ಬೆಂಗಳೂರು: ಬಿಗ್ ಬಾಸ್ ರಂಜಿತ್ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದಡಿ ದೂರು ಜಗದೀಶ್ ಅವರು ದೂರು ನೀಡಿದ್ದು ಪೊಲೀಸರು ಎನ್‌ಸಿಆರ್ ದಾಖಲಿಸಿದ್ದಾರೆ.
2018 ರಿಂದ ಅಮೃತಹಳ್ಳಿಯ ಫ್ಲ್ಯಾಟ್‌ನಲ್ಲಿ ಜಗದೀಶ್ ಕುಟುಂಬ ವಾಸವಾಗಿದ್ದು, 2025 ರಿಂದ ಇದೇ ಫ್ಲ್ಯಾಟ್ ನಲ್ಲಿ ಅಕ್ಕ ಬಾವನ ಜೊತೆ ರಂಜಿತ್ ವಾಸವಿದ್ದರು. ಈಗ ಈ ಮನೆ ನನ್ನದು ಎಂದು ಅಕ್ಕ ತಮ್ಮನ ನಡುವೆ ಗಲಾಟೆ ನಡೆದಿದೆ. ರಂಜಿತ್ ಜೊತೆ ರಂಜಿತ್ ಅಕ್ಕ ಗಲಾಟೆ ಮಾಡಿ ಒಬ್ಬರಿಗೊಬ್ಬರು ಹಲ್ಲೆ ನಡೆಸಿದ್ದಾರೆ. ಈ ಮನೆ ರಶ್ಮಿ ಹೆಸರಲ್ಲೇ ಇದೆ ಎನ್ನಲಾಗಿದೆ. ಆದರೆ, ಮನೆ ಖರೀದಿಸಲು ನಾನೂ ಹಣ ಹಾಕಿದ್ದೆ ಎಂದು ರಂಜಿತ್ ಹೇಳಿದ್ದಾರೆ. ಇದೇ ವಿಚಾರಕ್ಕೆ ರಂಜಿತ್ ಪತ್ನಿ ಹಾಗೂ ರಶ್ಮಿ ನಡುವೆ ಜಗಳ ನಡೆದಿದೆ.
ಮನೆ ಬಿಟ್ಟು ಹೋಗದೆ ಈ ಮನೆ ನನ್ನದು ಎಂಧು ರಂಜಿತ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಜಗದೀಶ್ ದೂರು ನೀಡಿದ್ದಾರೆ. ದೂರಿಗೆ ಸಾಕ್ಷ್ಯವಾಗಿ ಮನೆಯಲ್ಲಿ ಒಬ್ಬರಿಗೊಬ್ಬರು ಬೈದಾಡಿಕೊಳ್ಳುವ ವೀಡಿಯೋವನ್ನು ನೀಡಿದ್ದಾರೆ. ದೂರು ದಾಖಲಾದ ಬೆನ್ನಲ್ಲೇ ರಂಜಿತ್ ಅವರನ್ನು ಠಾಣೆಗೆ ಕರೆಸಿದ ಪೊಲೀಸರು ಮತ್ತೊಮ್ಮೆ ಗಲಾಟೆ ಮಾಡಿಕೊಳ್ಳಬಾರದು ಎಂದು ಹೇಳಿ ನ್ಯಾಯಾಲಯದಲ್ಲಿ ವಿವಾದ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿ ಕಳುಹಿಸಿದ್ದಾರೆ.