ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ನಟಿ ಪ್ರತ್ಯುಷಾ ಅನುಮಾನಾಸ್ಪದ ಸಾವು ಪ್ರಕರಣ: 4 ವಾರಗಳಲ್ಲಿ ಶರಣಾಗುವಂತೆ ಸಿದ್ದಾರ್ಥ್ ರೆಡ್ಡಿಗೆ ಸುಪ್ರೀಂ ಕೋರ್ಟ್ ಸೂಚನೆ; 24 ವರ್ಷಗಳ ಬಳಿಕ ಅಂತಿಮ ತೀರ್ಪು ಪ್ರಕಟ..!

ಪ್ರತ್ಯೂಷಾ ಮತ್ತು ಸಿದ್ಧಾರ್ಥ ರೆಡ್ಡಿ ಹೈದರಾಬಾದ್‌ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ ವೇಳೆ ಪ್ರೀತಿಯಲ್ಲಿ ಬಿದ್ದಿದ್ದರು. ಬಳಿಕ ಪ್ರತ್ಯುಷಾ ಸಿನಿರಂಗ ಪ್ರವೇಶಿಸಿದರೆ, ಸಿದ್ಧಾರ್ಥ ರೆಡ್ಡಿ ಇಂಜಿನಿಯರಿಂಗ್‌ಗೆ ಸೇರಿದ್ದರು.

ಹೈದರಾಬಾದ್: ಖ್ಯಾತ ನಟಿ ಪ್ರತ್ಯುಷಾ ಅನುಮಾನಾಸ್ಪದ ಸಾವು ಪ್ರಕರಣದ ಬಗ್ಗೆ 24 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದೆ.

ಈ ಪ್ರಕರಣದಲ್ಲಿ ಆರೋಪಿಯಾಗಿರುವ ಸಿದ್ಧಾರ್ಥ್ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ (ಫೆಬ್ರವರಿ 12) ವಜಾಗೊಳಿಸಿದ್ದು, 4 ವಾರಗಳಲ್ಲಿ ಪೊಲೀಸರಿಗೆ ಶರಣಾಗುವಂತೆ ಆದೇಶಿಸಿದೆ.

ಇದೇ ವೇಳೆ ಈ ಪ್ರಕರಣದ ಪೋಸ್ಟ್‌ಮಾರ್ಟಂ ಪ್ರಕ್ರಿಯೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಮರಣೋತ್ತರ ಪರೀಕ್ಷೆ ಸರಿಯಾದ ವಿಧಾನದಲ್ಲಿ ನಡೆಸಲಾಗಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಪ್ರಕರಣ ಸಂಬಂಧ ಈ ಹಿಂದೆ ಹೈಕೋರ್ಟ್ ಆರೋಪಿಗೆ ನೀಡಿದ್ದ ಶಿಕ್ಷೆಯನ್ನು ಇದೀಗ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ಪ್ರತ್ಯೂಷಾ ಮತ್ತು ಸಿದ್ಧಾರ್ಥ ರೆಡ್ಡಿ ಹೈದರಾಬಾದ್‌ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ ವೇಳೆ ಪ್ರೀತಿಯಲ್ಲಿ ಬಿದ್ದಿದ್ದರು. ಬಳಿಕ ಪ್ರತ್ಯುಷಾ ಸಿನಿರಂಗ ಪ್ರವೇಶಿಸಿದರೆ, ಸಿದ್ಧಾರ್ಥ ರೆಡ್ಡಿ ಇಂಜಿನಿಯರಿಂಗ್‌ಗೆ ಸೇರಿದ್ದರು.

ತೆಲಂಗಾಣದ ಭುವನಗಿರಿಯಲ್ಲಿ ಜನಿಸಿದ ಪ್ರತ್ಯೂಷಾ ಬಣ್ಣದಲೋಕಕ್ಕೆ ಪರಿಚಿತರಾಗಿದ್ದರು. ಕೆಲ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದರು. ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ಆಕೆ ತನ್ನ ಪ್ರಿಯಕರ ಸಿದ್ಧಾರ್ಥ್ ರೆಡ್ಡಿ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದರು. ಫೆಬ್ರವರಿ 23, 2002 ರಂದು ಆತ್ಮಹತ್ಯೆ ಯತ್ನದಲ್ಲಿ ಆಕೆ ಕೊನೆಯುಸಿರೆಳೆದಿದ್ದರು. ಆದರೆ ಪ್ರಿಯಕರ ಸಿದ್ಧಾರ್ಥ್ ರೆಡ್ಡಿ ಚಿಕಿತ್ಸೆ ಪಡೆದು ಬದುಕುಳಿದಿದ್ದ.

ಈ ನಡುವೆ ತನ್ನ ಮಗಳ ಸಾವಿಗೆ ಸಿದ್ದಾರ್ಥ್ ರೆಡ್ಡಿ ಕಾರಣ. ಮಗಳ ಮೇಲೆ ಅತ್ಯಾಚಾರ ನಡೆದಿದೆ. ಇದು ಆತ್ಮಹತ್ಯೆ ಅಲ್ಲ, ಸಂಚು ರೂಪಿಸಿ ಮಾಡಿರುವ ಕೊಲೆ ಎಂದು ನಟಿ ಪ್ರತ್ಯುಷಾ ತಾಯಿ ಸರೋಜಿನಿ ಅವರು ದೂರು ನೀಡಿದ್ದರು. ಇದೀಗ ಸರೋಜಿನಿ ಅವರ ಕಾನೂನು ಹೋರಾಟಕ್ಕೆ ಅಂತಿಮವಾಗಿ ಜಯ ಸಿಕ್ಕಿದೆ.

ಪ್ರತ್ಯುಷಾ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಸಿದ್ದಾರ್ಥ್‌ ರೆಡ್ಡಿಗೆ ಹೈದರಾಬಾದ್ ಮೆಟ್ರೋಪಾಲಿಟನ್ ಕೋರ್ಟ್ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಸಿದ್ದಾರ್ಥ್ ಹೈಕೋರ್ಟ್ ಕದ ತಟ್ಟಿದ್ದರು. ಹಾಗಾಗಿ 2011ರಲ್ಲಿ ಸಿದ್ದಾರ್ಥ್ ಜೈಲು ಶಿಕ್ಷೆಯನ್ನು ಎರಡು ವರ್ಷಗಳಿಗೆ ಇಳಿಸಿ ಹೈಕೋರ್ಟ್ ತೀರ್ಪು ನೀಡಿತ್ತು.

ನಂತರ ಹೈಕೋರ್ಟ್ ತೀರ್ಪು ಪ್ರಶ್ನಿಸಿ 2012ರಲ್ಲಿ ಪ್ರತ್ಯುಷಾ ತಾಯಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 14 ವರ್ಷಗಳಿಂದ ವಿಚಾರಣೆ ನಡೆಯುತ್ತಲೇ ಇತ್ತು. ಕಳೆದ ನವೆಂಬರ್‌ನಲ್ಲಿ ವಿಚಾರಣೆ ನಡೆದು ಸುಪ್ರೀಂ ಫೆಬ್ರವರಿ 17ಕ್ಕೆ ತೀರ್ಪು ಕಾಯ್ದಿರಿಸಿತ್ತು. ಇಂದು ಅಂತಿಮ ತೀರ್ಪು ಹೊರಬಿದ್ದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT