ಯಶ್ ಹಾಗೂ ತಾರಾ ಸುತಾರಿಯಾ 
ಸಿನಿಮಾ ಸುದ್ದಿ

Toxic Song: ಯಶ್-ತಾರಾ ಸುತಾರಿಯಾ ಕೆಮಿಸ್ಟ್ರಿ 'ಮನಮೋಹಕ..'; 'ಟಾಕ್ಸಿಕ್' ಚಿತ್ರದ ಸಾಂಗ್ ಬಿಡುಗಡೆ; Video

ಮೊದಲ ಹಾಡು ‘ತಬಾಹಿ’ಯಲ್ಲಿ ಯಶ್ ಹಾಗೂ ಕಿಯಾರಾ ಅಡ್ವಾಣಿ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡು ಬೋಲ್ಡ್ ನೆಸ್ ಮೂಲಕ ಗಮನ ಸೆಳೆದಿದ್ದರು.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಗೀತು ಮೋಹನ್​ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಎರಡನೇ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇಂದು ಬೆಳಗ್ಗೆ 11.33ಕ್ಕೆ ‘ಮನಮೋಹಕ..’ ಹಾಡು ಬಿಡುಗಡೆಯಾಗಿದ್ದು ತಬಾಹಿಯಂತೆ ಸೋಷಿಯಲ್ ಮೀಡಿಯಾದಲ್ಲಿ, ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದೆ.

ಪ್ರಣಯಿಗಳ ಮನಗೆದ್ದ ‘ಮನಮೋಹಕ’

ಮೊದಲ ಹಾಡು ‘ತಬಾಹಿ’ಯಲ್ಲಿ ಯಶ್ ಹಾಗೂ ಕಿಯಾರಾ ಅಡ್ವಾಣಿ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡು ಬೋಲ್ಡ್ ನೆಸ್ ಮೂಲಕ ಗಮನ ಸೆಳೆದಿದ್ದರು.

ಇಂದು ಬಿಡುಗಡೆಯಾಗಿರುವ ‘ಮನಮೋಹಕ’ ಹಾಡು ಪ್ರಣಯಗೀತೆಯಾಗಿದ್ದು, ಹಾಡಿನಲ್ಲಿ ಯಶ್ ಹಾಗೂ ತಾರಾ ಸುತಾರಿಯಾ ಜೋಡಿಯಾಗಿ ಕಾಣಿಸಿಕೊಂಡಿದ್ದು, ಇಬ್ಬರ ನಡುವಿನ ಸ್ಕ್ರೀನ್ ಕೆಮಿಸ್ಟ್ರಿ ಗಮನ ಸೆಳೆಯುತ್ತಿದೆ. ಹಾಡಿನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಕೂಡ ಕಾಣಿಸಿಕೊಳ್ಳುತ್ತಾರೆ.

‘ಟಾಕ್ಸಿಕ್’ ಚಿತ್ರದ ಮೊದಲ ಹಾಡು ‘ತಬಾಹಿ’ಗೆ ನಿರ್ದೇಶಕ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದರೆ, ಮನಮೋಹಕ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಈ ಹಾಡನ್ನು ಸಿದ್ದಾರ್ಥ್ ಬಸ್ರೂರ್ ಹಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CJP Protest LIVE Updates | ಪ್ರತಿಭಟನೆ ಮುಂದುವರಿಯಲಿದೆ; ಭರವಸೆ ಕಳೆದುಕೊಳ್ಳಬೇಡಿ: ಸಿಜೆಪಿಯ ಅಭಿಜೀತ್ ದೀಪ್ಕೆ ವಿನಂತಿ

ಖಾಸಗಿ ಆಸ್ಪತ್ರೆಗೆ ಸೋನಮ್ ವಾಂಗ್‌ಚುಕ್‌ ಸ್ಥಳಾಂತರಕ್ಕೆ ದೆಹಲಿ ಹೈಕೋರ್ಟ್ ಸೂಚನೆ; ಧನ್ಯವಾದ ಅರ್ಪಿಸಿದ ಪತ್ನಿ ಗೀತಾಂಜಲಿ!

ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ಬೀದಿಬದಿ ವ್ಯಾಪಾರಿಗಳಿಂದ GBA ಅಧಿಕಾರಿಗಳ ಮೇಲೆ ಹಲ್ಲೆ; ಪೆಪ್ಪರ್ ಸ್ಪ್ರೇ ಬಳಕೆ!

ಕಾಕ್ರೋಚ್ 'ಸಂಸತ್ ಚಲೋ': ಲಾಠಿ ಚಾರ್ಜ್ ವೇಳೆ ಗಾಯಗೊಂಡಿದ್ದ ಯುವತಿ ವೆಂಟಿಲೇಟರ್‌ನಲ್ಲಿ ಜೀವನ್ಮರಣ ಹೋರಾಟ!

ಶಿವಾಜಿನಗರ ಪುಟ್ ಬಾತ್ ಒತ್ತುವರಿ ತೆರವು: GBA ಅಧಿಕಾರಿಗಳ ಮೇಲೆ ಹಲ್ಲೆ, ಬಿಜೆಪಿ ತೀವ್ರ ಖಂಡನೆ! Video