ನೇಹಾ ಫಾತಿಮಾ, ಮೋಹನ್ ಲಾಲ್ 
ಸಿನಿಮಾ ಸುದ್ದಿ

Biggboss Malayalam: ಹಿಂದೂ ಯುವಕನಿಗೆ ಪ್ರಪೋಸ್? ದಯವಿಟ್ಟು ಶೋ ಬಿಟ್ಟು ಬಾ; ವೇದಿಕೆಯಲ್ಲಿ ಪೋಷಕರ ಕಣ್ಣೀರು, Video

'ಬಿಗ್ ಬಾಸ್ ಮಲಯಾಳಂ 8' ಶೋನಲ್ಲಿ ಸ್ಪರ್ಧಿ ನೇಹಾ ಫಾತಿಮಾ ಅವರ ಪೋಷಕರು ವಾರಾಂತ್ಯದ ಸಂಚಿಕೆಯೊಂದರಲ್ಲಿ ಶೋಗೆ ಪ್ರವೇಶಿಸಲಿದ್ದಾರೆ. ರಿಯಾಲಿಟಿ ಶೋ ಅನ್ನು ಅರ್ಧಕ್ಕೆ ತೊರೆದು ಮನೆಗೆ ಮರಳುವಂತೆ ಅವರು ನೇಹಾಗೆ ಒತ್ತಾಯಿಸಿದರು.

'ಬಿಗ್ ಬಾಸ್ ಮಲಯಾಳಂ 8' ಶೋನಲ್ಲಿ ಸ್ಪರ್ಧಿ ನೇಹಾ ಫಾತಿಮಾ ಅವರ ಪೋಷಕರು ವಾರಾಂತ್ಯದ ಸಂಚಿಕೆಯೊಂದರಲ್ಲಿ ಶೋಗೆ ಪ್ರವೇಶಿಸಲಿದ್ದಾರೆ. ರಿಯಾಲಿಟಿ ಶೋ ಅನ್ನು ಅರ್ಧಕ್ಕೆ ತೊರೆಯುವಂತೆ ಅವರು ನೇಹಾಗೆ ಒತ್ತಾಯಿಸಿದರು. ಬಿಗ್ ಬಾಸ್ ಮನೆಯೊಳಗೆ ನೇಹಾ ಫಾತೀಮಾ ಸಂತೋಷ್ ರಾಜ್ ಗೆ ಪ್ರೇಮ ನಿವೇದನೆ (Propose) ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಮುಂಬರುವ ಸಂಚಿಕೆಯ ಪ್ರೋಮೋದಲ್ಲಿ ಮನೆಯೊಳಗೆ ನೇಹಾ ನಡೆದುಕೊಂಡ ರೀತಿ ಬಗ್ಗೆ ಕಳವಳ ವ್ಯಕ್ತಪಡಿಸುವಾಗ ಆಕೆಯ ಪೋಷಕರು ಭಾವುಕರಾಗುತ್ತಾರೆ. ಅಲ್ಲದೆ, ಇತರ ಸ್ಪರ್ಧಿಗಳು ನೇಹಾವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಎಚ್ಚರಿಸಿದರು. ಮುಂಬರುವ ಸಂಚಿಕೆಯ ಟೀಸರ್‌ನಲ್ಲಿ, ನಿರೂಪಕ ಮೋಹನ್‌ಲಾಲ್ ಅವರು ನೇಹಾ ಅವರ ಪೋಷಕರನ್ನು ವೇದಿಕೆಗೆ ಸ್ವಾಗತಿಸುವುದನ್ನು ಕಾಣಬಹುದು. ಮನೆಯೊಳಗೆ ನೇಹಾ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಪ್ರಶ್ನಿಸುವಾಗ ಪೋಷಕರು ಭಾವುಕರಾಗುತ್ತಾರೆ.

ನೇಹಾ, ನಾವು ನೆನಪಿದ್ದೇವಾ? ನಮಗೆ ಅನ್ನಿಸುವುದಿಲ್ಲ, ನಿನಗೆ ನಾವು ನೆನಪಿದ್ದೇವಾ ಎಂದು ಎಂದು ನೇಹಾಳ ತಂದೆ ಪ್ರೋಮೋದಲ್ಲಿ ಕೇಳುತ್ತಾರೆ. ಇನ್ನು ಶೋನಿಂದ ಹೊರಬರುವಂತೆ ಹೇಳಿದರೂ ಆಕೆ ಕೇಳದ್ದಕ್ಕೆ ಆಕೆಯ ತಾಯಿ ಕಣ್ಣೀರು ಹಾಕುತ್ತಾರೆ. ನೇಹಾ ಭಾವನಾತ್ಮಕವಾಗಿ ಹೆಚ್ಚು ಹತ್ತಿರವಾಗುತ್ತಿದ್ದಾಳೆ ಮತ್ತು ಇತರ ಸ್ಪರ್ಧಿಗಳು ಆಕೆಯ ಭಾವನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರಬಹುದು ಎಂದು ತಾಯಿ ಆತಂಕ ವ್ಯಕ್ತಪಡಿಸುತ್ತಾರೆ.

ಟೀಸರ್‌ನ ಕೊನೆಯಲ್ಲಿ, ನೇಹಾಳ ಪೋಷಕರು ಒಂದು ನಿರ್ದಿಷ್ಟ ಮನವಿಯೊಂದಿಗೆ ಬಂದಿರುವುದಾಗಿ ಮೋಹನ್‌ಲಾಲ್ ತಿಳಿಸುತ್ತಾರೆ. ತಾವೂ ಒಬ್ಬ ತಂದೆಯಾಗಿ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಬಲ್ಲೆ ಎಂದು ಹೇಳುವ ಅವರು, "ನಾನೂ ಒಬ್ಬ ಮಗಳ ತಂದೆ. ನೇಹಾವನ್ನು ಮನೆಗೆ ಕರೆದುಕೊಂಡು ಹೋಗಲೇಬೇಕೆಂಬ ದೃಢ ನಿರ್ಧಾರದೊಂದಿಗೆ ಅವರು ಬಂದಿದ್ದಾರೆ ಎಂದು ಹೇಳುತ್ತಾರೆ.

ತಮ್ಮ ಪೋಷಕರ ಮಾತುಗಳನ್ನು ಕೇಳಿ ನೇಹಾ ತೀವ್ರವಾಗಿ ನೊಂದಿರುವುದು ಕಂಡುಬರುತ್ತದೆ. ಆಕೆ ರಿಯಾಲಿಟಿ ಶೋ ಅನ್ನು ತೊರೆದು ಮನೆಗೆ ಹೋಗುತ್ತಾಳೋ ಅಥವಾ ತನ್ನ ಪಯಣವನ್ನು ಮುಂದುವರಿಸುತ್ತಾಳೋ ಎಂಬುದನ್ನು ಕಾದು ನೋಡಬೇಕಿದೆ. ಮುಂದೆ ಏನಾಗುತ್ತದೆ ಎಂಬುದನ್ನು ತಿಳಿಯಲು ವೀಕ್ಷಕರು ಆ ಸಂಚಿಕೆ ಪ್ರಸಾರವಾಗುವವರೆಗೆ ಕಾಯಲೇಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹೆಚ್‌ಡಿಕೆ ನಿವಾಸದಲ್ಲಿ ಮೊಬೈಲ್ ಎಕ್ಸ್‌ಚೇಂಜ್? ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸೀಮಂತ್ ಕುಮಾರ್ ಸಿಂಗ್

'ನಂದಿನಿ ಹಾಲು ದರ 8 ಅಲ್ಲ ಗರಿಷ್ಠ 12 ರೂ ಏರಿಕೆ'; ರೊಚ್ಚಿಗೆದ್ದ ಗ್ರಾಹಕರು, Video Viral

Raptadu School Attack: ಅಪ್ರಾಪ್ತೆಯ ಹಿಂಬಾಲಿಸುತ್ತಿದ್ದ ಭಗ್ನಪ್ರೇಮಿ, ಪ್ರೀತಿ ತಿರಸ್ಕರಿಸಿದ್ದಕ್ಕೆ ಕತ್ತು ಸೀಳಿ ಭೀಕರ ಹಲ್ಲೆ!

'ಯಾಕೋ ಇಷ್ಟೋಂದ್ ಖಾರಾ ಹಾಕಿದ್ದೀಯಾ': ಫಾಸ್ಟ್‌ಫುಡ್ ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ, ಮೂವರ ವಿರುದ್ಧ FIR

ಪಂಜಾಬ್ ಚುನಾವಣೆಗೂ ಮುನ್ನ ಆಪ್‌ಗೆ ಹಿನ್ನಡೆ: ಪಕ್ಷ ತೊರೆದ ಇಬ್ಬರು ಶಾಸಕರು, ಬಿಜೆಪಿಗೆ ಸೇರ್ಪಡೆ ಸಾಧ್ಯತೆ!