ಗಿಲ್ಲಿ ನಟ 
ಸಿನಿಮಾ ಸುದ್ದಿ

Bigg Boss Kannada 12: ಗಿಲ್ಲಿ ನಟನಿಗೆ ಬಿಗ್ ಬಾಸ್ ಕಿರೀಟ; ರಕ್ಷಿತಾ ರನ್ನರ್ ಅಪ್

ಈ ಬಾರಿಯ ಬಿಗ್‌‌ಬಾಸ್‌ ಸೀಸನ್‌ 12 ಗೆದ್ದ ಗಿಲ್ಲಿಗೆ 50 ಲಕ್ಷ ರೂಪಾಯಿ ಕ್ಯಾಶ್‌ ಪ್ರೈಸ್‌ ಜೊತೆ ಭರ್ಜರಿ ಗಿಫ್ಟ್‌ ಕೂಡ ಸಿಕ್ಕಿದೆ.

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ದೊಡ್ಮನೆಯ ಆಟಕ್ಕೆ ಭಾನುವಾರ ರಾತ್ರಿ ತೆರೆ ಬಿದಿದ್ದು, ಗಿಲ್ಲಿ ನಟರಾಜ್ ಈ ಬಾರಿಯ‘ಬಿಗ್ ಬಾಸ್ ಕನ್ನಡ 12’ ವಿನ್ನರ್ ಆಗಿದ್ದು, ರಕ್ಷಿತಾ ರನ್ನರ್ ಅಪ್ ಆಗಿದ್ದಾರೆ. ಅಶ್ವಿನಿ ಗೌಡ ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ.

ಈ ಬಾರಿಯ ಬಿಗ್‌‌ಬಾಸ್‌ ಸೀಸನ್‌ 12 ಗೆದ್ದ ಗಿಲ್ಲಿಗೆ 50 ಲಕ್ಷ ರೂಪಾಯಿ ಕ್ಯಾಶ್‌ ಪ್ರೈಸ್‌ ಜೊತೆ ಭರ್ಜರಿ ಗಿಫ್ಟ್‌ ಕೂಡ ಸಿಕ್ಕಿದೆ. ಬಾರಿ ಬಿಗ್‌ಬಾಸ್‌ 12 ಗೆದ್ದವರಿಗೆ ಕ್ಯಾಶ್‌ ಪ್ರೈಸ್‌ ಜೊತೆ ಮಾರುತಿ ಸುಜುಕಿ ವಿಕ್ಟೋರಿಸ್‌ ಕಾರು ಕೂಡ ಉಡುಗೊರೆಯಾಗಿ ನೀಡಲಾಗಿದೆ.

ಈ ಬಾರಿಯ ಸೀಸನ್‌ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಕಳೆದೆಲ್ಲಾ ಸೀಸನ್‌‌ಗಳಿಗಿಂತ ಈ ಸೀಸನ್‌ ಕಂಟೆಸ್ಟೆಂಟ್‌ಗೆ ಹೆಚ್ಚಿನ ಜನ ಬೆಂಬಲ ಸಿಕ್ಕಿದೆ. ಅದರಲ್ಲೂ ಗಿಲ್ಲಿಗೆ ಸಿಕ್ಕಿರೋ ಸಪೋರ್ಟ್‌ ಈ ಹಿಂದೆ ಯಾರಿಗೂ ಸಿಕ್ಕಿಲ್ಲ ಅನ್ಸುತ್ತೆ. ಅಷ್ಟರಮಟ್ಟಿಗೆ ಗಿಲ್ಲಿ ಎಲ್ಲರನ್ನ ಸೆಳೆದುಕೊಂಡು ಬಿಟ್ಟಿದ್ದರು.

ಎರಡನೇ ರನ್ನರ್ ಅಪ್ ಆದ ಅಶ್ವಿನಿ ಅವರಿಗೆ 14 ಲಕ್ಷ ರೂಪಾಯಿ ಹಾಗೂ ಬಿಗ್​​ಬಾಸ್ ಫಿನಾಲೆಯಿಂದ ನಾಲ್ಕನೇ ಸ್ಪರ್ಧಿಯಾಗಿ ಹೊರಗೆ ಹೋದ ಕಾವ್ಯಾ ಅವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ.

ಈ ಸೀಸನ್​​ನಲ್ಲಿ ಒಟ್ಟು 24 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗಿದ್ದರು. ಅಂತಿಮವಾಗಿ 6 ಸ್ಪರ್ಧಿಗಳು ಫಿನಾಲೆಗೆ ಬಂದಿದ್ದರು. ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಮ್ಯೂಟೆಂಟ್ ರಘು, ಕಾವ್ಯಾ ಶೈವ, ಧನುಷ್ ಹಾಗೂ ಗಿಲ್ಲಿ ನಟ ಫಿನಾಲೆ ತಲುಪಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಣೇಶೋತ್ಸವಕ್ಕೆ ಅನಗತ್ಯ ನಿರ್ಬಂಧ ಇಲ್ಲ, ಆದ್ರೆ ಅಶಾಂತಿ ಸೃಷ್ಟಿಸಲು ಬಿಜೆಪಿ ಕುತಂತ್ರ: CM ಡಿ.ಕೆ ಶಿವಕುಮಾರ್ ಕಿಡಿ

ಟಿ.ನರಸೀಪುರ ಪೊಲೀಸ್ ಠಾಣೆ ಮುಂದೆ ಭಾರೀ ಹೈಡ್ರಾಮಾ: ಆರ್ ಅಶೋಕ್, ಯದುವೀರ್, ಪ್ರತಾಪ್ ಸಿಂಹ ಸೇರಿ ಬಿಜೆಪಿ ನಾಯಕರು ಪೊಲೀಸರ ವಶಕ್ಕೆ

India vs Afghanistan: ಅಭಿಷೇಕ್ ಅಬ್ಬರಕ್ಕೆ ಅಫ್ಘಾನ್ ಧೂಳೀಪಟ; ಮೊದಲ T20ಯಲ್ಲಿ ಭಾರತಕ್ಕೆ ಭರ್ಜರಿ ಗೆಲುವು

ಹಾವೇರಿ: ಪ್ರೀತಿಸಿ ಮದುವೆಯಾಗಿದ್ದ ಪತ್ನಿ ದೂರ; 'ಮುಂದಿನ ಜನ್ಮ ಇದ್ದರೆ ನಿನ್ನವನಾಗಿ ಹುಟ್ಟುವೆ' ಎಂದು ಪೋಸ್ಟ್ ಹಾಕಿ ಯುವಕ ಆತ್ಮಹತ್ಯೆ!

ಸರ್ಕಾರಿ ಸರ್ಕ್ಯೂಟ್‌ ಹೌಸ್‌ನಲ್ಲಿ 'ನೀಲಿ ಚಿತ್ರನಟಿ' ವಾಸ; ರೂರ್ಕೆಲಾದಲ್ಲಿ ಸಂಚಲನ, ಪೊಲೀಸ್ ತನಿಖೆ