ಬಿಗ್ ಬಾಸ್ ಸ್ಪರ್ಧಿ ಅಶ್ವಿನಿಗೌಡ 
ಸಿನಿಮಾ ಸುದ್ದಿ

'ಗಿಲ್ಲಿ 'ಬಡವ' ಅಂತ ಅನ್ನೋದಾದ್ರೆ, BiggBoss ವ್ಯಕ್ತಿತ್ವದ ಆಟ ಹೇಗಾಯ್ತು? ಅಶ್ವಿನಿ ಗೌಡ ಬೇಸರ

ಗಿಲ್ಲಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಇತ್ತ 2ನೇ ರನ್ನರ್ ಅಪ್ ಅಶ್ವಿನಿಗೌಡ ಸೋತ ಬೇಸರವನ್ನು ತಮ್ಮ ಮಾತುಗಳಿಂದ ಹೊರಹಾಕುತ್ತಿದ್ದಾರೆ.

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿನಟ ಕುರಿತು 2ನೇ ರನ್ನರ್ ಅಪ್ ಅಶ್ವಿನಿಗೌಡ ಶಾಕಿಂಗ್ ಹೇಳಿಕೆ ನೀಡಿದ್ದು, ಬಡವನ ಟ್ರಂಪ್ ಕಾರ್ಡ್ ಬಳಸಬಾರದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12ಗೆ ಅದ್ದೂರಿ ತೆರೆ ಬಿದ್ದಿದ್ದು, ನಿರೀಕ್ಷೆಯಂತೆಯೇ ಗಿಲ್ಲಿನಟ ವಿನ್ನರ್ ಆಗಿದ್ದಾರೆ. ಈ ನಡುವೆ ಗಿಲ್ಲಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಇತ್ತ 2ನೇ ರನ್ನರ್ ಅಪ್ ಅಶ್ವಿನಿಗೌಡ ಸೋತ ಬೇಸರವನ್ನು ತಮ್ಮ ಮಾತುಗಳಿಂದ ಹೊರಹಾಕುತ್ತಿದ್ದಾರೆ.

ಇಂದು ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳೊಂದಿಗೆ ಮಾತನಾಡಿದ ಅಶ್ವಿನಿಗೌಡ, 'ಗಿಲ್ಲಿ ನಿಜವಾದ ಬಡವನಾ? ನಿಜವಾದ ಬಡವ ಬೇರೆ, ಬಡವನ ರೀತಿ ಗೆಟಪ್‌ ಹಾಕ್ಕೊಂಡು ಬದುಕೋದು ಬೇರೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಬಡವರ ಮಕ್ಕಳು ಬೆಳೆಯಬೇಕು ಅನ್ನೋದು ನಮ್ಮ ಡಾಲಿ ಧನಂಜಯ್‌ ಅವರ ಡೈಲಾಗ್‌. ಆದ್ರೆ, ಗಿಲ್ಲಿ ನಿಜವಾದ ಬಡವನಾ? ಅದು ಬಹಳ ಮುಖ್ಯ ಆಗುತ್ತೆ. ನಿಜವಾದ ಬಡವ ಬೇರೆ, ಬಡವನ ಥರ ಗೆಟಪ್‌ ಹಾಕ್ಕೊಂಡು ಬದುಕೋದು ಬೇರೆ. ಬಹುಶಃ ಅವರ ಆಟ ಎಲ್ಲರಿಗೂ ಇಷ್ಟ ಆಗಿದೆ ಅಂತ ಹೇಳೋಕೆ ನಾನು ಇಷ್ಟ ಪಡ್ತೀನಿ. ಗಿಲ್ಲಿ ಬಡವ ಅಂತ ಹೇಳೋದು ತಪ್ಪಾಗುತ್ತೆ ಎಂದು ಅಶ್ವಿನಿಗೌಡ ಹೇಳಿದ್ದಾರೆ.

ಬಡವರನ್ನು ಹುಡುಕಿ ಕೊಡಿ

ಇದನ್ನ ಬೇರೆ ಬೇರೆ ರಾಜಕೀಯದ ಒಂದು ಆಯಾಮವನ್ನು ಕೊಡ್ತಾ ಹೋಗ್ತಾರೆ. ಮತ್ತೆ ಬಡವರು ಶ್ರೀಮಂತರು ಎನ್ನುವ ಒಂದು ಆಯಾಮವನ್ನು ಕೊಡ್ತಾ ಹೋಗ್ತಾರೆ. ಇಲ್ಲಿ ಯಾವುದು ಬರಲ್ಲ. ನಾನು ಹೇಳೋದು ಒಂದೇ.. ಹಂಗೆ ಏನಾದ್ರು ಬಿಗ್ ಬಾಸ್ ಆ ರೀತಿಯ ಟಾಸ್ಕ್ ಪ್ಲಾನ್ ಮಾಡ್ತಾರೆ ಅಂದ್ರೆ ನಿಜವಾಗ್ಲೂ ನೀವು ಬಡವರಲ್ಲಿ ಬಡವರನ್ನು ಹುಡುಕಿ, ಯಾರಿದ್ದಾರೆ ದಯವಿಟ್ಟು ಹುಡುಕಿ ಅಂತವರಿಗೆ ನೀವು ಕೊಡುವ 50 ಲಕ್ಷ ರೂ ದೊಡ್ಡದು ಎಂದಿದ್ದಾರೆ.

ಗಿಲ್ಲಿ ಬಗ್ಗೆ ಪರೋಕ್ಷ ಅಸಮಾಧಾನ

ಇದು ಕಾಮೆಡಿ ಶೋ ಅಲ್ಲ. ವ್ಯಕ್ತಿತ್ವದ ಆಟ. ಇನ್ನೊಬ್ಬರನ್ನು ಕೆಳಗಿಟ್ಟು ಇನ್ನೊಬ್ಬರ ವ್ಯಕ್ತಿತ್ವವನ್ನು ಕೆಳಗಿಟ್ಟು ಕಪ್ಪು ಒಬ್ಬರಿಗೆ ಕೊಡ್ತೀನಿ ಅಂದ್ರೆ.. ಒಂದು ಟಾಸ್ಕ್ ಆಡುವುದಿಲ್ಲ, ಒಂದು ಏನು ಮಾಡುವುದಿಲ್ಲ, ಮನೆಯಲ್ಲೂ ಒಂದು ವ್ಯಕ್ತಿತ್ವದ ಪ್ರದರ್ಶನ ಇರುವುದಿಲ್ಲ, ಅವರಿವರನ್ನು ಕೆಳಗಿಟ್ಟು ಮಾತಾಡೋದು ಅಷ್ಟೇ ಎಂದು ಅಶ್ವಿನಿಗೌಡ ಹೇಳಿದ್ದಾರೆ.

BiggBoss ವ್ಯಕ್ತಿತ್ವದ ಆಟ ಹೇಗಾಯ್ತು?

ಅಂತೆಯೇ ಬಡವನ ಗೆಟಪ್‌ನಲ್ಲಿ ಗಿಲ್ಲಿ ವಿನ್ನರ್‌ ಆದ್ರು. ಅಷ್ಟೇ ಬಿಟ್ರೆ, ಬಡವ ಅಂತ ಹೇಳಿದ್ರೆ ತಪ್ಪಾಗುತ್ತೆ. ಅದನ್ನ ನಾವು ಯಾವತ್ತೂ ಸ್ಟ್ರ್ಯಾಟಜಿ ಕಾರ್ಡ್‌ ಆಗಿ ಬಳಸಬಾರದು. ಗಿಲ್ಲಿ ಗೆದ್ದಿದ್ದಾರೆ. ಆದರೆ ಅವರ ವ್ಯಕ್ತಿತ್ವ ಮತ್ತು ಆಟದ ವಿಚಾರದಲ್ಲಿ ಖಂಡಿತ ನನಗೆ ಹೆಮ್ಮೆಯಿದೆ.

ಯಾಕಂದ್ರೆ ಅವರೂ ನನ್ನ ಜೊತೆ ಪ್ರಯಾಣ ಮಾಡಿದ ಪ್ರತಿಸ್ಪರ್ಧಿ. ನಾನು ಅವರನ್ನ ಯಾವತ್ತೂ ಬಿಟ್ಟುಕೊಡೇಕೆ ಇಷ್ಟ ಪಡಲ್ಲ. ಯುದ್ಧ ಮಾಡಬೇಕಾದ್ರೆ ಕತ್ತಿಯನ್ನು ಕೈಯಲ್ಲಿ ಹಿಡಿದುಕೊಂಡಿರ್ತೀವಿ. ಬಿಗ್‌ ಬಾಸ್‌ ಮುಗಿದ ಮೇಲೆ ಕತ್ತಿಯನ್ನು ಕೆಳಗಡೆ ಇಡ್ತೀವಿ. ಮತ್ತೆ ಅದನ್ನು ಕೈಗೆ ಎತ್ತಿಕೊಳ್ಳಲು ನನಗೆ ಇಷ್ಟ ಇಲ್ಲ ಎಂದು ಹೇಳಿದ್ದಾರೆ.

ಅಂತೆಯೇ ಗಿಲ್ಲಿ ಗೆದ್ದಿದ್ದಾರೆ. ಅವರ ಭವಿಷ್ಯ ಉಜ್ವಲ ಆಗ್ಲಿ, ಒಳ್ಳೆದಾಗ್ಲಿ. ನನ್ನನ್ನು ಅತ್ತೆ ಮಗಳು ಅಂತ ಕರೆದಿದ್ದಾರೆ. ನಾನು ಅವರನ್ನ ಮಾವನ ಮಗ ಅಂತ ಕರೆದಿದ್ದೀನಿ. ಖಂಡಿತ ಒಳ್ಳೆದಾಗಬೇಕು ಎಂದು ಅಶ್ವಿನಿಗೌಡ ಆಶಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವಿರೋಧ ಆಯ್ಕೆ

'ರಾಸಲೀಲೆ' ವಿಡಿಯೋ ವೈರಲ್​​ ಬೆನ್ನಲ್ಲೇ ಅಜ್ಞಾತ ಸ್ಥಳಕ್ಕೆ ತೆರಳಿದ ಡಿಜಿಪಿ ರಾಮಚಂದ್ರ ರಾವ್​​!

ನಮಗೆ ಕೊರತೆ ಇರುವುದು ಕೇವಲ 6 ಸ್ಥಾನಗಳಷ್ಟೆ; ಕಾದು ನೋಡಿ, ಏನು ಬೇಕಾದರೂ ಆಗಬಹುದು- BMC ಮೇಯರ್ ಆಯ್ಕೆ ಬಗ್ಗೆ ಸಂಜಯ್ ರಾವತ್

ನಮ್ಮ ಸರ್ಕಾರದಲ್ಲಿ ಬಾದಾಮಿ ಅಭಿವೃದ್ಧಿ ಮುಂದುವರಿಯಲಿದೆ: ಚಾಲುಕ್ಯ ಉತ್ಸವಕ್ಕೆ ಸಿಎಂ ಚಾಲನೆ

BMC ಪಟ್ಟಕ್ಕಾಗಿ ಫೈಟ್: ಶಿವಸೇನಾ ಮೇಯರ್‌ ಆದ್ರೆ ಬಾಳಾ ಠಾಕ್ರೆಗೆ ಗೌರವ - ಏಕನಾಥ್ ಶಿಂಧೆ

SCROLL FOR NEXT