'ಯಾಕೋ ಇಷ್ಟೋಂದ್ ಖಾರಾ ಹಾಕಿದ್ದೀಯಾ': ಫಾಸ್ಟ್‌ಫುಡ್ ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ, ಮೂವರ ವಿರುದ್ಧ FIR

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡತೊಗೂರಿನಲ್ಲಿ ನಡೆದಿದ್ದು, ನೂಡಲ್ಸ್ ಹೆಚ್ಚು ಖಾರವಾಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಮೂವರು ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಗಳು ಫಾಸ್ಟ್‌ಫುಡ್ ಅಂಗಡಿ ಸಿಬ್ಬಂದಿ ಮೇಲೆ ಮನಬಂದಂತೆ ಹಲ್ಲೆ..
Noodles Too Spicy, 3 Men Thrash Fast-Food Shop Staff In Bengaluru
ನೂಡಲ್ಸ್ ಖಾರದ ವಿಚಾರಕ್ಕೆ ಗಲಾಟೆ
Updated on: 

ಬೆಂಗಳೂರು: ಬೆಂಗಳೂರಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಫಾಸ್ಟ್ ಫುಡ್ ಅಂಗಡಿ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡತೊಗೂರಿನಲ್ಲಿ ನಡೆದಿದ್ದು, ನೂಡಲ್ಸ್ ಹೆಚ್ಚು ಖಾರವಾಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಮೂವರು ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಗಳು ಫಾಸ್ಟ್‌ಫುಡ್ ಅಂಗಡಿ ಸಿಬ್ಬಂದಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಗುರುವಾರ ನಡೆದ ಈ ಘಟನೆಯಲ್ಲಿ ಅಸ್ಸಾಂ ಮೂಲದ ಮೂವರು ಸಿಬ್ಬಂದಿ ಗಾಯಗೊಂಡಿದ್ದು, ಕರ್ನಾಟಕದ ಚಾಮರಾಜನಗರ ಜಿಲ್ಲೆಯವರಾದ ನಾಗರಾಜ್, ಚಂದ್ರು ಮತ್ತು ದೇವರಾಜ್ ಎಂಬುವವರು ಹಲ್ಲೆ ನಡೆಸಿದ ಆರೋಪಿಗಳು ಎಂದು ಗುರುತಿಸಲಾಗಿದೆ.

Noodles Too Spicy, 3 Men Thrash Fast-Food Shop Staff In Bengaluru
Hit and run ಕೇಸ್: Mother Promise, ಅಪಘಾತವಾಗಿದ್ದೇ ಗೊತ್ತಿರಲಿಲ್ಲ ಎಂದ Youtuber ನಿಖಿಲ್; Video ವೈರಲ್

ನೂಡಲ್ಸ್ ಖಾರಕ್ಕೆ ಶುರುವಾದ ಜಗಳ!

ದೊಡ್ಡತೊಗೂರಿನ ರಸ್ತೆಯ ಬದಿಯಲ್ಲಿರುವ ಫಾಸ್ಟ್‌ಫುಡ್ ಅಂಗಡಿಗೆ ಬಂದಿದ್ದ ಆರೋಪಿಗಳು ನೂಡಲ್ಸ್ ಆರ್ಡರ್ ಮಾಡಿದ್ದರು. ಆದರೆ ನೂಡಲ್ಸ್ ತುಂಬಾ ಖಾರವಾಗಿದೆ ಎಂದು ಆಕ್ಷೇಪಿಸಿ ಅಂಗಡಿ ಸಿಬ್ಬಂದಿಯೊಂದಿಗೆ ಜಗಳ ಆರಂಭಿಸಿದ್ದಾರೆ. ಈ ವೇಳೆ ಆರೋಪಿಗಳು ಮದ್ಯದ ಅಮಲಿನಲ್ಲಿದ್ದರು ಎನ್ನಲಾಗಿದೆ.

ಆರಂಭದಲ್ಲಿ ಮಾತಿನ ಚಕಮಕಿಯಿಂದ ಶುರುವಾದ ಜಗಳ ಕೆಲವೇ ಕ್ಷಣಗಳಲ್ಲಿ ವಿಕೋಪಕ್ಕೆ ತಿರುಗಿದೆ. 3 ಆರೋಪಿಗಳು ಅಂಗಡಿ ಸಿಬ್ಬಂದಿಯನ್ನು ಕೆಳಕ್ಕೆ ತಳ್ಳಿ, ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾರೆ. ಪದೇಪದೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಡಿಸಲು ಬಂದ ವ್ಯಕ್ತಿಗೂ ಥಳಿತ!

ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡು ಸ್ಥಳೀಯ ವ್ಯಕ್ತಿಯೊಬ್ಬರು ಜಗಳ ಬಿಡಿಸಲು ಮುಂದಾಗಿದ್ದಾರೆ. ಆದರೆ ಆರೋಪಿಗಳು ಆತನನ್ನೂ ಬೆನ್ನಟ್ಟಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋಗಳು ಇದೀಗ ಘಟನೆಗೆ ಸಂಬಂಧಿಸಿದಂತೆ ಗಮನ ಸೆಳೆದಿವೆ.

Noodles Too Spicy, 3 Men Thrash Fast-Food Shop Staff In Bengaluru
ಮೈಸೂರು: ಯೂಟ್ಯೂಬರ್ ಮಧು ಗೌಡ ಪತಿ ವಿರುದ್ಧ ಹಿಟ್ & ರನ್ ಆರೋಪ; ಪ್ರಕರಣ ದಾಖಲು, ಕಾರು ಸೀಜ್ !

ಅಸ್ಸಾಂ ಮೂಲದ ಮೂವರು ಸಿಬ್ಬಂದಿ ಮೇಲೆ ಹಲ್ಲೆ

ಹಲ್ಲೆಗೊಳಗಾದವರನ್ನು ಅಸ್ಸಾಂ ಮೂಲದ ದೀಪಕ್ ಥಾಪಾ, ಹೇಮಾ ಮತ್ತು ಲಕ್ಷ್ಮಿ ಲಾಮಾ ಎಂದು ಗುರುತಿಸಲಾಗಿದೆ. ಇವರ ಮೇಲೆ ನಾಗರಾಜ್, ಚಂದ್ರು ಮತ್ತು ದೇವರಾಜ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X