶ್ವರ್ ಅವರ ಸಾಹಿತ್ಯವಿದೆ. ಜಿಎಸ್‌ಟಿಯನ್ನು ಸೃಜನ್ ಬರೆದು ನಿರ್ದೇಶಿಸಿದ್ದಾರೆ ಮತ್ತು ನಿವೇದಿತಾ ಗೌಡ, ಗಿರಿಜಾ ಲೋಕೇಶ್, ಸುಕೃತ್ ಸೃಜನ್ ಲೋಕೇಶ್, ವಿನಯಾ ಪ್ರಸಾದ್, ರಜನಿ ಭಾರದ್ವಾಜ್, ಅಶೋಕ್ ಶೋಬ್ರಾಜ್, ಸುಂದರ್ ವೀಣಾ, ವೀಣಾ ಸುಂದರ್, ವಿಶಾಲ್ ಹೆಗ್ಡೆ, ಮಹಾಂತೇಶ್ ಹಿರೇಮಠ್ ಸೇರಿದಂತೆ ಅನೇಕರ ತಾರಾಗಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!