ಕಾವ್ಯಾ ಶೈವ 
ಸಿನಿಮಾ ಸುದ್ದಿ

BiggBoss ಖ್ಯಾತಿಯ ಕಾವ್ಯಾ ಶೈವಾಗೆ ಅವಮಾನ: ಕಾರ್ಯಕ್ರಮ ಮಧ್ಯದಲ್ಲೇ ನಟಿ ನಿರ್ಗಮನ; ವೇದಿಕೆ ಮೇಲೆ ಭಾರೀ ಹೈಡ್ರಾಮಾ..!

ಕಾರ್ಯಕ್ರಮದ ವೇಳೆ ಉಂಟಾದ ಗದ್ದಲ ಹಾಗೂ ಅಭಿಮಾನಿಗಳೊಂದಿಗೆ ನಡೆದ ತೀವ್ರ ವಾಗ್ವಾದದ ಬಳಿಕ ಕಾವ್ಯಾ ಅವರು ಕಾರ್ಯಕ್ರಮವನ್ನು ಮಧ್ಯದಲ್ಲೇ ಬಿಟ್ಟು ತೆರಳಿದ್ದಾರೆಂದು ತಿಳಿದುಬಂದಿದೆ.

ಕಲಬುರಗಿ: ಕಲಬುರಗಿ ಪಂಡಿತ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಗ್‌ಬಾಸ್ ಸ್ಪರ್ಧಿ ಕಾವ್ಯಾ ಶೈವ ಅವರಿಗೆ ಅವಮಾನ ನಡೆದಿದೆ ಎಂಬ ಆರೋಪವೊಂದು ಕೇಳಿಬಂದಿದೆ.

ಕಾರ್ಯಕ್ರಮದ ವೇಳೆ ಉಂಟಾದ ಗದ್ದಲ ಹಾಗೂ ಅಭಿಮಾನಿಗಳೊಂದಿಗೆ ನಡೆದ ತೀವ್ರ ವಾಗ್ವಾದದ ಬಳಿಕ ಕಾವ್ಯಾ ಅವರು ಕಾರ್ಯಕ್ರಮವನ್ನು ಮಧ್ಯದಲ್ಲೇ ಬಿಟ್ಟು ತೆರಳಿದ್ದಾರೆಂದು ತಿಳಿದುಬಂದಿದೆ.

ಬಿಗ್‌ಬಾಸ್ ಸೀಸನ್ 12 ಮೂಲಕ ಜನಪ್ರಿಯತೆ ಪಡೆದಿರುವ ಕಾವ್ಯಾ ಶೈವ, ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.

ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಖಾಸಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಈ ಕಾರ್ಯಕ್ರಮವೇ ಹೈಡ್ರಾಮಾ ನಡೆದಿದೆ.

ಕಾರ್ಯಕ್ರಮದ ವೇಳೆ ಕಾವ್ಯಾ ಅಭಿಮಾನಿಗಳು ಸೆಲ್ಫಿ ಪಡೆಯಲು ವೇದಿಕೆಗೆ ಹತ್ತುವ ಪ್ರಯತ್ನ ಮಾಡಿದ್ಜು, ಈ ವೇಳೆ ಆಯೋಜಕರು ಕೆಲವರನ್ನು ತಡೆದಿದ್ದಾರೆ. ಇದೇ ವೇಳೆ ಕೆಲ ಅಭಿಮಾನಿಗಳನ್ನೂ ತಳ್ಳಲಾಗಿದ್ದು, ಕಾವ್ಯಾ ಅವರ ಕೈಯಿಂದ ಮೈಕ್ ಕಸಿಯಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಸ್ಥಳದಲ್ಲಿದ್ದ ಕಾವ್ಯಾ ಅವರ ಅಭಿಮಾನಿಗಳು ಹಾಗೂ ಆಯೋಜಕರ ನಡುವೆ ತೀವ್ರ ಗದ್ದಲ ಉಂಟಾಗಿದೆ.

ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಕಾವ್ಯಾ ಅವರು ಕಾರ್ಯಕ್ರಮವನ್ನು ಅರ್ಧದಲ್ಲೇ ಬಿಟ್ಟು ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್