ಗೀತಾ ಭಟ್ ಹಾಗೂ ಮಿಲನಾ ನಾಗರಾಜ್ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

Love mocktail ನಿಂದ ಸಿಕ್ಕಿದ್ದು ಫೇಮ್ ಅಲ್ಲ, ಶೇಮ್: ಗೀತಾ ಭಟ್ ಅಸಮಾಧಾನ; ಮಿಲನಾ ನಾಗರಾಜ್ ತಿರುಗೇಟು

'ಬ್ರಹ್ಮಗಂಟು'' ಧಾರಾವಾಹಿಯ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದ ನಟಿ ಗೀತಾ ಭಟ್ ಅವರು, ಲವ್ ಮಾಕ್ಟೇಲ್‌ ಸಿನಿಮಾದ ಡೈಲಾಗ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಲವ್ ಮಾಕ್ಟೇಲ್' ಚಿತ್ರದಲ್ಲಿ ಬಾಡಿಶೇಮಿಂಗ್ ಡೈಲಾಗ್ ಕುರಿತು ನಟಿ ಗೀತಾ ಭಾರತಿ ಭಟ್ ಅವರು ಅಸಮಾಧಾನ ಹೊರಹಾಕಿದ್ದಾರೆ.

'ಬ್ರಹ್ಮಗಂಟು'' ಧಾರಾವಾಹಿಯ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದ ನಟಿ ಗೀತಾ ಭಟ್ ಅವರು, ಲವ್ ಮಾಕ್ಟೇಲ್‌ ಸಿನಿಮಾದ ಡೈಲಾಗ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಸಿನಿಮಾದಲ್ಲಿ ಹೂಥರ ಇದ್ದವಳು, ಹೂಕೋಸು ಥರ ಆಗೋದಳು ಎಂಬ ಡೈಲಾಗ್‌ ಇತ್ತು. ನನಗೆ ಬಾಡಿ ಶೇಮಿಂಗ್‌ ಆಗಿದೆ, ಯಾಕಾದರೂ ನಾನು ಈ ಸಿನಿಮಾ ಒಪ್ಪಿಕೊಂಡೆನೋ ಏನೋ ಎಂದು ಹೇಳಿದ್ದಾರೆ.

ಆ ಪಾತ್ರ ನಾನು ತೆಗೆದುಕೊಂಡಿದ್ದು ತಪ್ಪು. ಹಾಸ್ಯ ಅಥವಾ ಪದಗಳ ಆಟದ ಹೆಸರಿನಲ್ಲಿ ಬಾಡಿ ಶೇಮಿಂಗ್ ಮಾಡುವಂತಹ ಪಾತ್ರಗಳನ್ನು ನಾನು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಅದು ಕೇವಲ ಒಂದು ಕ್ಯಾರೆಕ್ಟರ್ ಎಂದು ಹೇಳುವಂಥವರಿಗೆ ಇಂತಹ ಪಾತ್ರಗಳ ಮೂಲಕ ನಾವು ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದೇವೆ ಎಂದು ಪ್ರಶ್ನೆ ಮಾಡಿದ್ದಾರೆ.

ಮಿಲನಾ ನಾಗರಾಜ್ ತಿರುಗೇಟು

ಇನ್ನು ಗೀತಾ ಭಟ್ ಅವರ ಈ ಹೇಳಿಕೆಗೆ ಕಿಡಿಕಾರಿರುವ ನಿರ್ಮಾಪಕಿ ಮಿಲನಾ ನಾಗರಾಜ್ ಹಾಗೂ ನಿರ್ದೇಶಕ ಕೃಷ್ಣ, ಅಷ್ಟಿದ್ರೆ ಆ ರೀತಿಯ ಪಾತ್ರವನ್ನೇ ಮಾಡಬಾರದು ಎಂದು ಹೇಳಿದ್ದಾರೆ.

‘ಅದು ಬಾಡಿ ಶೇಮಿಂಗ್ ಮಾಡಿದ್ದಲ್ಲ. ರೈಮಿಂಗ್ ಆಗಿ ಬರೆದಿದ್ದು ಅಷ್ಟೇ’. ‘ಅವರಿಗೆ ಸಿನಿಮಾ ಪಾತ್ರ ಗೊತ್ತಿತ್ತು. ಈಗ ಮಾತನಾಡುವ ಅವಶ್ಯಕತೆ ಇಲ್ಲ. ಅವರು ಸಂಪೂರ್ಣ ದೃಶ್ಯವನ್ನೇ ಮಾಡಿ ಹೋಗಿದ್ದಾರೆ. ಕಲಾವಿದರಿಗೆ ಹೇಳದೆ ನಾವು ದೃಶ್ಯ ಮಾಡೋಕಾಗಲ್ಲ. ಅವರಿಗೆ ಆ ಬಳಿಕ ಹಾಗೆ ಅನಿಸಿರಬಹುದು. ಅಷ್ಟಿದ್ರೆ ಅವರು ಆ ರೀತಿಯ ಪಾತ್ರಗಳನ್ನು ಮಾಡಬಾರದು. ಯಾವುದನ್ನು ಮುಚ್ಚಿಟ್ಟು ಮಾಡಲ್ಲ. ಆಡಿಷನ್ ಮಾಡಿ ಕಾಸ್ಟ್ ಮಾಡಿರೋದು. ಅಷ್ಟಿದ್ರೆ ಸಿನಿಮಾನೇ ಒಪ್ಪಿಕೊಳ್ಳಬಾರದಿತ್ತು ಎಂದು ಹೇಳಿದ್ದಾರೆ.

ಇದೇ ವೇಳೆ, ಗೀತಾ ಭಾರತಿ ಭಟ್ ಅವರು ಧಾರಾವಾಹಿಗಳಲ್ಲಿಯೂ ಇಂತಹ ಕಥಾವಸ್ತು ಹೊಂದಿರುವ ಪಾತ್ರಗಳಲ್ಲಿ ಅಭಿನಯಿಸಿದ್ದನ್ನು ಉಲ್ಲೇಖಿಸಿರುವ ಅವರು ‘ಗೀತಾ ಅವರು ಧಾರಾವಾಹಿ ಮಾಡುತ್ತಾ ಇದ್ದರು. ಅದರಲ್ಲೂ ಅದೇ ಕಥೆ ಇತ್ತು. ಮೂರು ವರ್ಷ ಆ ರೀತಿಯ ಧಾರಾವಾಹಿ ಮಾಡಿ, ನಮ್ಮ ಒಂದು ದೃಶ್ಯಕ್ಕೆ ತಕರಾರು ತೆಗೆದರೆ ಹೇಗೆ? ಮೇಕಿಂಗ್ ವಿಡಿಯೋ ಯೂಟ್ಯೂಬ್​​ನಲ್ಲೇ ಇದೆ. ಯಾರಿಗೂ ಹರ್ಟ್ ಮಾಡಬೇಕು ಎಂದು ಮಾಡಿದ್ದಲ್ಲ. ಅನೇಕರಿಗೆ ಕನೆಕ್ಟ್ ಆಗಿರೋ ವಿಷಯ ಅದು’ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ ಆ ಪಾತ್ರಕ್ಕೆ ಆಡಿಷನ್ ಮೂಲಕ ಆಯ್ಕೆ ಮಾಡಲಾಗಿತ್ತು ಎಂಬ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಗೀತಾ ಅವರು, ನಾನು ಮೊದಲು ಬಾಡಿ ಶೇಮಿಂಗ್‌ ಇರುವ ಸೀರಿಯಲ್‌ನಲ್ಲಿ ನಟಿಸಿದ್ದೆ ಎಂದು ಹೇಳುತ್ತಿರುವವರಿಗೆ ಒಂದು ಸ್ಪಷ್ಟನೆ ಕೊಡಬೇಕಿದೆ. ಆ ಸೀರಿಯಲ್ಲಿನ ಕಥೆ ಒಬ್ಬ ದಪ್ಪ ಹುಡುಗಿ ಸಮಾಜದಲ್ಲಿ ಎದುರಿಸುವ ನಿಜವಾದ ಸಮಸ್ಯೆಗಳ ಬಗ್ಗೆ ಇತ್ತು. ಆ ನೋವನ್ನು ತೋರಿಸುವುದು ಬಾಡಿ ಶೇಮಿಂಗ್‌ ಅನ್ನು ಹಾಸ್ಯದ ಹೆಸರಿನಲ್ಲಿ ಬೆಂಬಲಿಸುವುದು ಒಂದೇ ಅಲ್ಲ. ಆ ಒಂದು ಡೈಲಾಗ್ ಫೇಮಸ್‌ ಆಯಿತು ಎಂದರೆ, ಅದು ಕೇವಲ ಕಾಮಿಡಿ ಆಗಿದ್ದರಿಂದ ಮಾತ್ರ ಅಲ್ಲ, ಜನರು ಅದನ್ನು ಇನ್ನೊಬ್ಬರನ್ನು ಹಾಸ್ಯ ಮಾಡಲು ಬಳಸಿದ ಕಾರಣವೂ ಹೌದು.

ಅದು ಫೇಮ್ ಅಲ್ಲ... ಅದು ಶೇಮ್! ಇನ್ನೊಂದು ವಿಷಯ-ನಾನು ಆ ಅವಕಾಶಕ್ಕಾಗಿ ಹುಡುಕಿಕೊಂಡು ಹೋಗಲಿಲ್ಲ. ಆ ಪಾತ್ರಕ್ಕಾಗಿ ಆಡಿಷನ್ ಕೂಡ ಕೊಡಲಿಲ್ಲ. ನಂತರ ಸೀನ್ ನಲ್ಲಿ ಸೇರಿಸಿದ ಬ್ಯಾಕ್ ಶಾಟ್ ಅಥವಾ ಸೌಂಡ್ ಎಫೆಕ್ಟ್ ಬಗ್ಗೆ ಕೂಡ ನನಗೆ ತಿಳಿದಿರಲಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ