ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ವಿನ್ನರ್ ಆದರೆ ಅರ್ಧ ಗಡ್ಡ ಮತ್ತು ಮೀಸೆ ತೆಗೆಯುತ್ತೇನೆಂದು ಚಾಲೆಂಜ್ ಮಾಡಿದ್ದ ವ್ಯಕ್ತಿಯೊಬ್ಬರು ನುಡಿದಂತೆ ನಡೆದುಕೊಂಡಿದ್ದಾರೆ.
ಅಬ್ದುಲ್ ರಜಾಕ್ ಎಂಬ ವ್ಯಕ್ತಿ ಈ ಸವಾಲು ಹಾಕಿದ್ದರು. ಗಿಲ್ಲಿ ಗೆಲುವು ದಾಖಲಿಸುತ್ತಿದ್ದಂತೆ, ಅರ್ಧ ಗಡ್ಡ ಮತ್ತು ಮೀಸೆಯನ್ನು ತೆಗೆದಿದ್ದಾರೆ. ಇದನ್ನು ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಒಂದುವೇಳೆ ಗಿಲ್ಲಿ ಬಿಗ್ ಬಾಸ್‌ನಲ್ಲಿ ವಿನ್ನರ್ ಆದ್ರೆ ಅರ್ಧ ಗಡ್ಡ ಮತ್ತು ಮೀಸೆಯನ್ನು ತೆಗೆಯುತ್ತೇನೆಂದು ಚಾಲೆಂಜ್ ಮಾಡಿದ್ದೆ. ಅವರು ಗೆದ್ದಿದ್ದಾರೆ. ಗಿಲ್ಲಿನ ಫ್ಯಾನ್ಸ್ ಗೆಲ್ಲಿಸಿದ್ದಾರೆ. ಅದಕ್ಕಾಗಿ ಗಡ್ಡ, ಮೀಸೆ ತೆಗೆಯುತ್ತಿದ್ದೇನೆ ಎಂದು ವೀಡಿಯೋದಲ್ಲಿ ವ್ಯಕ್ತಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 12ರ ವಿಜೇತರಾಗಿ ಗಿಲ್ಲಿ ನಟರಾಜ್ ಹೊರಹೊಮ್ಮಿದ್ದಾರೆ. ಅಬ್ದುಲ್ ರಜಾಕ್ ವಿಡಿಯೋ ವೈರಲ್ ಆಗಿದೆ. ಅವರು ಯಾವ ಊರಿನವರು ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.