ಕಿಚ್ಚ ಸುದೀಪ್ ಅವರ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ಮಾರ್ಕ್' ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರ ಇದೀಗ OTT ಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶಿಸಿದ ಮಾರ್ಕ್, ಮ್ಯಾಕ್ಸ್ ಯಶಸ್ಸಿನ ನಂತರ ನಟ ಮತ್ತು ನಿರ್ದೇಶಕರ ನಡುವಿನ ಎರಡನೇ ಯೋಜನೆಯಾಗಿದೆ.
ಜನವರಿ 23 ರಿಂದ ಮಾರ್ಕ್ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸುವುದಾಗಿ ಚಿತ್ರತಂಡ ದೃಢಪಡಿಸಿದ್ದಾರೆ. ನಿನ್ನೆ ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರಾಂಡ್ ಫಿನಾಲೆ ವೇದಿಕೆಯಲ್ಲಿಯೂ ಕಿಚ್ಚ ಸುದೀಪ್ ಈ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದರು. ಮಾರ್ಕ್ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿರುತ್ತದೆ.
ಚಿತ್ರಕ್ಕೆ ಆರಂಭದಲ್ಲಿ ಪೈರಸಿ ಕಾಟ ಆರಂಭವಾಯಿತು. ನಂತರ ನಕಾರಾತ್ಮಕ ಪ್ರಚಾರಗಳನ್ನು ಎದುರಿಸಿದ್ದರೂ, ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸರಾಸರಿ ಗಳಿಕೆ ಕಂಡಿತು. ಬಳಿಕ ಚಿತ್ರಕ್ಕೆ ವೀಕ್ಷಕರಿಂದ ಸಾಕಷ್ಟು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು.
ಮಾರ್ಕ್ ಚಿತ್ರದಲ್ಲಿ ಸುದೀಪ್ ಜೊತೆಗೆ ಯೋಗಿ ಬಾಬು, ಶೈನ್ ಟಾಮ್ ಚಾಕೊ, ನವೀನ್ ಚಂದ್ರ, ಅರ್ಚನಾ ಕೊಟ್ಟಿಗೆ ಮತ್ತು ರೋಶಿನಿ ಪ್ರಕಾಶ್ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕುತೂಹಲಕಾರಿಯಾಗಿ, ಜನವರಿ 23 ರಂದು OTT ಗೆ ಪದಾರ್ಪಣೆ ಮಾಡುತ್ತಿರುವ ಏಕೈಕ ಕನ್ನಡ ಚಿತ್ರ ಮಾರ್ಕ್ ಅಲ್ಲ. ಮಾರ್ಕ್ ಬಿಡುಗಡೆಯಾದ ದಿನವೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಫ್ಯಾಂಟಸಿ ಡ್ರಾಮಾ 45 ಕೂಡ ಅದೇ ದಿನಾಂಕದಂದು ಸ್ಟ್ರೀಮಿಂಗ್ ಪ್ರಾರಂಭಿಸಲಿದೆ. ಜನವರಿ 23 ರಿಂದ 45 ಸ್ಟ್ರೀಮಿಂಗ್ ಪ್ರಾರಂಭಿಸುವುದಾಗಿ ZEE5 ಘೋಷಿಸಿದೆ.