ರಶ್ಮಿಕಾ ಮಂದಣ್ಣ 
ಸಿನಿಮಾ ಸುದ್ದಿ

ರಶ್ಮಿಕಾ-ವಿಜಯ್‌ ಮದುವೆಯಲ್ಲಿ ಮೊಬೈಲ್‌ ಬ್ಯಾನ್: 'ಶೆಟ್ಟಿ ಗ್ಯಾಂಗ್'ಗೆ ಇಲ್ಲ ಇನ್ವಿಟೇಷನ್!

ಯಾವುದೇ ಫೋಟೋ ಮತ್ತು ವಿಡಿಯೋ ವೈರಲ್‌ ಆಗಬಾರದು ಎಂದು ಕಾರಣಕ್ಕೆ ಈ ನಿಯಮ ಮಾಡಲಾಗಿದೆ. ಅತಿಥಿಗಳ ಪಟ್ಟಿ ತುಂಬಾ ಚಿಕ್ಕದಾಗಿದೆ ಮತ್ತು ಅಲ್ಲಿ ಕಟ್ಟುನಿಟ್ಟಾದ 'ನೋ-ಫೋನ್ ಪಾಲಿಸಿ' ಜಾರಿಯಲ್ಲಿರುತ್ತದೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಅವರ ಮದುವೆಯು ಇದೆ ಫೆ.26ರಂದು ರಾಜಸ್ಥಾನದ ಉದಯಪುರ ಅರಮನೆಯಲ್ಲಿ ನಡೆಯುತ್ತಿದೆ. ಈ ಮದುವೆಯು ತುಂಬ ಖಾಸಗಿಯಾಗಿ ನಡೆಯಲಿದ್ದು, ಯಾವುದೇ ಸೆಲೆಬ್ರಿಟಿಗಳಿಗೆ ಈ ಮದುವೆಯಲ್ಲಿ ಆಹ್ವಾನ ನೀಡಿಲ್ಲ.

ಇನ್ನು, ಈ ಮದುವೆಯಲ್ಲಿ ಮೊಬೈಲ್‌ ಫೋನ್‌ ಬ್ಯಾನ್‌ ಮಾಡಲಾಗಿದೆ. ಮದುವೆಗೆ ಆಗಮಿಸುವವರು ಮೊಬೈಲ್‌ ತರುವಂತಿಲ್ಲ. ಯಾವುದೇ ಫೋಟೋ ಮತ್ತು ವಿಡಿಯೋ ವೈರಲ್‌ ಆಗಬಾರದು ಎಂದು ಕಾರಣಕ್ಕೆ ಈ ನಿಯಮ ಮಾಡಲಾಗಿದೆ. "ಅತಿಥಿಗಳ ಪಟ್ಟಿ ತುಂಬಾ ಚಿಕ್ಕದಾಗಿದೆ ಮತ್ತು ಅಲ್ಲಿ ಕಟ್ಟುನಿಟ್ಟಾದ 'ನೋ-ಫೋನ್ ಪಾಲಿಸಿ' (ಮೊಬೈಲ್ ನಿಷೇಧ) ಜಾರಿಯಲ್ಲಿರುತ್ತದೆ.

ಫೋಟೋಗ್ರಫಿ ತಂಡದವರಿಂದಲೂ ಗೌಪ್ಯತಾ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ" ಎಂದು ಮೂಲವೊಂದು ತಿಳಿಸಿದೆ. ಯಾವುದೇ ಕಾರಣಕ್ಕೂ ಅವರು ರಶ್ಮಿಕಾ ಮತ್ತು ವಿಜಯ್‌ ಮದುವೆ ಫೋಟೋಗಳನ್ನು ಎಲ್ಲಿಯೂ ಶೇರ್‌ ಮಾಡುವಂತಿಲ್ಲ ಎಂದು ಈ ಒಪ್ಪಂದದಲ್ಲಿ ತಿಳಿಸಲಾಗಿದೆ.

ಇನ್ನೂ ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಗೆ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದರು. ಆ ಚಿತ್ರದಲ್ಲಿ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಕೂಡ ಕೆಲಸ ಮಾಡಿದ್ದಾರೆ. ಈಗ ಒಟ್ಟಾರೆ ಶೆಟ್ಟಿ ಗ್ಯಾಂಗ್​​ನಿಂದ ರಶ್ಮಿಕಾ ಮಂದಣ್ಣ ಅವರು ದೂರ ಉಳಿದುಕೊಂಡಿದ್ದಾರೆ. ಆದರೆ ಶೆಟ್ಟಿ ಗ್ಯಾಂಗ್ ಸದಸ್ಯರಿಗೆ ಮದುವೆಯ ಆಹ್ವಾನ ಬಂದಿಲ್ಲ. ತಮಗೆ ಆಹ್ವಾನ ಬಂದಿಲ್ಲ, ಬರೋದೂ ಇಲ್ಲ ಎಂದು ಪ್ರಮೋದ್ ಶೆಟ್ಟಿ ಹೇಳಿದ್ದಾರೆ.

ಯಾಕೆ ಅಂತ ಕೇಳಿದ್ದರೆ, ‘ಅದು ಎಲ್ಲರಿಗೂ ಗೊತ್ತಿರುವ ವಿಚಾರ’ ಎಂದಿದ್ದಾರೆ ಪ್ರಮೋದ್ ಶೆಟ್ಟಿ. ಒಂದು ವೇಳೆ ಆಹ್ವಾನ ಬಂದರೆ ಹೋಗುವುದಾಗಿ ಅವರು ತಿಳಿಸಿದ್ದಾರೆ. ಬರೋದಿಲ್ಲ ಎನ್ನುವುದು ನನಗೂ ಗೊತ್ತು, ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಲ್ಲಿ ಹೊಸತೇನಿದೆ ಎಂದು ನಟ ಪ್ರಶ್ನಿಸಿದ್ದಾರೆ.

ಕೊನೆಗೆ, ರಕ್ಷಿತ್​ ಶೆಟ್ಟಿಯ ಬಗ್ಗೆ ಪ್ರಶ್ನಿಸಿದಾಗ, ಅವನೇನು ಚಾಕ್ಲೆಟ್​ ತಿನ್ನೋ ಚಿಕ್ಕ ಮಗುವಲ್ಲ. ಅವನು ಈ ಬಗ್ಗೆ ಎಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ. ಫೀನಿಕ್ಸ್‌ನಂತೆ ಮೇಲೆ ಬರ್ತಾನೆ, ನೋಡ್ತಾ ಇರಿ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ