ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 12’ ಸೆಪ್ಟೆಂಬರ್ 28 ರಿಂದ ಆರಂಭವಾಗಲಿದೆ.
ಈ ಬಾರಿ ಯಾರೆಲ್ಲ ದೊಡ್ಡ ಮನೆಗೆ ಹೋಗ್ತಾರೆ ಎಂಬ ಕುತೂಹಲ ಸಹಜವಾಗಿಯೇ ವೀಕ್ಷಕರಲ್ಲಿ ಹೆಚ್ಚಾಗಿದೆ. ಈ ನಡುವೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ಲಿಸ್ಟ್‌ನಲ್ಲಿ ವಿಜಯ್ ಸೂರ್ಯ, ರಾಧಾ ರಮಣ ಖ್ಯಾತಿಯ ನಟಿ ಶ್ವೇತಾ ಪ್ರಸಾದ್, ಸತ್ಯ ಧಾರಾವಾಹಿ ನಟ ಸಾಗರ್ ಬಿಲ್ಲಿಗೌಡ, ಯು ಟ್ಯೂಬರ್ ಎಂ. ಡಿ. ಸಮೀರ್ , ದಿವ್ಯಾ ವಸಂತ್, ಮೇಘಾ ಶೆಟ್ಟಿ ಮತ್ತಿತರ ಹೆಸರಿದೆ.
ಹಾಗೆಯೇ ಸಂಖ್ಯಾಶಾಸ್ತ್ರಜ್ಞ ಅರವಿಂದ್ ರತನ್, ಯೂಟ್ಯೂಬರ್ ಪಾಯಲ್ ಚೆಂಗಪ್ಪ, ವರುಣ್ ಆರಾಧ್ಯಾ, ಮಹಾನಟಿ ಖ್ಯಾತಿಯ ಗಗನ ಭಾರಿ, ಗಾಯಕ ಸುನೀಲ್ ಮತ್ತಿತರ ಹೆಸರು ಪಟ್ಟಿಯಲ್ಲಿ ಇದೆ.