ಕೆಡಿ ಚಿತ್ರದ ನೋರಾ ಫತೇಹಿ ಹಾಡು 
ಸಿನಿಮಾ ಸುದ್ದಿ

KD ಚಿತ್ರಕ್ಕೆ ಆರಂಭದಲ್ಲೇ ವಿಘ್ನ; ಹಾಡಿಗೆ ನಿರ್ಬಂಧ, ಚಲನಚಿತ್ರ ವಾಣಿಜ್ಯ ಮಂಡಳಿಗೆ ಮಹಿಳಾ ಆಯೋಗ ಪತ್ರ.. ಇಷ್ಟಕ್ಕೂ ಆಗಿದ್ದೇನು?

‘ಕೆಡಿ’ ಸಿನಿಮಾದ ವಿವಾದಾತ್ಮಕ ಹಾಡಿನ ಹಿಂದಿ ವರ್ಷನ್ ಅನ್ನು ಡಿಲೀಟ್ ಮಾಡಲಾಗಿದ್ದು, ಅಶ್ಲೀಲ ಸಾಹಿತ್ಯದ ಕಾರಣಕ್ಕೆ ದೇಶಾದ್ಯಂತ ಈ ಹಾಡಿಗೆ ಜನರಿಂದ ಭಾರಿ ಟೀಕೆ ವ್ಯಕ್ತವಾಗಿದೆ.

ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ಮತ್ತು ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ 'ಕೆಡಿ ದಿ ಡೆವಿಲ್' ಚಿತ್ರಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಚಿತ್ರದ 'ಸರ್ಸೆ ನಿನ್ನ ಸೆರಗ' ಹಾಡಿನ ಹಿಂದಿ ಆವೃತ್ತಿಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಾಡನ್ನು ಯೂಟ್ಯೂಬ್ ಸೇರಿದಂತೆ ಎಲ್ಲ ಪ್ಲಾಟ್ ಫಾರ್ಮ್ ಗಳಿಂದ ಡಿಲೀಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಹೌದು.. ‘ಕೆಡಿ’ ಸಿನಿಮಾದ ವಿವಾದಾತ್ಮಕ ಹಾಡಿನ ಹಿಂದಿ ವರ್ಷನ್ ಅನ್ನು ಡಿಲೀಟ್ ಮಾಡಲಾಗಿದ್ದು, ಅಶ್ಲೀಲ ಸಾಹಿತ್ಯದ ಕಾರಣಕ್ಕೆ ದೇಶಾದ್ಯಂತ ಈ ಹಾಡಿಗೆ ಜನರಿಂದ ಭಾರಿ ಟೀಕೆ ವ್ಯಕ್ತವಾಗಿದೆ.

ಬಾಲಿವುಡ್ ನಟಿ ನೋರಾ ಫತೇಹಿ (Nora Fatehi) ಮತ್ತು ನಟ ಸಂಜಯ್ ದತ್ ಕಾಣಿಸಿಕೊಂಡಿರುವ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಭಾರಿ ವಿವಾದಕ್ಕೆ ಗುರಿಯಾಗಿದೆ. ಹಾಡಿನ ಸಾಹಿತ್ಯ ಮತ್ತು ದೃಶ್ಯಗಳು ಮಹಿಳೆಯರಿಗೆ ಅವಮಾನಕಾರಿಯಾಗಿವೆ ಎಂಬ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಹಿಂದಿ ವರ್ಷನ್ (Sarke Chunar Teri) ಹಾಡನ್ನು ಅಧಿಕೃತ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಲಾಗಿದೆ.

ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ, ಮಂಗ್ಲಿ ಹಾಡಿರುವ ಈ ಹಾಡಿನ ಸಾಲುಗಳು ಭಾರಿ ಟೀಕೆಗೆ ಒಳಗಾಗಿವೆ. ಸಾಹಿತ್ಯದಲ್ಲಿ ಬಳಸಲಾದ ಪದಗಳು ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುತ್ತವೆ ಎಂದು ಅನೇಕರು ದೂರಿದ್ದಾರೆ. ಈ ಎಲ್ಲ ವಿವಾದದ ಬಗ್ಗೆ ‘ಕೆಡಿ’ ಚಿತ್ರತಂಡ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ವಿವಾದವೇನು?

ಸಾಹಿತ್ಯ ಮಾತ್ರವಲ್ಲದೇ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ ನೃತ್ಯ ಸಂಯೋಜನೆಯ ಬಗ್ಗೆಯೂ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೋರಾ ಫತೇಹಿ ಅವರು ಪದೇ ಪದೇ ಸೀರೆಯ ಸೆರಗನ್ನು ಕೆಳಗೆ ಹಾಕಿ ಮತ್ತೆ ಎತ್ತುವ ದೃಶ್ಯಗಳು ಅಸಭ್ಯವಾಗಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಕೇಳಿಬಂದಿದೆ. ಈ ವಿವಾದ ಕೇವಲ ಸೋಷಿಯಲ್ ಮೀಡಿಯಾಗೆ ಸೀಮಿತವಾಗದೆ ಕಾನೂನು ಹಂತ ತಲುಪಿದೆ.

ಸೆನ್ಸಾರ್ ಮಂಡಳಿಗೆ ದೂರು

ವಕೀಲ ವಿನೀತ್ ಜಿಂದಾಲ್ ಎಂಬುವವರು ಸೆನ್ಸಾರ್ ಮಂಡಳಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ದೂರು ನೀಡಿದ್ದಾರೆ. ದೆಹಲಿ ಪೊಲೀಸರ ಸೈಬರ್ ಸೆಲ್‌ಗೆ ಪ್ರತ್ಯೇಕ ದೂರು ನೀಡಲಾಗಿದ್ದು, ಅಪ್ರಾಪ್ತ ವಯಸ್ಕರಿಗೂ ಈ ಹಾಡು ಲಭ್ಯವಿರುವುದರಿಂದ ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಕ್ಸೋ ಕಾಯ್ದೆಯಡಿ ಕ್ರಮಕ್ಕೆ ಒತ್ತಾಯಿಸಲಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಈ ಬಗ್ಗೆ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ.

ಹಾಡಿನ ಹಿಂದಿ ಆವೃತ್ತಿ ಡಿಲೀಟ್

ಗಾಯಕ ಅರ್ಮಾನ್ ಮಲಿಕ್, ನಟಿ ಕಂಗನಾ ರಣಾವತ್ ಮತ್ತು ಕ್ರಿಕೆಟಿಗ ಹರ್ಭಜನ್ ಸಿಂಗ್ ಸೇರಿದಂತೆ ಹಲವು ಗಣ್ಯರು ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ ಸಾಹಿತ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತೀವ್ರ ವಿರೋಧದ ಹಿನ್ನೆಲೆಯಲ್ಲಿ ಮಾರ್ಚ್ 17ರಂದು ಹಾಡಿನ ಹಿಂದಿ ಆವೃತ್ತಿಯನ್ನು ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿದೆ. ಹಿಂದಿ ವರ್ಷನ್ ಡಿಲೀಟ್ ಆಗಿದ್ದರೂ ಕೂಡ ಕನ್ನಡ ಸೇರಿದಂತೆ ಇತರ ದಕ್ಷಿಣ ಭಾರತದ ಭಾಷೆಗಳಲ್ಲಿನ ಈ ಹಾಡುಗಳು ಇನ್ನೂ ಲಭ್ಯವಿದೆ. ಅವುಗಳನ್ನೂ ಯಾವಾಗ ತೆಗೆದುಹಾಕಲಾಗುತ್ತದೆ ಎಂಬ ಕುತೂಹಲ ಮೂಡಿದೆ.

ಕರ್ನಾಟಕ ಮಹಿಳಾ ಆಯೋಗ ಪತ್ರ

ಇನ್ನು ಹಾಡು ವಿವಾದಕ್ಕೆ ಗುರಿ ಆಗಿ ವ್ಯಾಪಕ ಚರ್ಚೆಗೀಡಾರುವಂತೆಯೇ ಕರ್ನಾಟಕ ಮಹಿಳಾ ಆಯೋಗ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಸೆನ್ಸಾರ್ ಮಂಡಳಿಗೆ ಪತ್ರ ಬರೆದಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು, 'ಹೆಣ್ಮಕ್ಕಳು ಅನುಭವಿಸುತ್ತಿರುವ ಪರಿಸ್ಥಿತಿ ಬಹಳ ಕಷ್ಟ ಇದೆ. ಇಂಥ ಹಾಡುಗಳು ಬಂದರೆ ಇನ್ನೂ ಹಗುರವಾಗಿ ಮಾತನಾಡಲು ಶುರು ಮಾಡುತ್ತಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಸೆನ್ಸಾರ್ ಮಂಡಳಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇವೆ. ಆ ಹಾಡನ್ನು ಕೇಳಲು ನನಗೆ ಸಾಧ್ಯವಾಗಲಿಲ್ಲ. ಆರಂಭದ ಕೆಲವು ಸಾಲುಗಳನ್ನು ಕೇಳುವಾಗಲೇ ಮುಜುಗರ ಆಯಿತು’ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಗೆ ತೀವ್ರ ಹಿನ್ನಡೆ: ಇರಾನ್ ವಿರುದ್ಧ ಯುದ್ಧ ವಿರೋಧಿಸಿ ಅಮೆರಿಕದ ಭಯೋತ್ಪಾದನಾ ನಿಗ್ರಹ ಮುಖ್ಯಸ್ಥ ರಾಜೀನಾಮೆ!

ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ?: ಸಂತ್ರಸ್ತೆಯ ಮಗಳ ಮೇಲೂ ಕಣ್ಣು, ಆಡಿಯೋ-ವಿಡಿಯೋ ವೈರಲ್..! ಅಮಾನತು

'ಸಚಿವರೇ ಇಲ್ಲ.. ಏನ್ ಮಾಡ್ಬೇಕು..?' ಆಗ ಯುಟಿ ಖಾದರ್, ಈಗ ಹೊರಟ್ಟಿ..: ಅಧಿವೇಶನಕ್ಕೆ ಗೈರು ಕುರಿತು ಪರಿಷತ್ ಸಭಾಪತಿ ಅಸಮಾಧಾನ!

ಬಂಗಾಳ ಚುನಾವಣೆ: 291 ಸ್ಥಾನಗಳಲ್ಲಿ ಮಾತ್ರ TMC ಸ್ಪರ್ಧೆ; ಉಳಿದ ಸ್ಥಾನಗಳ ಕಥೆ ಏನು?

Bengaluru Rain: ಯುಗಾದಿ ಮುನ್ನವೇ ಬೆಂಗಳೂರಿನಲ್ಲಿ ಗಾಳಿ ಸಹಿತ ಆಲಿಕಲ್ಲು ಮಳೆ; 3-4 ದಿನ ವರ್ಷಧಾರೆ ಸಾಧ್ಯತೆ!

SCROLL FOR NEXT