ಚಿಕ್ಕಣ್ಣ ಮತ್ತು ಪಾವನಾ 
ಸಿನಿಮಾ ಸುದ್ದಿ

ನಟ ಚಿಕ್ಕಣ್ಣ ಮದುವೆಗೆ ಮೂಹೂರ್ತ ಫಿಕ್ಸ್: ಮೈಸೂರಿನಲ್ಲಿ ಪಾವನ ಜೊತೆ ಅದ್ಧೂರಿ ವಿವಾಹ!

ಪಾವನಾ ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದವರು. 2025ರಲ್ಲಿ ಚಿಕ್ಕಣ್ಣ ಮತ್ತು ಪಾವನಾ ಅವರ ನಿಶ್ಚಿತಾರ್ಥವನ್ನು ಸರಳವಾಗಿ ನೆರವೇರಿತ್ತು.

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಅವರ ಅಭಿಮಾನಿಗಳಿಗೆ ಕೊನೆಗೂ ಗುಡ್‌ನ್ಯೂಸ್ ಸಿಕ್ಕಿದೆ.

ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಚಿಕ್ಕಣ್ಣ ಅವರ ವಿವಾಹ ದಿನಾಂಕ ಇದೀಗ ಅಂತಿಮವಾಗಿದೆ. ಆಗಸ್ಟ್‌ 29 ಮತ್ತು 30ರಂದು ಮೈಸೂರಿನಲ್ಲಿ ಅದ್ಧೂರಿ ವಿವಾಹ ಸಂಭ್ರಮ ನಡೆಯಲಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಹಾಸ್ಯ ಶೈಲಿ, ವಿಭಿನ್ನ ಬಾಡಿ ಲಾಂಗ್ವೇಜ್‌ ಮತ್ತು ಪಂಚಿಂಗ್ ಡೈಲಾಗ್‌ಗಳ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ಚಿಕ್ಕಣ್ಣ, ಇದೀಗ ವೈಯಕ್ತಿಕ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಮಂಡ್ಯ ಮೂಲದ ಪಾವನಾ ಜೊತೆ ಚಿಕ್ಕಣ್ಣ ಅವರು ಹಸೆಮಣೆ ಏರಲಿದ್ದಾರೆ. ಕಳೆದ ವರ್ಷ ಚಿಕ್ಕಣ್ಣ ಮತ್ತು ಪಾವನಾ ಅವರ ನಿಶ್ಚಿತಾರ್ಥ ನಡೆದಿತ್ತು. ಈಗ ಮದುವೆಗೆ ದಿನಾಂಕ ನಿಗದಿ ಆಗಿದೆ. ಚಿಕ್ಕಣ್ಣ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ. ಚಿತ್ರರಂಗದ ಸ್ನೇಹಿತರೆಲ್ಲರೂ ಮದುವೆಗೆ ಆಗಮಿಸಲಿದ್ದಾರೆ.

ಪಾವನಾ ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದವರು. 2025ರಲ್ಲಿ ಚಿಕ್ಕಣ್ಣ ಮತ್ತು ಪಾವನಾ ಅವರ ನಿಶ್ಚಿತಾರ್ಥವನ್ನು ಸರಳವಾಗಿ ನೆರವೇರಿಸಲಾಗಿತ್ತು. ಇಂಜಿನಿಯರಿಂಗ್ ಪದವಿ ಪಡೆದಿರುವ ಪಾವನಾ ಅವರೊಂದಿಗೆ ಚಿಕ್ಕಣ್ಣ ಹೊಸ ಜೀವನ ಆರಂಭಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೋಟ್ ಚೋರಿ’ ಸಂವಿಧಾನದ ಮೇಲಿನ ನೇರ ದಾಳಿ; BJP, RSS, ECಯಿಂದ ದೇಶದ್ರೋಹ, ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

ಚುನಾವಣಾ ಆಯೋಗದಲ್ಲಿ ಆಂತರಿಕ ಬಿಕ್ಕಟ್ಟು? ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು! ಸುಪ್ರೀಂ ಮಧ್ಯಪ್ರವೇಶಕ್ಕೆ ವಿಪಕ್ಷಗಳ ಆಗ್ರಹ

EC ಬಿಕ್ಕಟ್ಟು: ಜ್ಞಾನೇಶ್ ಕುಮಾರ್ ವಿರುದ್ಧ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬೇಕು; ವಿಫಲವಾದರೆ ಸೇನೆ ಮಧ್ಯಪ್ರವೇಶಿಸಲಿ-Sanjay Raut

ಮೀರಾಬಾಯಿ ಚಾನುಗೆ ಬೆಳ್ಳಿ: 98ರ ಬಳಿಕ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಮೊದಲ ಪದಕ!

Asian Games 2026: ಭಾರತಕ್ಕೆ ಶೂಟಿಂಗ್‌ನಿಂದ ಮತ್ತೊಂದು ಪದಕ; ಪುರುಷರ ಸ್ಕೀಟ್ ತಂಡಕ್ಕೆ ಕಂಚು