ಧ್ರುವಂತ್ 
ಸಿನಿಮಾ ಸುದ್ದಿ

ನನ್ನನ್ನು ನೆಮ್ಮದಿಯಾಗಿರಲು ಬಿಡಿ: ಅಶ್ಲೀಲ ಟ್ರೋಲಿಗರ ವಿರುದ್ಧ ದೂರು ದಾಖಲಿಸಿದ ನಟ ಧ್ರುವಂತ್

ಕಿರುತೆರೆ ನಟ, Biggboss Kannada ಸೀಸನ್-12ರ ಮಾಜಿ ಸ್ಪರ್ಧಿ ಧ್ರುವಂತ್ ಅಲಿಯಾಸ್ ಚರಿತ್ ಬಾಳಪ್ಪಗೆ ಟ್ರೋಲಿಗರ ಕಾಟ ಶುರುವಾಗಿದೆ. ಧ್ರುವಂತ್ ನೀಡಿದ ಒಂದು ಸಂದರ್ಶನದ ತುಣುಕುಗಳನ್ನು ಇಟ್ಟುಕೊಂಡು ಟ್ರೋಲಿಗರು ಅಶ್ಲೀಲವಾಗಿ ಕಮೆಂಟ್ ಮಾಡುತ್ತಿದ್ದಾರೆ...

ಬೆಂಗಳೂರು: ಕಿರುತೆರೆ ನಟ, Biggboss Kannada ಸೀಸನ್-12ರ ಮಾಜಿ ಸ್ಪರ್ಧಿ ಧ್ರುವಂತ್ ಅಲಿಯಾಸ್ ಚರಿತ್ ಬಾಳಪ್ಪಗೆ ಟ್ರೋಲಿಗರ ಕಾಟ ಶುರುವಾಗಿದೆ. ಧ್ರುವಂತ್ ನೀಡಿದ ಒಂದು ಸಂದರ್ಶನದ ತುಣುಕುಗಳನ್ನು ಇಟ್ಟುಕೊಂಡು ಟ್ರೋಲಿಗರು ಅಶ್ಲೀಲವಾಗಿ ಕಮೆಂಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಧ್ರುವಂತ್ ಕೆಲವು ಟ್ರೋಲ್ ಪೇಜ್​ಗಳ ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಠಾಣೆ ಹಾಗೂ ಬಸವೇಶ್ವರ ನಗರ ಸೈಬರ್ ಸೆಲ್ ನಲ್ಲಿ ದೂರು ದಾಖಲಿಸಿದ್ದಾರೆ.

ನಾನು ಕಿರುತೆರೆ ನಟನಾಗಿದ್ದು ಬಿಗ್ ಬಾಸ್ ನಿಂದಾಗಿ ಸಮಾಜದಲ್ಲಿ ಗೌರವ ಮತ್ತು ವಿಶ್ವಾಸವನ್ನು ಸಂಪಾದಿಸಿದ್ದೇನೆ. ಆದರೆ ಇನ್​ಸ್ಟಾಗ್ರಾಮ್ ಮತ್ತು ಫೇಸ್​ಬುಕ್ ಮೂಲಕ ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ನಿರಂತರವಾಗಿ ಅಶ್ಲೀಲ, ಮಾನಹಾನಿಕಾರಕ ರೀತಿಯ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ ಎಂದು ಧ್ರುವಂತ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ನನಗೆ ಮಾನಸಿಕವಾಗಿ ಕುಂದುಹೋಗುತ್ತಿದ್ದೇನೆ. ನನಗೆ ಅವಕಾಶಗಳು ಸಿಗದಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇದರಿಂದ ನನಗೆ ತೀವ್ರ ಮಾನಸಿಕಯಾತನೆ ಉಂಟಾಗುತ್ತಿದೆ. ಆದ್ದರಿಂದ ಟ್ರೋಲಿಗರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ನನ್ನ ತಂಟೆಗೆ ಬಾರದಂತೆ ಮಾಡಿ ಎಂದು ಧ್ರುವಂತ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟಿ.ನರಸೀಪುರ ಪೊಲೀಸ್ ಠಾಣೆ ಮುಂದೆ ಭಾರೀ ಹೈಡ್ರಾಮಾ: ಆರ್ ಅಶೋಕ್, ಯದುವೀರ್, ಪ್ರತಾಪ್ ಸಿಂಹ ಸೇರಿ ಬಿಜೆಪಿ ನಾಯಕರು ಪೊಲೀಸರ ವಶಕ್ಕೆ

ಸತೀಶ್ ಜಾರಕಿಹೊಳಿಗೆ ಸಿದ್ದರಾಮಯ್ಯನವ್ರ 'ಶಾಪ' ತಟ್ಟಿದೆ!: ಯತ್ನಾಳ್ ಹೊಸ 'ಬಾಂಬ್'

ದಲಿತರು, ಅಲ್ಪಸಂಖ್ಯಾತರೇ ಬಿಜೆಪಿಗೆ ಸೇರಬೇಡಿ: ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿ.ಕೆ ಹರಿಪ್ರಸಾದ್ ಕರೆ

252 ಮದರಸಾಗಳನ್ನು ಮುಚ್ಚಲು ಪಶ್ಚಿಮ ಬಂಗಾಳ ಸರ್ಕಾರ ಆದೇಶ; 100 ಮದರಸಾಗಳಿಗೆ ಶೋ-ಕಾಸ್ ನೋಟಿಸ್!

ಇಡೀ ಸರಣಿಯಲ್ಲಿ ಒಂದೂ ಶತಕವಿಲ್ಲ; 138 ವರ್ಷಗಳ ಬಳಿಕ ಅಪರೂಪದ ರೆಕಾರ್ಡ್, ಇಂಗ್ಲೆಂಡ್‌-ಪಾಕಿಸ್ತಾನ ಹೀನಾಯ ದಾಖಲೆ!