ನಟಿ ಚೈತ್ರಾ ಜೆ ಅಚಾರ್ 
ಸಿನಿಮಾ ಸುದ್ದಿ

ಚೈತ್ರಾ ಜೆ ಆಚಾರ್‌ಗೆ ಅಶ್ಲೀಲ ಮೆಸೇಜ್: ಪೋಸ್ಟ್ ವೈರಲ್; ಕ್ರಮಕ್ಕೆ ನಟಿ ಆಗ್ರಹ

ಪೊಲೀಸಿಂಗ್ ಮಾಡುವ ಬದಲು ಈ ವ್ಯಕ್ತಿ ಮೋರಲ್ ಪೋಲಿಸಿಂಗ್ ಮಾಡುತ್ತಿರುವಂತಿದೆ. ಅಗತ್ಯ ಕ್ರಮ ಕೈಗೊಳ್ಳಿ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

ಬೆಂಗಳೂರು: ಕನ್ನಡ ನಟಿ ಚೈತ್ರಾ ಜೆ ಅಚಾರ್ ಅವರಿಗೆ ಇನ್‌ಸ್ಟಾಗ್ರಾಂ ಮೂಲಕ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶ ಕಳುಹಿಸಿರುವ ಆರೋಪ ಕೇಳಿಬಂದಿದೆ.

ಪೊಲೀಸ್ ಸಿಬ್ಬಂದಿಯ ಫೋಟೋವನ್ನು ಪ್ರೊಫೈಲ್ ಚಿತ್ರವಾಗಿ ಬಳಸಿದ್ದ ಖಾತೆಯಿಂದ ಈ ಅವಹೇಳನಕಾರಿ ಸಂದೇಶ ಬಂದಿದ್ದು, ಈ ಬೆಳವಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

‘ಮಹೇಶ್ ಹೊಸಮನಿ’ (hosamani53) ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಿಂದ ನಟಿಗೆ ಅವಾಚ್ಯ ಸಂದೇಶ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಆ ಖಾತೆಯಲ್ಲಿ ಪೊಲೀಸ್ ಸಿಬ್ಬಂದಿಯ ಫೋಟೋವನ್ನು ಪ್ರೊಫೈಲ್ ಪಿಕ್ಚರ್ ಆಗಿ ಬಳಸಿರುವುದು ಕಂಡು ಬಂದಿದೆ.

ಈ ಕುರಿತು ನಟಿ ಚೈತ್ರಾ ಜೆ ಆಚಾರ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸಂದೇಶದ ಸ್ಕ್ರೀನ್‌ಶಾಟ್ ಹಂಚಿಕೊಂಡು ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದರು.

ಪೊಲೀಸಿಂಗ್ ಮಾಡುವ ಬದಲು ಈ ವ್ಯಕ್ತಿ ಮೋರಲ್ ಪೋಲಿಸಿಂಗ್ ಮಾಡುತ್ತಿರುವಂತಿದೆ. ಅಗತ್ಯ ಕ್ರಮ ಕೈಗೊಳ್ಳಿ, ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

ಈ ಪೋಸ್ಟ್ ವೈರಲ್ ಆದ ಬಳಿಕ, ಸಂದೇಶ ಕಳುಹಿಸಿದ್ದ ವ್ಯಕ್ತಿ ನಟಿಗೆ ಕ್ಷಮೆ ಕೇಳಿರುವುದಾಗಿ ತಿಳಿದುಬಂದಿದೆ.

ಬಳಿಕ ಚೈತ್ರಾ ಮತ್ತೊಂದು ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದು, ಸ್ಕ್ರೀನ್‌ಶಾಟ್'ನಲ್ಲಿ “ಇದರಿಂದ ನನ್ನ ವೃತ್ತಿಜೀವನಕ್ಕೆ ತೊಂದರೆಯಾಗಬಹುದು, ದಯವಿಟ್ಟು ಪೋಸ್ಟ್ ತೆಗೆದುಹಾಕಿ” ಎಂದು ಆತ ಮನವಿ ಮಾಡಿದ್ದಾನೆ ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ನಟಿ, ನನ್ನ ವೃತ್ತಿಜೀವನದ ಬಗ್ಗೆ ಮಾತನಾಡುವಾಗ ಅವರಿಗೆ ಯಾವುದೇ ಸಮಸ್ಯೆ ಕಾಣುವುದಿಲ್ಲ. ಆದರೆ, ಅವರ ವಿಚಾರ ಬಂದಾಗ ಮಾತ್ರ ನಿಯಮಗಳು ಬದಲಾಗುತ್ತವೆಯೇ? ಎಂದು ಪ್ರಶ್ನಿಸಿದ್ದಾರೆ.

ಘಟನೆ ಬೆಳಕಿಗೆ ಬಂದ ನಂತರ ಮಹೇಶ್ ಹೊಸಮನಿ ಹೆಸರಿನ ಇನ್‌ಸ್ಟಾಗ್ರಾಂ ಖಾತೆ ಅಳಿಸಲಾಗಿದ್ದು, ನಟಿಯೂ ತಮ್ಮ ಸ್ಟೋರಿಗಳನ್ನು ತೆಗೆದುಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಯೊಬ್ಬರು, ಇನ್ನೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ.

ದೂರು ಬಂದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಅಶ್ಲೀಲ ಸಂದೇಶ ಬಂದ ಇನ್‌ಸ್ಟಾಗ್ರಾಂ ಖಾತೆ ನಿಜವಾಗಿಯೂ ಪೊಲೀಸ್ ಸಿಬ್ಬಂದಿಯದ್ದೇ ಆಗಿತ್ತೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸದ್ಯದಲ್ಲೇ ಮೋದಿ ಸಂಪುಟ ಪುನರ್ ರಚನೆ: ಅಮಿತ್ ಶಾಗೆ ಉಪ ಪ್ರಧಾನಿ ಪಟ್ಟ? ವರದಿಗಳು

ಶ್ರೀರಂಗಪಟ್ಟಣದಲ್ಲಿ ಬೃಹತ್ ಭೂ ಹಗರಣ: ಬರೋಬ್ಬರಿ 200 ಎಕರೆ ಸರ್ಕಾರಿ ಭೂಮಿ ಕಬಳಿಸಲು ನಕಲಿ ದಾಖಲೆ ಸೃಷ್ಟಿ; 9 ಜನರ ಬಂಧನ!

ಆಗ್ರಾ: ಸೋನಂ, ಸಿಯಾ ಆಯ್ತು, ಈಗ ರೂಬಿ; ಪತಿಯನ್ನು ಕೊಂದು, ಶವವನ್ನು ಬಾತ್ ರೂಂನ ಟೈಲ್ಸ್ ಕೆಳಗೆ ಹೂತು ಹಾಕಿದ್ದ ಮಹಿಳೆಯ ಬಂಧನ!

ಘೋರ ದುರಂತ: ಬಾವಿಗೆ ಬಿದ್ದ ಹೋರಿ ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂವರು ದಾರುಣ ಸಾವು!

Video: ವಿಶ್ವದ ಹಲವು ದೇಶಗಳು ಯುವಕರಿಗೆ ತರಬೇತಿ ನೀಡಲು RSS ಸಹಕಾರ ಕೇಳುತ್ತಿವೆ: ಮೋಹನ್ ಭಾಗವತ್