ಚಿತ್ರದಲ್ಲಿ ವಿಜಯ್ ದಳಪತಿ  
ಸಿನಿಮಾ ಸುದ್ದಿ

ಬಿಡುಗಡೆ ಮುನ್ನವೇ ದಳಪತಿ ವಿಜಯ್ 'ಜನ ನಾಯಗನ್' ಆನ್‌ಲೈನ್‌ನಲ್ಲಿ ಸೋರಿಕೆ: KVN ಪ್ರೊಡಕ್ಷನ್ಸ್ ನೀಡಿದ ಎಚ್ಚರಿಕೆಯೇನು?

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ, ಕಂಪನಿ ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಪೈರಸಿ ಪರಿಣಾಮದಿಂದ ಉಂಟಾಗುವ ಭಾವನಾತ್ಮಕ ಮತ್ತು ವೃತ್ತಿಪರ ಹಾನಿಯನ್ನು ಉಲ್ಲೇಖಿಸಿದೆ.

ಅಹಿಂಸಾ ಎಂಟರ್‌ಟೈನ್‌ಮೆಂಟ್, ನಿರ್ದೇಶಕ ಎಚ್. ವಿನೋತ್ ಅವರ ಮುಂಬರುವ ತಮಿಳು ಚಿತ್ರ ಜನ ನಾಯಗನ್ ಚಿತ್ರದ ಯುಕೆ ವಿತರಕರು, ಚಿತ್ರದ ದೃಶ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಏನು ನಡೆದಿದೆ
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ, ಕಂಪನಿ ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಪೈರಸಿ ಪರಿಣಾಮದಿಂದ ಉಂಟಾಗುವ ಭಾವನಾತ್ಮಕ ಮತ್ತು ವೃತ್ತಿಪರ ಹಾನಿಯನ್ನು ಉಲ್ಲೇಖಿಸಿದೆ. ಇದು ನಾವು ಎದುರಿಸಿದ ಅತ್ಯಂತ ಕಠಿಣ ದಿನ. #JanaNayagan ದಳಪತಿಯವರ ವಿದಾಯ ಸಿನಿಮಾ. ಅವರು ಇಷ್ಟೊಂದು ವರ್ಷಗಳಲ್ಲಿ ಕೊಟ್ಟದ್ದನ್ನೆಲ್ಲ ಆಚರಿಸುವ ಚಿತ್ರ. ಇದು ಸರಿಯಾದ ಸಮಯದಲ್ಲಿ, ಚಿತ್ರಮಂದಿರಗಳಲ್ಲಿ, ನಿಮ್ಮ ಎಲ್ಲರ ಜೊತೆ ಅನುಭವಿಸಬೇಕಾಗಿತ್ತು.

ಪೈರಸಿಯ ವಿರುದ್ಧ ಮನವಿ
ಚಿತ್ರ ನಿರ್ಮಾಣವು ಅನೇಕ ಜನರ ಶ್ರಮದಿಂದ ನಿರ್ಮಿತವಾಗಿದ್ದು, ಸೋರಿಕೆಯಾದ ವಿಷಯಗಳನ್ನು ಬಳಸದೆ, ಹೊಣೆಗಾರಿಕೆಯಿಂದ ಸಿನಿಮಾ ಬೆಂಬಲಿಸಬೇಕೆಂದು ವಿತರಕರು ಮನವಿ ಮಾಡಿದ್ದಾರೆ.

ಚಿತ್ರವೆಂದರೆ ಕೇವಲ ಪರದೆಯ ಮೇಲೆ ಕಾಣುವುದಲ್ಲ. ಅದರಲ್ಲಿ ವರ್ಷಗಳ ಶ್ರಮ, ತ್ಯಾಗ ಮತ್ತು ಸಾವಿರಾರು ಜನರ ಕೆಲಸ ಇದೆ. ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುವುದು ಅಥವಾ ಬಿಡುವುದು ನಿಮ್ಮ ಆಯ್ಕೆ — ಆದರೆ ಪೈರಸಿಗೆ ಬೆಂಬಲ ನೀಡುವುದು ಈ ಎಲ್ಲವನ್ನು ಹಾಳುಮಾಡುತ್ತದೆ. ಮತ್ತೆ ಸರಿಪಡಿಸಲಾಗದ ಹಾನಿ ಉಂಟುಮಾಡುತ್ತದೆ ಎಂದು ತಿಳಿಸಿದ್ದಾರೆ.

ಒಂದು ಚಿತ್ರದಲ್ಲಿ ಹಲವರ ಜೀವನ ಅಡಗಿದೆ. ಪೈರಸಿ ಅದನ್ನೆಲ್ಲ ಶೂನ್ಯಗೊಳಿಸುತ್ತದೆ. ದಯವಿಟ್ಟು ಸರಿಯಾದ ರೀತಿಯಲ್ಲಿ ಬೆಂಬಲಿಸಿ ಎಂದು ಹೇಳಿದ್ದಾರೆ.

ನಿರ್ಮಾಣ ಸಂಸ್ಥೆಯ ಎಚ್ಚರಿಕೆ
ಆನ್‌ಲೈನ್‌ನಲ್ಲಿ ದೃಶ್ಯಗಳು ಹರಿದಾಡಿದ ನಂತರ, ಕೆವಿಎನ್ ಪ್ರೊಡಕ್ಷನ್ಸ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಚಿತ್ರದ ಕೆಲವು ಭಾಗಗಳು, ಕೆಲವೆಡೆ ಸಂಪೂರ್ಣ ಚಿತ್ರವೇ ಅನಧಿಕೃತವಾಗಿ ಹಂಚಲಾಗಿದೆ, ಈ ಚಿತ್ರದ ಕೆಲವು ದೃಶ್ಯಗಳು ಹಾಗೂ ಕೆಲವೆಡೆ ಸಂಪೂರ್ಣ ಚಿತ್ರವನ್ನು ಗುರುತಿಸದ ವ್ಯಕ್ತಿಗಳು ಅನಧಿಕೃತವಾಗಿ ಪ್ರವೇಶಿಸಿ, ನಕಲಿಸಿ, ಹರಡುತ್ತಿದ್ದಾರೆ. ಇದು ಡಿಜಿಟಲ್ ಪೈರಸಿಗೆ ಗಂಭೀರ ಬೆದರಿಕೆ ಎಂದು ಹೇಳಿದೆ.

ಇಂತಹ ವಿಷಯಗಳನ್ನು ಬಳಸುವುದರಿಂದ ಕಾನೂನು ಸಮಸ್ಯೆಗಳು ಎದುರಾಗಬಹುದು ಎಂದು ಎಚ್ಚರಿಸಿದೆ. ಈ ರೀತಿಯ ಸೋರಿಕೆಯಾದ ವಿಷಯವನ್ನು ಡೌನ್‌ಲೋಡ್ ಮಾಡುವುದು, ನೋಡುವುದು, ಸಂಗ್ರಹಿಸುವುದು, ಫಾರ್ವರ್ಡ್ ಮಾಡುವುದು, ಹಂಚುವುದು ಅಥವಾ ಅಪ್‌ಲೋಡ್ ಮಾಡುವುದು — ವಾಟ್ಸ್ಆಪ್, ಟೆಲಿಗ್ರಾಂ, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಎಕ್ಸ್, ಯೂಟ್ಯೂಬ್ ಅಥವಾ ಬೇರೆ ಯಾವುದೇ ಮಾಧ್ಯಮದ ಮೂಲಕ — ಕ್ರಿಮಿನಲ್ ಅಪರಾಧ ಮತ್ತು ಕಾಪಿರೈಟ್ ಕಾನೂನು ಉಲ್ಲಂಘನೆ ಆಗುತ್ತದೆ ಎಂದು ತಿಳಿಸಿದೆ.

ಚಿತ್ರ ನಿರ್ಮಾಪಕರು ಸಾರ್ವಜನಿಕರಿಗೆ ಸೋರಿಕೆಯಾದ ವಿಷಯಗಳನ್ನು ಬಳಸದಂತೆ ಸಲಹೆ ನೀಡಿದ್ದಾರೆ.

ಅಧಿಕೃತ ಸೂಚನೆ

ನಾವು, KVN ಪ್ರೊಡಕ್ಷನ್ಸ್ LLP, ‘ಜನಾ ನಾಯಕನ್’ ಎಂಬ ಸಿನೆಮಾಟೋಗ್ರಾಫ್ ಚಿತ್ರದ ನಿರ್ಮಾಪಕರು ಹಾಗೂ ವಿಶೇಷ ಕಾಪಿರೈಟ್ ಹಕ್ಕುದಾರರು. ಈ ಚಿತ್ರದ ಕೆಲವು ದೃಶ್ಯಗಳು ಮತ್ತು ಕ್ಲಿಪ್‌ಗಳು, ಕೆಲವೆಡೆ ಬಹುತೇಕ ಸಂಪೂರ್ಣ ಚಿತ್ರವೇ, ನಕಲಿಸಿ ಮತ್ತು ಹರಡಲ್ಪಟ್ಟಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ಡಿಜಿಟಲ್ ಪೈರಸಿಗೆ ಗಂಭೀರ ಬೆದರಿಕೆಯನ್ನು ಉಂಟುಮಾಡುತ್ತಿದೆ. ಈ ರೀತಿಯ ಸೋರಿಕೆಯಾದ ವಿಷಯವನ್ನು ವಾಟ್ಸ್ಆಪ್, ಟೆಲಿಗ್ರಾಂ, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಎಕ್ಸ್, ಯೂಟ್ಯೂಬ್, ವೆಬ್‌ಸೈಟ್‌ಗಳು, ಟೋರಂಟ್‌ಗಳು ಅಥವಾ ಯಾವುದೇ ಮಾಧ್ಯಮದ ಮೂಲಕ ಡೌನ್‌ಲೋಡ್ ಮಾಡುವುದು, ನೋಡುವುದು, ಸಂಗ್ರಹಿಸುವುದು, ಫಾರ್ವರ್ಡ್ ಮಾಡುವುದು, ಹಂಚುವುದು ಅಥವಾ ಅಪ್‌ಲೋಡ್ ಮಾಡುವುದು — ಕ್ರಿಮಿನಲ್ ಅಪರಾಧವಾಗಿದ್ದು, ಕಾಪಿರೈಟ್ ಕಾನೂನುಗಳ ಉಲ್ಲಂಘನೆಯಾಗುತ್ತದೆ,” ಎಂದು ಸಾರ್ವಜನಿಕ ಸೂಚನೆಯಲ್ಲಿ ಹೇಳಲಾಗಿದೆ.

ಪಾಲ್ಗೊಂಡವರ ವಿರುದ್ಧ ತಕ್ಷಣ ಕಾನೂನು ಕ್ರಮ

ಪ್ರತಿ ಡಿಜಿಟಲ್ ಚಟುವಟಿಕೆ ಟ್ರೇಸ್ ಮಾಡಬಹುದಾಗಿದೆ. ನಾವು ಈಗಾಗಲೇ ಅಗತ್ಯ ತನಿಖೆಗಳನ್ನು, ಫೊರೆನ್ಸಿಕ್ ತನಿಖೆಗಳನ್ನು ಸೇರಿದಂತೆ, ಪ್ರಾರಂಭಿಸಿದ್ದೇವೆ ಮತ್ತು ಸಂಬಂಧಪಟ್ಟವರ ವಿರುದ್ಧ ದೂರುಗಳನ್ನು ದಾಖಲಿಸಿದ್ದೇವೆ. ಸೋರಿಕೆಯ ಸರಪಳಿಯಲ್ಲಿ ಇರುವ ಇತರರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಪ್ರತಿಯೊಬ್ಬರ ವಿರುದ್ಧ ಕಠಿಣ ನಾಗರಿಕ ಮತ್ತು ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತೀವ್ರ ಕುತೂಹಲ ಘಟ್ಟಕ್ಕೆ ತಲುಪಿದ ಪಶ್ಚಿಮ ಏಷ್ಯಾ ಸಂಘರ್ಷ: ಇಂದು ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇರಾನ್-ಅಮೆರಿಕ ನಡುವೆ ಸಂಧಾನ ಮಾತುಕತೆ-Video

5 ದಶಕಗಳ ಬಳಿಕ ದಾಖಲೆ ನಿರ್ಮಿಸಿದ ಚಂದ್ರಯಾನ: ಯಶಸ್ವಿಯಾಗಿ ಭೂಮಿಗೆ ಮರಳಿದ Artemis II ಗಗನ ಯಾತ್ರಿಗಳು-Video

'ನನ್ನ ಹಣೆಬರಹ ಎಲ್ಲಿದೆಯೋ, ಜನ ಎಲ್ಲಿ ಗೆಲ್ಲಿಸ್ತಾರೋ ನೋಡೋಣ: ನಮ್ಮ ಸಂಖ್ಯೆ ನೋಡಿ ಅಪಹಾಸ್ಯ ಮಾಡಿದ್ದಾರೆ, 2028 ರಲ್ಲಿ ಸರ್ಕಾರ ರಚಿಸ್ತಿವಿ'

ಲೋಕಭವನ -ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಂಘರ್ಷ: ಮತ ಪತ್ರ ಬಳಕೆ ಮಸೂದೆಗೆ ರಾಜ್ಯಪಾಲರ ತಡೆ

ಆನೇಕಲ್‌ ಬಳಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ 943 ಕೋಟಿ ರೂ. ಟೆಂಡರ್: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪರ್ಯಾಯ ಸಮುಚ್ಚಯ !

SCROLL FOR NEXT