ಜನ ನಾಯಗನ್ Online Desk
ಸಿನಿಮಾ ಸುದ್ದಿ

ಚೆನ್ನೈನ ಹಲವೆಡೆ Jana Nayagan ಪ್ರದರ್ಶನ ರದ್ದು; ಥಿಯೇಟರ್‌ಗಳಿಂದ ಮಕ್ಕಳನ್ನು ಹೊರಕಳುಹಿಸಿದ ಪೊಲೀಸರು

ಸತತ 7 ತಿಂಗಳು ಸುದೀರ್ಘ ವಿಳಂಬದ ತರುವಾಯ ಬಿಡುಗಡೆಯಾದ ದಳಪತಿ ಜೋಸೆಫ್ ವಿಜಯ್ ನಟನೆಯ ಜನ ನಾಯಗನ್ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತಿದೆ. ಇದರ ನಡುವೆಯೇ, ವಿಜಯ್ ಅವರ ಕೊನೆಯ ಚಿತ್ರ ಎನ್ನಲಾದ ಈ ಸಿನಿಮಾವನ್ನ ಚಿತ್ರಮಂದಿರದಲ್ಲಿ ನೋಡಲು ಎಲ್ಲ ಅಭಿಮಾನಿಗಳಿಗೂ ಅವಕಾಶ ಸಿಗುತ್ತಿಲ್ಲ!

ಚೆನ್ನೈ (ತಮಿಳುನಾಡು): ಸತತ 7 ತಿಂಗಳು ಸುದೀರ್ಘ ವಿಳಂಬದ ತರುವಾಯ ಬಿಡುಗಡೆಯಾದ ತಮಿಳುನಾಡು ಮುಖ್ಯಮಂತ್ರಿ ಹಾಗೂ ಕೋಲಿವುಡ್‌ನ ಸೂಪರ್ ಸ್ಟಾರ್ ದಳಪತಿ ಜೋಸೆಫ್ ವಿಜಯ್ ನಟನೆಯ ಜನ ನಾಯಗನ್ ಚಿತ್ರ ಭರ್ಜರಿಯಾಗಿ 233 ಕೋಟಿ ಗಳಿಕೆಯೊಂದಿಗೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತಿದೆ. ಇದರ ನಡುವೆಯೇ, ವಿಜಯ್ ಅವರ ಕೊನೆಯ ಚಿತ್ರ ಎನ್ನಲಾದ ಈ ಸಿನಿಮಾವನ್ನ ಚಿತ್ರಮಂದಿರದಲ್ಲಿ ನೋಡಲು ಎಲ್ಲ ಅಭಿಮಾನಿಗಳಿಗೂ ಅವಕಾಶ ಸಿಗುತ್ತಿಲ್ಲ! ಅದಕ್ಕೆ ಪ್ರಮುಖ ಕಾರಣ ಸಿನಿಮಾಗೆ ಸಿಕ್ಕಿರುವ A ಸರ್ಟಿಫಿಕೇಟ್!

ಹೌದು, ನಟ ವಿಜಯ್ ಅವರ ಜನ ನಾಯಗನ್ ಪ್ರದರ್ಶನವನ್ನು ಚೆನ್ನೈನ ಹಲವು ಚಿತ್ರಮಂದಿರಗಳಲ್ಲಿ ಮಧ್ಯದಲ್ಲೇ ಸ್ಥಗಿತಗೊಳಿಸಿದ ಘಟನೆಗಳು ವರದಿಯಾಗಿವೆ. ಅದಕ್ಕೆ ಪ್ರಮುಖ ಕಾರಣ, ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಎ’ (A - Adults Only) ಪ್ರಮಾಣಪತ್ರ ನೀಡಿದ್ದರೂ ಸಹ, ಪೋಷಕರು ತಮ್ಮ ಅಪ್ರಾಪ್ತ ಮಕ್ಕಳನ್ನು ಸಿನಿಮಾ ವೀಕ್ಷಣೆಗೆ ಕರೆತಂದಿದ್ದೇ ಎನ್ನಲಾಗಿದೆ.

ಮುಂದುವರೆದು, ಚೆನ್ನೈನ ಪಿವಿಆರ್ ಅಂಪಾ ಮಾಲ್ ಸೇರಿದಂತೆ ಪ್ರಮುಖ ಮಲ್ಟಿಪ್ಲೆಕ್ಸ್ ಪ್ರದರ್ಶನಗಳ ವೇಳೆ, ಚಿತ್ರಮಂದಿರದ ಒಳಗೆ ಮಕ್ಕಳು ಇರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ. ಆದರೆ, ಕಾನೂನು ಪ್ರಕಾರ 18 ವರ್ಷದೊಳಗಿನವರಿಗೆ ‘ಎ’ ಸರ್ಟಿಫಿಕೇಟ್ ಸಿನಿಮಾ ತೋರಿಸುವಂತಿಲ್ಲದ ಕಾರಣ, ಪೊಲೀಸರ ಮಧ್ಯಪ್ರವೇಶದಿಂದಾಗಿ ಚಲನಚಿತ್ರ ಪ್ರದರ್ಶನವನ್ನು ಸುಮಾರು ಒಂದು ಗಂಟೆಗಳ ಕಾಲ ಸ್ಥಗಿತಗೊಳಿಸಲಾಯಿತು.

ಏತನ್ಮಧ್ಯೆ, ಥಿಯೇಟರ್ ಸಿಬ್ಬಂದಿ ಹಾಗೂ ಪೊಲೀಸರು ಮಕ್ಕಳನ್ನು ಹೊರಗೆ ಕಳುಹಿಸಲು ಮುಂದಾದಾಗ ಪೋಷಕರು ಮತ್ತು ಥಿಯೇಟರ್ ಮ್ಯಾನೇಜ್‌ಮೆಂಟ್ ನಡುವೆ ತೀವ್ರ ವಾಗ್ವಾದ ನಡೆಯಿತು. ಅಂತಿಮವಾಗಿ ಮಕ್ಕದೊಂದಿಗೆ ಬಂದಿದ್ದ ಪೋಷಕರಿಗೆ ಟಿಕೆಟ್ ಹಣವನ್ನು ರಿಫಂಡ್ ಮಾಡಿ ಥಿಯೇಟರ್‌ನಿಂದ ಹೊರಗೆ ಕಳುಹಿಸಿದ ಬಳಿಕವೇ ಪ್ರದರ್ಶನವನ್ನು ಪುನರಾರಂಭಿಸಲಾಯಿತು ಎನ್ನಲಾಗಿದೆ.

ಅದರಲ್ಲೂ, ಇದು ನಟ ವಿಜಯ್ ಅವರ ಕೊನೆಯ ಸಿನಿಮಾ ಆಗಿರುವುದರಿಂದ ಕುಟುಂಬ ಸಮೇತರಾಗಿ ನೋಡಬೇಕು ಎಂದು ಪೋಷಕರು ಮಕ್ಕಳನ್ನು ಕರೆತರುತ್ತಿದ್ದಾರೆ. ಆದರೆ ಚಿತ್ರದಲ್ಲಿ ಅತಿಯಾದ ಹಿಂಸಾಚಾರ ಮತ್ತು ಪ್ರೌಢ ಕಂಟೆಂಟ್ ಇರುವುದರಿಂದ ಸೆನ್ಸಾರ್ ಮಂಡಳಿ ಕಟ್ಟುನಿಟ್ಟಾಗಿ 'ಎ' ಸರ್ಟಿಫಿಕೇಟ್ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಹ್ಲಾದ್ ಜೋಶಿ ಕೊಳಕು ಮನುಷ್ಯ; ಅತ್ಯಾಚಾರಿಯನ್ನು ರಕ್ಷಿಸುವವರು ನೂತನ ಶಿಕ್ಷಣ ಸಚಿವರಾಗಿದ್ದಾರೆ: ರಾಹುಲ್ ಗಂಭೀರ ಆರೋಪ, Video

ದೆಹಲಿಗೆ ಬಂದು ನಾಟಕವಾಡುವ ನಿಮಗೆ KPSC ಹಗರಣ ಅನ್ಯಾಯ ಅನಿಸಲಿಲ್ಲವೇ?: ಲೋಕಸಭೆಯಲ್ಲಿ ಸಿಎಂ ಶಿವಕುಮಾರ್ ವಿರುದ್ಧ ತೇಜಸ್ವಿ ವಾಗ್ದಾಳಿ!

ಪಾಕ್ ತನ್ನ ಅತಿಕ್ರಮಣವನ್ನು ಮುಚ್ಚಿಹಾಕಲು PoKನಲ್ಲಿ ಚುನಾವಣೆ ನಡೆಸುವ ಪ್ರಯತ್ನ: ಭಾರತ ತೀವ್ರ ಖಂಡನೆ

ಶಾಸಕರ ಭವನದ 7ನೇ ಮಹಡಿಯಿಂದ ಬಿದ್ದು ಮಾಜಿ ಸಚಿವ ನಾನಕ್ ರಾಮ್ ಭುರ್ಜಿ ಸಾವು; ಕೊಲೆಯೋ, ಆತ್ಮಹತ್ಯೆಯೋ?

ಬಿಡದಿ ಟೌನ್ ಶಿಪ್ ಯೋಜನೆ ಬೇಡ ಎನ್ನುವವರು ಕೋರ್ಟ್ ಗೆ ಹೋಗಲಿ, ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ- ಹೆಚ್. ಸಿ. ಬಾಲಕೃಷ್ಣ!