ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಚಿಕ್ಕಣ್ಣ ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ತಮ್ಮ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಚಿತ್ರರಂಗದ ಮಿತ್ರರಿಗೆ ಹಾಗೂ ರಾಜಕೀಯ ಗಣ್ಯರಿಗೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇದರ ಭಾಗವಾಗಿ ಇತ್ತೀಚೆಗೆ 'ರಾಕಿಂಗ್ ಸ್ಟಾರ್' ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮದುವೆಯ ಲಗ್ನಪತ್ರಿಕೆಯನ್ನು ನೀಡಿದ್ದಾರೆ. ಆಗಸ್ಟ್ 29 ಮತ್ತು 30 ರಂದು ಮೈಸೂರಿನಲ್ಲಿ ವಿವಾಹ ನಡೆಯಲಿದೆ.
ಚಿತ್ರರಂಗಕ್ಕೆ ಬಂದು ಸ್ವಪ್ರಯತ್ನದಿಂದ ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿರುವ ಚಿಕ್ಕಣ್ಣ, ಯಶ್ ಜೊತೆ ‘ಕಿರಾತಕ’ ‘ರಾಜಾಹುಲಿ’, ‘ಮಾಸ್ಟರ್ ಪೀಸ್’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೆಳ್ಳಿಪರದೆಯ ಮೇಲಿದ್ದ ಇವರ ಜೋಡಿಯ ಬಾಂಧವ್ಯ ಹಾಗೂ ಆಪ್ತ ಸ್ನೇಹ ಈಗಲೂ ಮುಂದುವರಿದಿದ್ದು, ಚಿಕ್ಕಣ್ಣ ವೈಯಕ್ತಿಕವಾಗಿ ತೆರಳಿ ʻರಾಕಿಂಗ್ ಸ್ಟಾರ್ʼ ದಂಪತಿಯನ್ನು ಮದುವೆಗೆ ಆಹ್ವಾನಿಸಿದ್ದಾರೆ.
ಸದ್ಯ ಟಾಕ್ಸಿಕ್ ಸಿನಿಮಾದ ಬಿಡುಗಡೆಯ ಬ್ಯುಸಿಯಲ್ಲಿರುವ ನಟ ಯಶ್, ಚಿಕ್ಕಣ್ಣನಿಂದ ಆಹ್ವಾನ ಪತ್ರಿಕೆ ಪಡೆದು ಹಾರೈಸಿದ್ದಾರೆ. ʻಟಾಕ್ಸಿಕ್ʼ ರಿಲೀಸ್ ಆದ ಮೂರೇ ದಿನಕ್ಕೆ ಚಿಕ್ಕಣ್ಣ ಅವರ ಮದುವೆ ಇದೆ. ಹಾಗಾಗಿ, ಯಶ್ ಈ ಮದುವೆಗೆ ಹೋಗುತ್ತಾರಾ ಎಂಬ ಪ್ರಶ್ನೆ ಕೇಳಿಬಂದಿದೆ.
ಚಿಕ್ಕಣ್ಣ ಅವರ ಕೈಹಿಡಿಯಲಿರುವ ಹುಡುಗಿಯ ಹೆಸರು ಪಾವನಾ. ಇವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದವರಾಗಿದ್ದು, ಇದು ಸಂಪೂರ್ಣವಾಗಿ ಹಿರಿಯರು ನಿಶ್ಚಯಿಸಿರುವ ಮದುವೆಯಾಗಿದೆ. ಈ ಹಿಂದೆಯೇ ಕುಟುಂಬಸ್ಥರು ಸರಳವಾಗಿ ನಿಶ್ಚಯ ಕಾರ್ಯಕ್ರಮ ಹಾಗೂ ಹೂ ಮುಡಿಸುವ ಶಾಸ್ತ್ರವನ್ನು ಪೂರ್ಣಗೊಳಿಸಿದ್ದರು.
ಬೆಳ್ಳಿಪರದೆಯ ಮೇಲಿದ್ದ ಇವರ ಜೋಡಿಯ ಬಾಂಧವ್ಯ ಹಾಗೂ ಆಪ್ತ ಸ್ನೇಹ ಈಗಲೂ ಮುಂದುವರಿದಿದ್ದು, ಚಿಕ್ಕಣ್ಣ ವೈಯಕ್ತಿಕವಾಗಿ ತೆರಳಿ ʻರಾಕಿಂಗ್ ಸ್ಟಾರ್ʼ ದಂಪತಿಯನ್ನು ಮದುವೆಗೆ ಆಹ್ವಾನಿಸಿದ್ದಾರೆ.
ಸದ್ಯ ಟಾಕ್ಸಿಕ್ ಸಿನಿಮಾದ ಬಿಡುಗಡೆಯ ಬ್ಯುಸಿಯಲ್ಲಿರುವ ನಟ ಯಶ್, ಚಿಕ್ಕಣ್ಣನಿಂದ ಆಹ್ವಾನ ಪತ್ರಿಕೆ ಪಡೆದು ಹಾರೈಸಿದ್ದಾರೆ. ʻಟಾಕ್ಸಿಕ್ʼ ರಿಲೀಸ್ ಆದ ಮೂರೇ ದಿನಕ್ಕೆ ಚಿಕ್ಕಣ್ಣ ಅವರ ಮದುವೆ ಇದೆ.